ಭಾರತೀಯ ಮೂಲದ 11 ವರ್ಷದ ನತಾಶಾ ಪೇರಿ ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ

ಅಮೆರಿಕ: ಭಾರತೀಯ ಮೂಲದ 11 ವರ್ಷದ ಅಮೆರಿಕನ್ ಬಾಲೆ ನತಾಶಾ ಪೇರಿ ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂಬ ಮಾನ್ಯತೆಯನ್ನು ಪಡೆದಿದ್ದಾರೆ.

ಅಮೆರಿಕದ ಉನ್ನತ ವಿಶ್ವವಿದ್ಯಾಲಯ ನಡೆಸುವ ಸ್ಕಾಲಸ್ಟಿಕ್ ಅಸ್ಸೇಸ್‌ಮೆಂಟ್ ಟೆಸ್ಟ್ (ಎಸ್‌ಎಟಿ) ಮತ್ತು ಅಮೆರಿಕನ್ ಕಾಲೇಜ್ ಟೆಸ್ಟಿಂಗ್(ಎಸಿಟಿ) ಪರೀಕ್ಷೆಯಲ್ಲಿ ನೀಡಿದ ಅದ್ವಿತೀಯ ಫಲಿತಾಂಶ ನತಾಶಾಳನ್ನು ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂದು ಗುರುತಿಸಿದೆ.

ನತಾಶಾ ನ್ಯೂಜೆರ್ಸಿಯ ಥೇಲ್ಮಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಎಸ್‌ಎಟಿ ಮತ್ತು ಎಸಿಟಿ ಪರೀಕ್ಷೆಯಲ್ಲಿ 84 ದೇಶಗಳ ಸುಮಾರು 19,000 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version