2023ನೇ ಸಾಲಿನ ಭಾರತದ ಟಾಪ್ 20 ಸ್ಟಾರ್ಟ್ಅಪ್ಗಳ ಪಟ್ಟಿ ಪ್ರಕಟ

Bengaluru: 2023ನೇ ಸಾಲಿನ ಭಾರತದ ಟಾಪ್ 20 ಸ್ಟಾರ್ಟ್ಅಪ್ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅವುಗಳ (India top startups list) ಪೈಕಿ 10 ಕಂಪನಿಗಳ ಕೇಂದ್ರ ಕಚೇರಿಗಳು

ಬೆಂಗಳೂರಿನಲ್ಲಿಯೇ ಇರುವುದು ಮತ್ತೊಂದು ವಿಶೇಷ. ಹೀಗಾಗಿ ಐಟಿ-ಬಿಟಿ (IT-BT) ಸಿಟಿ ಬೆಂಗಳೂರು ಸ್ಟಾರ್ಟ್ಅಪ್ಗಳ (Start-ups) ನಗರ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದೆ.

ಲಿಂಕ್ಡಿನ್ ಸಂಸ್ಥೆ 2023 ನೇ ಸಾಲಿನ ಟಾಪ್ 20 ಭಾರತೀಯ ಸ್ಟಾರ್ಟ್ ಅಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗಿ ಬೆಳವಣಿಗೆ, ಉದ್ಯೋಗಾಕಾಂಕ್ಷಿ, ಕ್ಷೇತ್ರದಲ್ಲಿರುವ ಅವಕಾಶಗಳು, ಕಂಪನಿ

ಮತ್ತು ಅದರ ಉದ್ಯೋಗಿಗಳಲ್ಲಿನ ಸದಸ್ಯರ ಪಾಲ್ಗೊಳ್ಳುವಿಕೆಯ ಆಧಾರದ ಮೇಲೆ ಲಿಂಕ್ಡಿನ್ (LinkedIn) ಟಾಪ್ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಇನ್ನು ಈ ಪಟ್ಟಿಯಲ್ಲಿ ಝೆಪ್ಟೋ 1ನೇ ಸ್ಥಾನದಲ್ಲಿದ್ದರೆ, ಬ್ಲೂಸ್ಮಾರ್ಟ್ 2ನೇ ಸ್ಥಾನದಲ್ಲಿದೆ. ಈ ವರ್ಷದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಪ್ರಮುಖ ಉದ್ಯಮವೆಂದರೆ ಎಜುಟೆಕ್.

ಈ ಪೈಕಿ ಗ್ರೋಥ್ ಸ್ಕೂಲ್, ಟೀಚ್ ನೂಕ್, ಆಕ್ಸಿಯೋಜಾಬ್ (Axio Job) ಕಂಪನಿಗಳು ಸ್ಥಾನ ಪಡೆದಿವೆ. ಈ 20 ಸ್ಟಾರ್ಟಪ್ ಗಳಲ್ಲಿ 14 ಹೊಸ ಸ್ಟಾರ್ಟಪ್ ಗಳು ಸೇರ್ಪಡೆಯಾಗಿರುವುದು

ಮತ್ತೊಂದು (India top startups list) ವಿಶೇಷವಾಗಿದೆ.

2023ರ ಭಾರತದ ಟಾಪ್ 20 ಸ್ಟಾರ್ಟ್ಅಪ್ಗಳ ಪಟ್ಟಿ :

  1. ಜೆಪ್ಟೋJeptoe
  2. ಬ್ಲೂಸ್ಮಾರ್ಟ್ (BlueSmart)
  3. ಡಿಟ್ಟೊ ಇನ್ಸುರೆನ್ಸ್ (Ditto Insurance)
  4. ಪಾಕೆಟ್ ಎಫ್ಎಂ(Pocket FM)
  5. ಸ್ಕೈರೂಟ್ ಏರೋಸ್ಪೇಸ್(Skyroot Aerospace)
  6. ಗೋಕ್ವಿಕ್(Goquik)
  7. ಎಫ್ಐ(FI)
  8. ಸ್ಪ್ರಿಂಟೊ(Sprint)
  9. ಸೂಪರ್ಸೋರ್ಸಿಂಗ್(Supersourcing)
  10. ಗ್ರೋಥ್ಸ್ಕೂಲ್(Growthschool)
  11. ಜಾರ್(Jar)
  12. ಶಿಫ್ಟ್(Shift)
  13. ಟೀಚ್ನೂಕ್(Teachnook)
  14. ಸ್ಟಾಕ್ಗ್ರೊ
  15. ಎಕ್ಸ್ಪೊನೆಂಟ್ ಎನರ್ಜಿ (Exponent Energy)
  16. Housr
  17. ಎಕ್ಸಿಯೊಜಾಬ್(Exiojob)
  18. ಟ್ರಾವ್ಕ್ಲಾನ್(Travclan)
  19. ಡಾಟ್ಪೆ
  20. ಫಸಲ್

ಇದನ್ನು ಓದಿ : ವಿಶ್ವ ದಾಖಲೆ: ರೋಹಿತ್ ಶರ್ಮ ಅವರಿಂದ 6 ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ

Exit mobile version