Asia Cup Final 2023
ಏಷ್ಯಾಕಪ್ ಫೈನಲ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ಸಿರಾಜ್! 8ನೇ ಏಷ್ಯಾಕಪ್ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ!

ಬೊಂಬಾಟ್ ಭಾನುವಾರದಂದು ಶ್ರೀಲಂಕಾದ ಕೊಲಂಬೋನ “ಪ್ರೇಮ ದಾಸ ಅಂತರಾಷ್ಟ್ರೀಯ ಕ್ರೀಡಾಂಗಣ”ದಲ್ಲಿ (PremaDasa international stadium) ನಡೆದ 2023ರ ಏಷ್ಯಾ ಕಪ್ ಫೈನಲ್ಸ್ ನಲ್ಲಿ 50 ರನ್ಸ್ ಗೆ 10 ವಿಕೆಟ್ ಕಬಳಿಸಿ ತವರಿನಲ್ಲೇ ಲಂಕಾಗೆ ಭಾರತ ಸೋಲುಣಿಸಿ 8ನೇ ಬಾರಿ ಏಷ್ಯಾ ಕಪ್ ಅನ್ನು ವಶಪಡಿಸಿಕೊಂಡಿದೆ. ಭಾನುವಾರದ ಫೈನಲ್ ಪಂದ್ಯವು ಕ್ರಿಕೆಟ್ ಪ್ರೇಮಿಗಳಿಗೆ ಮೃಷ್ಟಾನ್ನ ಭೋಜನದಂತೆಯೇ ಇತ್ತು. ಕ್ರಿಕೆಟ್ ಇತಿಹಾಸದಲ್ಲಿ ನೆನಪಿಡಬಹುದಾದಂತಹ ಅಮೋಘ ಕ್ಷಣಗಳಲ್ಲಿ ಇದೂ ಒಂದು. ಅದರಲ್ಲಿಯೂ ಭಾರತೀಯ ಕ್ರಿಕೆಟ್ ಪ್ರಿಯರಿಗೆ ಈ ಅದ್ಭುತ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನಬಹುದು.

ಸಿರಾಜ್ ಮ್ಯಾನ್ ಆಫ್ ದಿ ಮ್ಯಾಚ್ :-
ಭಾರತ ತಂಡದ ಈ ರೋಚಕ ಗೆಲುವಿಗೆ ಮೂಲ ಕಾರಣ ಭಾರತದ ವೇಗಿ ಮೊಹಮ್ಮದ್ ಸಿರಾಜ್ (Mohammad Siraj) , ಸಪ್ತಸ್ವರಗಳನ್ನು ನುಡಿಸುವಷ್ಟೇ ಸಲೀಸಾಗಿ ಸಪ್ತ ವಿಕೆಟ್ ಗಳನ್ನು ಅಂದರೆ ಶ್ರೀಲಂಕಾ ತಂಡದ 7 ವಿಕೆಟ್ ಗಳನ್ನು ಕಬಳಿಸಿದ್ದಾರೆ.ಈ ಮೂಲಕ ಅಂತರಾಷ್ರ್ಟೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್ ನಲ್ಲಿ 4 ವಿಕೆಟ್ (Wicket) ಪತನಗೊಳಿಸಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಸಿರಾಜ್.

ಮೊಹಮ್ಮದ್ ಸಿರಾಜ್ ಅವರ ಉನ್ಮಾದದ ​​ಬೌಲಿಂಗ್ (Bowling) ಪ್ರದರ್ಶನದಿಂದ ಭಾರತವು ಟಾಸ್ ಸೋತರೂ ಶ್ರೀಲಂಕಾವನ್ನು ಬೆರಗುಗೊಳಿಸಿತು, ಕ್ರಿಕೆಟ್ ಸಾಧನೆಯ ಹಾದಿಯಲ್ಲಿ ಬಹು ದಾಖಲೆಗಳನ್ನು ಸೃಷ್ಟಿಸಿತು.91 ವರ್ಷದ‌ ಇತಿಹಾಸದಲ್ಲಿ ಇಲ್ಲಿಯವರೆಗೂ ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದ ಬೌಲರ್ ಭಾರತೀಯ ಕ್ರಿಕೆಟ್ ನಲ್ಲಿ ಇರಲಿಲ್ಲ, ಆದರೆ ಸಿರಾಜ್ ಇದೀಗ ಈ ದಾಖಲೆಯನ್ನು ಮುರಿದಿದ್ದಾರೆ.

ಭಾರತ ಕ್ರಿಕೆಟ್ ಜಗತ್ತನ್ನು ಪ್ರವೇಶಿಸಿದ್ದು 1932ರಲ್ಲಿ ಅಂದರೆ 91 ವರ್ಷಗಳ ಹಿಂದೆ , ಈ ಮೂಲಕ ಸಿರಾಜ್ 91 ವರ್ಷಗಳ ಇತಿಹಾಸದಲ್ಲಿ ಮಾಡಲಾಗದ ದಾಖಲೆಯನ್ನು ಸಿರಾಜ್ ಮಾಡಿದ್ದಾರೆ. ಸಿರಾಜ್ ರ ಬೌಲಿಂಗ್ ದಾಳಿಗೆ ಶ್ರೀಲಂಕಾ ಪಟಪಟನೆ ವಿಕೆಟ್ ಕಳೆದುಕೊಂಡಿತು.

ಟಾಸ್ ಸೋತು ಮೊದಲಿಗೆ ಬೌಲಿಂಗ್ ಮಾಡಿ ಕೇವಲ 15.2 ಓವರ್ ನಲ್ಲಿ ಶ್ರೀಲಂಕಾ ತಂಡವನ್ನು ಆಲ್ ಔಟ್ (All Out) ಮಾಡಿತು ಟೀಮ್ ಇಂಡಿಯಾ. ಕೇವಲ 6.1 ಓವರ್ ನಲ್ಲಿ 51 ರನ್ ಗಳ ಟಾರ್ಗೆಟ್ ಅನ್ನು ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಬಂದ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ಪೂರ್ಣಗೊಳಿಸಿದರು. ಇದು ಭಾರತ ತಂಡವಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಪ್ರೇಮಿಯೂ ಸಂತಸ ಪಡುವಂತಹ ಕ್ಷಣ.

ಸಿರಾಜ್ 7 ವಿಕೆಟ್ ಪತನಗೊಳಿಸಿದರೆ ಹಾರ್ದಿಕ್ ಪಾಂಡ್ಯ 2 ಹಾಗೂ ಭೂಮ್ರಾ 1 ವಿಕೆಟ್ ಕಬಳಿಸಿದರು. ಕ್ರೀಡಾಂಗಣದಲ್ಲಿದ್ದ ಲಂಕಾಭಿಮಾನಿಗಳು ಮೌನದಿಂದಲೇ ಮರುಗಾಗಿ ಕೂತಿದ್ದರು. ಟೀಮ್ ಇಂಡಿಯಾ ನ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿ ಈ ಇಬ್ಬರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಅಷ್ಟೇ ಸಲೀಸಾಗಿ ಪಾಟಿಂಗ್ ಮುಗಿಸಿದ ಯುವ ಬ್ಯಾಟ್ಸ್ಮನ್ ಗಳೂ ಸೇರಿದಂತೆ ಇಡೀ ತಂಡವೇ ಗೆಲುವಿನ ಉಮ್ಮಾದವನ್ನು ಅನುಭವಿಸಿತು. ಈ ಮೂಲಕ ಐತಿಹಾಸಿಕ ಕ್ಷಣವೊಂದನ್ನು ಸೃಷ್ಟಿಸಿ ಭಾರತ ಕ್ರಿಕೆಟ್ ತಂಡ ಎಂಟನೇ ಏಷ್ಯಾ ಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ. ತಂಡದ ಪ್ರತಿಯೊಬ್ಬ ಆಟಗಾರನಿಗೂ ಹೆಮ್ಮೆಯ ಅಭಿನಂದನೆಗಳು.

ಗಾಯತ್ರಿ ಎಂ.ಎನ್

Exit mobile version