ಹೈದರಾಬಾದ್‌ನಿಂದ ಒಡಿಶಾಗೆ ಆಕ್ಸಿಜನ್ ಟ್ಯಾಂಕ್ ಏರ್​ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ

ಹೈದರಾಬಾದ್, ಏ. 23: ಭಾರತೀಯ ವಾಯುಪಡೆಯ ವಿಮಾನಗಳ ಸಹಾಯದಿಂದ ತೆಲಂಗಾಣ ಸರ್ಕಾರ ಒಡಿಶಾ ಸ್ಥಾವರಗಳಿಗೆ ಒಂಬತ್ತು ಖಾಲಿ ಆಮ್ಲಜನಕ ಟ್ಯಾಂಕ್​ಗಳನ್ನು ಶುಕ್ರವಾರ ವಿಮಾನದಲ್ಲಿ ಸಾಗಿಸಿ ರಾಜ್ಯಕ್ಕೆ ಅಗತ್ಯವಿರುವ ಲಿಕ್ವಿಡ್ ಆಕ್ಸಿಜನ್ ಪಡೆಯಲು ಕ್ರಮ ಕೈಗೊಂಡಿದೆ. ಅಂಗುಲ್ ಮತ್ತು ರೂರ್ಕೆಲಾ ಸ್ಥಾವರಗಳ ಹೈದರಾಬಾದ್‌ನಿಂದ ಸುಮಾರು 1200 ಕಿ.ಮೀ ದೂರದಲ್ಲಿದೆ .ಆಮ್ಲಜನಕ ಟ್ಯಾಂಕರ್‌ಗಳನ್ನು ಏರ್ ಲಿಫ್ಟ್ ಮಾಡುವ ನಿರ್ಧಾರವು ಸಮಯವನ್ನು ಉಳಿಸುವುದಲ್ಲದೆ, ಕೊವಿಡ್ ರೋಗಿಗಳ ಚಿಕಿತ್ಸೆಗಾಗಿರುವ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಟ್ಯಾಂಕರ್‌ಗಳು ರಸ್ತೆಯ ಮೂಲಕ ಹಿಂತಿರುಗಲಿದ್ದು, ಏಪ್ರಿಲ್ 27 ರೊಳಗೆ ರಾಜ್ಯಕ್ಕೆ 150 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ತರಲಿವೆ.

ಶುಕ್ರವಾರ, ಆರೋಗ್ಯ ಸಚಿವ ಇಟಾಲಾ ರಾಜೇಂದರ್, ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮತ್ತು ಇತರ ಅಧಿಕಾರಿಗಳು ಹೈದರಾಬಾದ್‌ನ ಬೇಗಂಪೆಟ್‌ನಲ್ಲಿರುವ ಹಳೆಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಸಚಿವರ ಕಚೇರಿಯ ಹೇಳಿಕೆಯ ಪ್ರಕಾರ, ಭಾರತೀಯ ವಾಯುಪಡೆಯ ಎರಡು ಸಿ 17 ವಿಮಾನಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗಿದೆ.

ಆಕ್ಸಿಜನ್ ಇಲ್ಲದ ಖಾಲಿ ಟ್ಯಾಂಕರ್ ಗಳನ್ನು ರಸ್ತೆ ಮಾರ್ಗವಾಗಿ ಹೈದರಾಬಾದ್​ನಿಂದ ಒಡಿಶಾಗೆ ತೆಗೆದುಕೊಂಡು ಹೋಗಬೇಕಾದರೆ ಮೂರು ದಿನ ಬೇಕಾಗುತ್ತದೆ. ಟ್ಯಾಂಕರ್​ಗಳನ್ನು ಏರ್ ಲಿಫ್ಟ್ ಮಾಡುವುದರಿಂದ ಮೂರು ದಿನ ಉಳಿಯುತ್ತದೆ. ಮುಂಬರುವ ದಿನಗಳಲ್ಲಿ ಕೊವಿಡ್ 19 ರೋಗಿಗಳಿಗಿರುವ ಆಕ್ಸಿಜನ್ ಕೊರತೆ ನೀಗಿಸುತ್ತೇವೆ. ಇಲ್ಲಿ 22 ಸರ್ಕಾರಿ ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆಮಾಡಿದ್ದೇವೆ ಎಂದು ಸರ್ಕಾರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version