ರಾಹುಲ್‌ ನಾಯಕತ್ವದಲ್ಲಿ ಮೊದಲ ಸೋಲನುಭವಿಸಿದ ಭಾರತ

india cricket

ಪಾರ್ಲ್, ಜ.19- ಪ್ರವಾಸಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ದ 31ರನ್‌ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ  ಏಕದಿನ ಸರಣಿಯಲ್ಲಿ ಆತಿಥೇಯ ತಂಡ 1-0 ಯಿಂದ ಮುನ್ನಡೆ ಸಾಧಿಸಿದೆ.
ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅತಿಥೇಯ ದಕ್ಷಿಣ ಆಫ್ರಿಕಾ  . ಆರಂಭಿಕ ಹಂತದಲ್ಲಿ 68 ರನ್ ಗಳಿಸುವಷ್ಟರಲ್ಲಿ  ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಕ್ಚಿಂಟನ್ ಡೀ ಕಾಕ್ 27, ಜೆ.ಮಲಾನ್ 6 ಹಾಗೂ ಮರ್ಕರಂ 4 ರನ್ ಗಳಿಸಿ ಬೇಗನೆ ಫೆವಿಲಿಯನ್‌ ಸೇರಿಕೊಂಡರು ನಂತರ ನಾಯಕ ತೆಂಬು ಬವುಮಾ ಶತಕ ಹಾಗೂ ವಾಂಡರ್ ಡುಸೇನ್ ಅವರ ಅಜೇಯ 129 ರನ್ ಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಬವುಮಾ 143 ಎಸೆತಗಳಲ್ಲಿ ಎಂಟು ಬೌಂಡರಿ ಬಾರಿಸಿ 110 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಔಟಾದರು.
ಮತ್ತೊಂದೆಡೆ ಡುಸೇನ್ 96 ಎಸೆತಗಳಲ್ಲಿ 9 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಬಾರಿಸಿ ಅಜೇಯ 129 ರನ್ ಬಾರಿಸಿದರು. ಭಾರತ ಪರ  ಬುಮ್ರಾ 2 ಹಾಗೂ ಅಶ್ವಿನ್ ಒಂದು ವಿಕೆಟ್ ಗಳಿಸಿದರು.

ಈ ಗುರಿಯನ್ನು ಬೆನ್ನತ್ತಿದ ಭಾರತ ಆರಂಭಿಕ ಆಟಗಾರ ಕೆಲ್‌ ರಾಹುಲ್‌ ವಿಕೆಟ್‌ ಬಹು ಬೇಗ ಕಳೆದುಕೊಂಡಿತು ಆದರೆ ನಂತರ ಶಿಖರ್‌ ಧವನ್‌ ಜೊತೆಗೂಡಿದ ವಿರಾಟ್‌ ಕೊಹ್ಲಿ ಶಿಖರ್ ಧವನ್ 79 ಹಾಗೂ ವಿರಾಟ್ ಕೊಹ್ಲಿ 51 ರನ್ ಗಳಿಸಿ ಉತ್ತಮ ಜೊತೆಯಾಟ ಆಡಿದರು. ನಾಯಕ ರಾಹುಲ್ ಸೇರಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ತಾಳ್ಮೆ ಮತ್ತು ಉತ್ತಮ ಜತೆಯಾಟವಾಡಲು ವಿಫಲರಾದರು. ರಾಹುಲ್ ನಾಯಕತ್ವ ವಹಿಸಿಕೊಂಡ ಮೊದಲ ಏಕದಿನ ಪಂದ್ಯದಲ್ಲೇ ಸೋಲು ಅನುಭವಿಸಿದರು. ಶಾರ್ದೂಲ್ ಠಾಕೂರ್  ಒಂದೆಡೆ ಏಕಾಂಗಿಯಾಗಿ ನಡೆಸಿದ ಹೋರಾಟ ವ್ಯರ್ಥವಾಯಿತು, ಶಾರ್ದೂಲ್‌ ಅಜೇಯ 50 ರನ್ ಗಳಿಸಿದರು.
ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಸೋಲಿಗೆ ಶರಣಾಯಿತು. ದಕ್ಷಿಣ ಆಫ್ರಿಕಾ ಪರ ಲುಂಗಿ ನಿಗಿಡಿ, ತಬ್ರಾಯಿಜ್ ಹಾಗೂ ಅ್ಯಂಡಿಲೆ ತಲಾ ಎರಡು ವಿಕೆಟ್ ಪಡೆದರು.


Exit mobile version