ಏಷ್ಯನ್ ಗೇಮ್ಸ್ 2023: ಪುರುಷರ 1000 ಮೀ ಓಟದಲ್ಲಿ ಕಂಚಿನ ಪದಕ ಗೆದ್ದ ಭಾರತ

Hangzhou: ಏಷ್ಯನ್ ಗೇಮ್ಸ್ (India won Bronze Medal) ಇತಿಹಾಸದಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ (Sunil Singh) 3:53.329 ಸೆಕೆಂಡ್‌ಗಳಲ್ಲಿ ಗುರಿ ತಲುಪೂವ ಮೂಲಕ

ಮೂರನೇ ಸ್ಥಾನ ಗಳಿಸಿ ಕಂಚಿನ ಪದಕವನ್ನು ಗೆದ್ದರು. ಉಜ್ಬೇಕಿಸ್ತಾನದ ಶೋಖ್ಮುರೋಡ್ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್ ಉಗ್ಲಿ 3:43.796 ಸೆಕೆಂಡ್‌ಗಳಲ್ಲಿ ಚಿನ್ನ

ತಂದುಕೊಟ್ಟರು. ಸದ್ಯ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ (India won Bronze Medal) ಪದಕಗಳ ಸಂಖ್ಯೆ 60ಕ್ಕೆ ಏರಿದೆ.

ಭಾರತದ ಅರ್ಜುನ್ ಸಿಂಗ್ (Arjun Singh) ಮತ್ತು ಸುನಿಲ್ ಸಿಂಗ್ ಸಲಾಮ್ ಅವರು ಹ್ಯಾಂಗ್‌ಝೌನಲ್ಲಿ ನಡೆದ ಪುರುಷರ ಕ್ಯಾನೋ ಡಬಲ್ 1000 ಮೀ ಫೈನಲ್‌ನಲ್ಲಿ ಕಂಚಿನ ಪದಕವನ್ನು

ಪಡೆದರು. ಭಾರತದ ಜೋಡಿಯು 3:53.329 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನಗಳಿಸುವ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದ ಈವೆಂಟ್‌ನಲ್ಲಿ ದೇಶಕ್ಕೆ ಎರಡನೇ ಪದಕ ತಂದುಕೊಟ್ಟರು.

1994 ರಲ್ಲಿ ಹಿರೋಷಿಮಾದಲ್ಲಿ (Hiroshima) ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಜಾನಿ ರೋಮೆಲ್ ಮತ್ತು ಸಿಜಿ ಕುಮಾರ್ ಸದಾನಂದನ್ (C G Kumar Sadanand) ಇದೇ ಸ್ಪರ್ಧೆಯಲ್ಲಿ ಕಂಚು

ಗೆದ್ದಿದ್ದರು. ಈ ಬಾರಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಕಂಚಿನ ಪದಕಕ್ಕೆ ಒಡೆಯರಾಗಿದ್ದಾರೆ. ಉಜ್ಬೇಕಿಸ್ತಾನದ ಶೋಖ್ಮುರೋಡ್ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್

ಉಗ್ಲಿ 3:43.796 ಸೆಕೆಂಡ್‌ಗಳಲ್ಲಿ ಚಿನ್ನ ಗೆದ್ದರೆ, ಕಜಕಿಸ್ತಾನ್ (Kajakisthan) ಜೋಡಿ ಟಿಮೊಫಿ ಯೆಮೆಲಿಯಾನೊವ್ ಮತ್ತು ಸೆರ್ಗೆ ಯೆಮೆಲಿಯಾನೊವ್ 3:49.991 ಸೆಕೆಂಡ್‌ಗಳಲ್ಲಿ ಬೆಳ್ಳಿ ಪಡೆದರು.

ಯಶಸ್ವಿ ಜೈಸ್ವಾಲ್ (Jaiswal) ಅವರ ಸ್ಫೋಟಕ ಶತಕ ಹಾಗೂ ರವಿ ಬಿಷ್ಟೋಯಿ ಅವರ ಸ್ಪಿನ್ ಜಾದು ನೆರವಿನಿಂದ ಟೀಮ್ ಇಂಡಿಯಾ (Team India) 23 ರನ್​ಗಳ ಜಯ ಸಾಧಿಸಿತು.ಏಷ್ಯನ್

ಗೇಮ್ಸ್​ನಲ್ಲಿ ಭಾರತ ಸೆಮಿ ಫೈನಲ್​ಗೆ ಲಗ್ಗೆ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ (Campus Cricket Field) ನಡೆದ ಏಷ್ಯನ್ ಗೇಮ್ಸ್ ಪುರುಷರ ಟಿ20 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರುತುರಾಜ್

ಗಾಯಕ್ವಾಡ್ ನಾಯಕತ್ವದ ಭಾರತ ತಂಡ ನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದೆ.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ನೇಪಾಳ (Nepal) ತಂಡ ನಿಧಾನಗತಿಯ ಆರಂಭ ಪಡೆದುಕೊಂಡು ವಿಕೆಟ್ ಕಳೆದುಕೊಂಡಿತು. ಹೀಗಾಗಿ ನೇಪಾಳ 20 ಓವರ್​ಗಳಲ್ಲಿ 179 ರನ್​ಗೆ 9 ವಿಕೆಟ್ ಕಳೆದುಕೊಂಡು

ಸೋಲೊಪ್ಪೊಕೊಂಡಿತು. ಭಾರತ ಪರ ಜೈಸ್ವಾಲ್ ಕೇವಲ 49 ಎಸೆತಗಳಲ್ಲಿ 8 ಫೋರ್, 7 ಅಮೋಘ ಸಿಕ್ಸರ್​ನೊಂದಿಗೆ 100 ರನ್ ಚಚ್ಚಿದರು. ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್

ಕಲೆ ಹಾಕಿತು. ಭಾರತ ಪರ ರವಿ ಬಿಷ್ಟೋಯಿ, ಆವೇಶ್ ಖಾನ್ ತಲಾ 3 ವಿಕೆಟ್ ಕಿತ್ತು ಮಿಂಚಿದರು. ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪದಕಗಳ ಸಂಖ್ಯೆ 60ಕ್ಕೆ ಏರಿದೆ.

ಇದನ್ನು ಓದಿ: ಖ್ಯಾತ ಪತ್ರಕರ್ತೆ, ವಿಜಯ ಟೈಮ್ಸ್‌ನ ಮುಖ್ಯ ಸಂಪಾದಕರಾದ ವಿಜಯಲಕ್ಷ್ಮೀ ಶಿಬರೂರುರವರಿಗೆ ಬಿ.ಎಸ್.ಡಬ್ಲ್ಯೂ.ಟಿ ವರ್ಷದ ವ್ಯಕ್ತಿ ಪ್ರಶಸ್ತಿ

Exit mobile version