ಭಾರತದಿಂದ ಬ್ಯಾಂಕಾಕ್‌ಗೆ ಶೀಘ್ರದಲ್ಲಿಯೇ ಹೆದ್ದಾರಿ : ಥೈಲ್ಯಾಂಡ್‌ಗೆ ಈ ಹೆದ್ದಾರಿ ಶಾರ್ಟ್‌ಕಟ್‌

ವಿದೇಶಕ್ಕೆ ಹೋಗಲು ನಿಮ್ಮ ಜೇಬಿನಲ್ಲಿ ಸಾಕಷ್ಟು ಹಣ, ಪಾಸ್ಪೋರ್ಟ್ (India to Bangkok highway), ವೀಸಾ ಇರಲೇಬೇಕು ಆಗ ಮಾತ್ರ ನೀವು ವಿಮಾನದ ಮೂಲಕ ಹಾರಾಡಿ ವಿದೇಶವನ್ನು ತಲುಪಬಹುದು.

ನೀರು ಮತ್ತು ರಸ್ತೆಯ ಮೂಲಕ ನೀವು ಕೆಲವು ದೇಶಗಳನ್ನು ಮಾತ್ರ ತಲುಪಬಹುದು. ಈ ದೇಶಗಳ ಪೈಕಿ ಈಗ ಥಾಯ್ಲೆಂಡ್ (Thailand) ಕೂಡ ಪ್ರತ್ಯೇಕಗೊಳ್ಳಲಿದೆ.

ಅಂದಹಾಗೆ, ಪ್ರಪಂಚದಾದ್ಯಂತ ಜನರು ಒಮ್ಮೆ ಥೈಲ್ಯಾಂಡ್‌ಗೆ ಪ್ರಯಾಣಿಸಲು ಇಷ್ಟಪಡುತ್ತಾರೆ. ಮನರಂಜನೆ, ವಿನೋದ, ರಾತ್ರಿಜೀವನ, ಶಾಪಿಂಗ್, ಮತ್ತು ಥಾಯ್ ಆಹಾರಕ್ಕಾಗಿ

ಈ ದೇಶವು ಬಹಳ ಜನಪ್ರಿಯವಾಗಿದೆ. ಇಲ್ಲಿರಲು ನಿಮ್ಮ ಬಳಿ ಸಾಕಷ್ಟು ಹಣ ಇರಬೇಕೆಂದು ನಿಮಗೆ ತಿಳಿದಿದೆ. ಆದರೆ ಇನ್ನು ಮುಂದೆ ಹಾರಾಟದ ಜೊತೆಗೆ ಹೆದ್ದಾರಿಯ ಮೂಲಕವೂ ತಲುಪಬಹುದು

ಎಂದು ನಿಮಗೆ ತಿಳಿದಿದೆಯೇ? ಅದು ಕೂಡ ಕೋಲ್ಕತ್ತಾದಿಂದ (Kolkota)…….ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಿಂದ ಬ್ಯಾಂಕಾಕ್‌ಗೆ ಹೆದ್ದಾರಿ

ಹೌದು, ನೀವು ಭಾರತದಿಂದ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ಗೆ (Bangkok) ಹೆದ್ದಾರಿ ಮೂಲಕ ಪ್ರಯಾಣಿಸಬಹುದು. ಶೀಘ್ರದಲ್ಲೇ ಭಾರತದಿಂದ ಬ್ಯಾಂಕಾಕ್‌ಗೆ ಹೆದ್ದಾರಿ ನಿರ್ಮಿಸುವ ಯೋಜನೆ ಇದೆ.

ಮುಂದಿನ ಕೆಲವು ವರ್ಷಗಳಲ್ಲಿ ಕೋಲ್ಕತ್ತಾವನ್ನು ಬ್ಯಾಂಕಾಕ್‌ಗೆ ರಸ್ತೆಯ ಮೂಲಕ ಸಂಪರ್ಕಿಸಲಾಗುವುದು ಎಂದು ಹೇಳಲಾಗುತ್ತದೆ. ಅಲ್ಲದೆ ಈ ಎಕ್ಸ್‌ಪ್ರೆಸ್‌ವೇ (Express Way) ಸುಮಾರು

4 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಈ ಅಂತಾರಾಷ್ಟ್ರೀಯ ಹೆದ್ದಾರಿ ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿ (India to Bangkok highway) ಇಲ್ಲಿದೆ…

ಇದನ್ನು ಓದಿ: ರಾಜ್ಯದಲ್ಲಿ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳ : ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಬಗ್ಗೆಯೂ ಸಿಕ್ಕಿದೆ ಸುಳಿವು

ಕೋಲ್ಕತ್ತಾದಿಂದ ಬ್ಯಾಂಕಾಕ್‌ ಹೆದ್ದಾರಿಯ ಪ್ರಮುಖ ವಿಷಯಗಳು

ಕೋಲ್ಕತ್ತಾ ಮತ್ತು ಬ್ಯಾಂಕಾಕ್ ನಡುವೆ ನಿರ್ಮಾಣವಾಗಲಿರುವ ಈ ಹೆದ್ದಾರಿ ಹಲವು ದೇಶಗಳು ಮತ್ತು ರಾಜ್ಯಗಳ ಮೂಲಕ ಹಾದು ಹೋಗಲಿದೆ. ಅನುಕೂಲಕರ ಪ್ರಯಾಣದ ಅನುಭವವನ್ನು

ಈ ಮಾರ್ಗ ಹೆಚ್ಚಿಸಲಿದೆ. ಜನರು ಒಂದೆಡೆಯಿಂದ ಮತ್ತೊಂದೆಡೆಗೆ ವ್ಯಾಪಾರ ಮಾಡಲು ಈ ತ್ರಿಪಕ್ಷೀಯ ಹೆದ್ದಾರಿ ನಿರ್ಮಾಣದಿಂದ ಅನುಕೂಲವಾಗಲಿದೆ. ಹೆದ್ದಾರಿಯ ಕೆಲವು ಭಾಗಗಳ ಕೆಲಸ ಇನ್ನೂ ನಡೆಯುತ್ತಿದೆ.

ಯಾವೆಲ್ಲಾ ದೇಶಗಳ ಮೂಲಕ ಈ ಹೆದ್ದಾರಿಹಾದು ಹೋಗುತ್ತದೆ?

ಕೋಲ್ಕತ್ತಾದಿಂದ ಬ್ಯಾಂಕಾಕ್‌ಗೆ ಸಂಪರ್ಕಿಸುವ ಈ ಹೆದ್ದಾರಿಯು ಬ್ಯಾಂಕಾಕ್‌ನಿಂದ ಪ್ರಾರಂಭವಾಗಿ ಮ್ಯಾನ್ಮಾರ್‌ನ ಕಲೇವಾ, ಮ್ಯಾಂಡಲೆ, ತಮು, ಯಾಂಗೋನ್ ಮುಂತಾದ ಅನೇಕ ದೇಶಗಳ ಮೂಲಕ ಹಾದು ಹೋಗುತ್ತದೆ.

ಒಟ್ಟು 2,800 ರಿಂದ 2,820 ಕಿ.ಮೀ ಮಾರ್ಗವನ್ನು ಹೊಂದಿರುವ ಈ ಹೆದ್ದಾರಿಯು ಅಂದ ಹಾಗೆ ಭಾರತದಿಂದ ಶ್ರೀರಾಮಪುರ,ಮೋರೆ,ಕೊಹಿಮಾ,ಗುವಾಹಟಿ, ಕೋಲ್ಕತ್ತಾ ಮತ್ತು ಸಿಲಿಗುರಿಯ ಮೂಲಕ ಹಾದುಹೋಗುತ್ತದೆ.

ಬ್ಯಾಂಕಾಕ್‌ಗೆ ಪ್ರವಾಸ ಮಾಡಲು ಈ ಸಮಯ ಬೆಸ್ಟ್

ವರ್ಷವಿಡೀ ಬ್ಯಾಂಕಾಕ್‌ನ ಪ್ರವಾಸವನ್ನು ಕೈಗೊಳ್ಳಬಹುದಾದರೂ ಕೆಲವು ತಿಂಗಳುಗಳು ಮಾತ್ರ ಅತ್ಯುತ್ತಮ ಎನ್ನಲಾಗುತ್ತದೆ. ಹೌದು, ಮಾರ್ಚ್‌ನಿಂದ ಜೂನ್‌ವರೆಗೆ ಮತ್ತು ಜುಲೈನಿಂದ

ಅಕ್ಟೋಬರ್‌ವರೆಗೆ ಬ್ಯಾಂಕಾಕ್‌ನಲ್ಲಿ ಮಳೆಗಾಲದ ಋತುಮಾನವಾಗಿರುತ್ತದೆ.

ನವೆಂಬರ್‌ನಿಂದ ಫೆಬ್ರವರಿವರೆಗೆ ಹಾಗೆಯೇ ಚಳಿಗಾಲ ಇರುತ್ತದೆ. ಇಲ್ಲಿಗೆ ಭೇಟಿ ನೀಡಲು ಚಳಿಗಾಲವು ಉತ್ತಮ ಸಮಯ ಎಂದು ಪರಿಗಣಿಸಲಾಗಿದೆ. ಒಟ್ಟಾರೆ ಬೇಸಿಗೆ ಹಾಗು ಮಳೆಗಾಲವನ್ನು

ಹೊರತುಪಡಿಸಿ ಚಳಿಗಾಲದಲ್ಲಿ ಆಹ್ಲಾದಕರವಾದ ಪ್ರವಾಸ ಅನುಭವ ಪ್ರವಾಸ ಯೋಜಿಸುವುದರಿಂದ ಪಡೆಯುತ್ತೀರಿ.

ರಶ್ಮಿತಾ ಅನೀಶ್

Exit mobile version