ಕುತೂಹಲದಿಂದ ಕಾಯುತ್ತಿರುವ IND vs PAk ವಿಶ್ವಕಪ್ ಪಂದ್ಯ ಅಕ್ಟೋಬರ್ 15 ನಡೆಯಲ್ಲ : ಕಾರಣ ಇಲ್ಲಿದೆ

IND vs PAk : ಅಕ್ಟೋಬರ್ 15 ರಂದು ಅಹಮದಾಬಾದ್‌ನ (India Pakistan WorldCup match) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿರುವ ಭಾರತ

ಮತ್ತು ಪಾಕಿಸ್ತಾನ ಐಸಿಸಿ ಏಕದಿನ ವಿಶ್ವಕಪ್ 2023 (ICC ODI World Cup 2023)ಪಂದ್ಯವನ್ನು ಬಹುತೇಕ ಮುಂದೂಡುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಮಾಡಲಾಗುತ್ತಿದೆ. ಏಕೆಂದರೆ ನವರಾತ್ರಿಯ

ಮೊದಲ ದಿನದಂದು ಅಂದರೆ ಅಕ್ಟೋಬರ್ 15 ರಂದು ಪಂದ್ಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಗದಿಪಡಿಸಿರುವ ಕಾರಣ ಈ ಮನವಿ ಮಾಡಲಾಗಿದೆ.

ಉತ್ತರ ಭಾರತದಲ್ಲಿ (North India), ಅದರಲ್ಲೂ ಗುಜರಾತ್‌ನಾದ್ಯಂತ (Gujarat) ಸಾಕಷ್ಟು ಜನ ನವರಾತ್ರಿಯ (Navaratri) ಮೊದಲ ದಿನವನ್ನು ರಾತ್ರಿಯಿಡಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ ಅಲ್ಲದೆ

ಅಂದು ರಜಾದಿನ ಇರಲಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನದ(Pakistan) ನಡುವೆ ಪಂದ್ಯವನ್ನು ಆ ದಿನವೇ ನಡೆಸಿದರೆ, ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರು ಮೈದಾನಕ್ಕೆ ಬರಲಿದ್ದಾರೆ. ಹೀಗಾಗಿ ಪಂದ್ಯ ನಡೆಯುವ

ವೇಳೆಯಲ್ಲಿ ವೇಳೆ ಭದ್ರತೆ ಒದಗಿಸುವುದು ಸ್ವಲ್ಪ ಕಷ್ಟಕರವಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿಯನ್ನು ಮಾರ್ಪಡಿಸುವಂತೆ ಭದ್ರತಾ ಏಜೆನ್ಸಿಗಳು ಬಿಸಿಸಿಐಗೆ (BCCI) ಕೇಳಿಕೊಂಡಿವೆ ಎಂದು

ವರದಿಯಾಗಿದೆ.

ಇದನ್ನೂ ಓದಿ : ಸಾಲ ಮರುಪಾವತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಬೇಡ, ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಸೂಚನೆ : ನಿರ್ಮಲ ಸೀತಾರಾಮನ್‌

ಈ ಪಂದ್ಯವನ್ನು ವೀಕ್ಷಿಸಲು ಈಗಾಗಲೇ ಅಭಿಮಾನಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಹಮದಾಬಾದ್‌ನ ಎಲ್ಲಾ ಐಷಾರಾಮಿ ಹೋಟೆಲ್‌ಗಳು ಅಕ್ಟೋಬರ್ (October) 15ರಂದು ಬುಕ್ ಆಗಿವೆ. ಹೋಟೆಲ್ ರೂಂ

ಲಕ್ಷ ಲಕ್ಷ ಹಣ ಕೊಟ್ಟು ಬುಕ್ ಆಗಿವೆ. ಟಿಕೆಟ್(Ticket) ಇನ್ನೂ ಕೂಡ ಮಾರಾಟ ಆಗಿಲ್ಲವಾದರೂ ಈ ಮಟ್ಟದ ಕ್ರೇಜ್ (Craze) ಈ ಪಂದ್ಯಕ್ಕಿದೆ. ಆದರೆ ಈಗ ಅಭಿಮಾನಿಗಳಿಗೆ ದಿನಾಂಕ ಬದಲಾವಣೆ ಮಾಡಿದರೆ,

ನಿರಾಸೆಯಾಗಲಿದೆ.

ಒಂದು ವೇಳೆ ಹೊಸ ದಿನಾಂವು ಭಾರತ-ಪಾಕಿಸ್ತಾನ ಆಟಕ್ಕೆ ಘೋಷಣೆಯಾದರೆ, ಈಗಾಗಲೇ ಬುಕ್ ಆಗಿರುವ ಹೋಟೆಲ್‌ಗಳು ಕ್ಯಾನ್ಸಲ್ ಆಗಲಿದ್ದು, ಹೋಟೆಲ್ ಬುಕಿಂಗ್ ಅನ್ನು ಹೊಸ ದಿನಾಂಕದಲ್ಲಿ ಮಾಡಲು

ಮುಗಿ ಬೀಳುವ (India Pakistan WorldCup match) ಸಾಧ್ಯತೆ ಇದೆ.

ನವರಾತ್ರಿಯಿಂದ ಭದ್ರತೆ ಸಮಸ್ಯೆ

ಇನ್ನು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ ” ಬದಲೀ ಆಯ್ಕೆಗಳನ್ನು ಈಗಾಗಲೇ ಪರಿಗಣಿಸಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು” ವರದಿ ಆಗಿದೆ.

ಭಾರತ ಮತ್ತು ಪಾಕಿಸ್ತಾನದಂತಹ ಉನ್ನತ ಮಟ್ಟದ ಪಂದ್ಯವನ್ನು ನವರಾತ್ರಿ ಕಾರಣ ಭದ್ರತಾ ದೃಷ್ಟಿಯಿಂದ ನಡೆಸದಂತೆ ಭದ್ರತಾ ಏಜೆನ್ಸಿಗಳು ಸಲಹೆ ನೀಡಿವೆ ಎಂದರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ 4 ಪಂದ್ಯಗಳು

ಏಕದಿನ ವಿಶ್ವಕಪ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದೆ. ನ್ಯೂಜಿಲೆಂಡ್ (Newzealand) ಮತ್ತು ಇಂಗ್ಲೆಂಡ್ (England)ತಂಡಗಳು ಮುಖಾಮುಖಿಯಾಗುವ

ಮೂಲಕ ಇಲ್ಲಿಯೇ ಪಂದ್ಯಾವಳಿಯ ಆರಂಭಿಕ ಪಂದ್ಯ ಕೂಡ ನಡೆಯಲಿದೆ. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ (Australlia) ಪಂದ್ಯಗಳು ಮತ್ತು ಭಾರತ ವಿರುದ್ಧ ಪಾಕಿಸ್ತಾನ ಪಂದ್ಯಗಳು ನಡೆಯಲಿದ್ದು ಇದೇ

ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಕೂಡ ನಡೆಯಲಿದೆ.ಈ ಕ್ರೀಡಾಂಗಣದಲ್ಲಿ ಒಟ್ಟು 1.30 ಲಕ್ಷ ಆಸನ ಸಾಮರ್ಥ್ಯ ಹೊಂದಿದ್ದು, ದಾಖಲೆಯ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ಟ್ವಿಟರ್ ಹಕ್ಕಿಗೆ ವಿದಾಯ: ಟ್ವೀಟರ್‌ ಲೋಗೋ ಬದಲಾಯಿಸಿ ಹೊಸ ಹೆಸರು ರೀಬ್ರ್ಯಾಂಡ್ ಮಾಡಲು ಎಲನ್ ಮಸ್ಕ್ ಪ್ಲ್ಯಾನ್

ಭಾರತದ ಹತ್ತು ನಗರಗಳಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಮುಂಬೈ (Mumbai) ಮತ್ತು ಕೋಲ್ಕತ್ತಾ (Kolkata) ನಗರಗಳಲ್ಲಿ ಸೆಮಿಫೈನಲ್‌ (Semefinal) ಪಂದ್ಯಗಳು ನಡೆಯಲಿವೆ.ಜುಲೈ 27 ರಂದು

ನವದೆಹಲಿಯಲ್ಲಿ (New Delhi) ನಡೆಯಲಿರುವ ಸಭೆಗೆ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಸಂಸ್ಥೆಗಳಿಗೆ ಆಹ್ವಾನ ಪತ್ರವನ್ನು ಮಂಗಳವಾರ ಸಂಜೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರು

ಕಳುಹಿಸಿದ್ದಾರೆ. ಪಂದ್ಯದ ಪರಿಷ್ಕೃತ ದಿನಾಂಕ ಮತ್ತು ಅಹಮದಾಬಾದ್ ಪ್ರದೇಶದಲ್ಲಿನ ಭದ್ರತಾ ಸಮಸ್ಯೆಗಳನ್ನು ಮಂಡಳಿಯು ಸದಸ್ಯರಿಗೆ ತಿಳಿಸಬಹುದು ಎಂದು ಕೇಳಲಾಗಿದೆ.

ರಶ್ಮಿತಾ ಅನೀಶ್

Exit mobile version