ದ್ವಿತೀಯ ಟೆಸ್ಟ್ ಗೌರವಾನ್ವಿತ ಮೊತ್ತದತ್ತ ಭಾರತ

ಲಂಡನ್, ಆ. 13: ಅತಿಥೇಯ ಇಂಗ್ಲೆಂಡ್  ವಿರುದ್ದ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ಮೊದಲ ದಿನದಾಟದಂತ್ಯಕ್ಕೆ 276 ರನ್ ಗಳಿಸಿ ಗೌರವಾನ್ವಿತ ಮೊತ್ತ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಪ್ರಥಮ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು  276 ರನ್ ಗಳ ಗೌರವಾನ್ವಿತ ಮೊತ್ತ ಕಲೆ ಹಾಕಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಉಪನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಜೋಡಿ ಮೊದಲ ವಿಕೆಟ್ ಗೆ 126 ರನ್ ಗಳ ಜೊತೆಯಾಟದ ಮೂಲಕ ಬೃಹತ್ ಮೊತ್ತ ಕಲೆಹಾಕುವ ಸೂಚನೆಯನ್ನು ನೀಡಿತ್ತು. ಈ ಹಂತದಲ್ಲಿ 83 ರನ್ ಗಳಿಸಿದ ರೋಹಿತ್ ಶರ್ಮಾ ಜೇಮ್ಸ್ ಅಂಡರಸನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಆಗಮಿಸಿದ ಅನುಭವಿ ಚೆತೇಶ್ವರ ಪೂಜಾರ ಕೇವಲ 9 ರನ್ ಗಳಿಸಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ನಂತರ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ 42 ರನ್ ಗಳಿಸಿ ರಾಬಿನ್ ಸನ್ ಗೆ ವಿಕೆಟ್ ಒಪ್ಪಿಸಿ ಅರ್ಧ ಶತಕದಿಂದ ವಂಚಿತರಾದರು.  ದಿನದಾಟದಂತ್ಯಕ್ಕೆ ಕೆ.ಎಲ್ ರಾಹುಲ್ 127 ಹಾಗೂ ಅಜಿಂಕ್ಯಾ ರಹಾನೆ 1 ರನ್ ಗಳಸಿ 2 ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಇಂಗ್ಲಂಡ್ ಪರ ಜೇಮ್ಸ್ ಅಂಡರಸನ್ 2 ಹಾಗೂ ರಾಬಿನ್ ಸನ್ 1 ವಿಕೆಟ್ ಪಡೆದುಕೊಂಡರು.

Exit mobile version