ಮುಸ್ಲಿಂ ರಾಷ್ಟ್ರಗಳ ಒಕ್ಕೂಟಕ್ಕೆ ಖಡಕ್ ಎಚ್ಚರಿಕೆ ನೀಡಿದ ಭಾರತ!

ಕರ್ನಾಟಕದ ಉಡುಪಿ ಕಾಲೇಜೊಂದರಲ್ಲಿ ಸೃಷ್ಠಿಯಾದ ಹಿಜಾಬ್ ವಿವಾದ ಅಂತರರಾಷ್ಟ್ರೀಯ ವಿಚಾರವಾಗಿರಲಿಲ್ಲ. ಹೀಗೆ ಅಂತರರಾಷ್ಟ್ರೀಯ ಮಾಧ್ಯಮಗಳು ಸುದ್ದಿಯಲ್ಲಿ ಅಲ್ಪ ಸಂಖ್ಯಾತರ ಹಕ್ಕುಗಳನ್ನು ಭಾರತ ಹತ್ತಿಕ್ಕುತ್ತಿದೆೆ ಎನ್ನುವ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸಿದ್ದವು. ಮುಸ್ಲಿಂ ರಾಷ್ಟ್ರಗಳ ಒಕ್ಕೂಟ (Organization of Islamic countries) ಇದು ಒಟ್ಟು 57 ಮುಸ್ಲಿಂ ರಾಷ್ಟ್ರಗಳ ಒಕ್ಕೂಟವಾಗಿರುತ್ತದೆ. ಇದು ಹಿಜಾಬ್ ವಿವಾದದ ಕುರಿತು ಭಾರತದ ನಡೆಯನ್ನು ಖಂಡಿಸುತ್ತೇವೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ “ ಇದು ಭಾರತದ ಆಂತರಿಕ ವಿಚಾರವಾಗಿದ್ದು, ಯಾವುದೇ ವಿಚಾರಗಳು ಭಾರತದ ಸಂವಿಧಾನದಲ್ಲಿ ಒಳಪಟ್ಟಿರುತ್ತದೆ. ಭಾರತವು ಸೌದಿ ಅರೇಬಿಯಾ, ಯು.ಎ.ಇ ಅಂತಹ ಹಲವು ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಈ ರೀತಿ ಆಂತರಿಕ ವಿಚಾರಗಳಿಗೆ ಮೂಗುತೂರಿಸುವುದು ಸರಿಯಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಉತ್ತಮ ಕಾನೂನಿನ ರಕ್ಷಣೆ ಮತ್ತು ಸಂವಿಧಾನ ಮೌಲ್ಯಗಳನ್ನು ಒಳಗೊಂಡಿರುತ್ತದೆ.

Organization of Islamic countries (OIC) ಭಾರತದ ಹಲವು ಆಂತರಿಕ ವಿಚಾರಗಳಲ್ಲಿ ದುಷ್ಪ್ರಯೋಗಿಕ ಹೇಳಿಕೆ ನೀಡುತ್ತ ಬಂದಿದೆ. ಈ ರೀತಿ ಹೇಳಿಕೆಗಳಿಂದ ತಮ್ಮ ಒಕ್ಕೂಟದ ಅಂತರಾಷ್ಟ್ರೀಯ ಮಟ್ಟದಲ್ಲಿ ಘನತೆ ಕಳೆದುಕೊಂಡಿದೆ” ಎಂದು ಭಾರತದ ವಿದೇಶಾಂಗ ಸಚೀವಾಲಯ ಖಡಕ್ ಎಚ್ಚರಿಕೆ ನೀಡಿದೆ.

Exit mobile version