2022 ರಲ್ಲಿ ಬಾಕ್ಸ್ ಆಫೀಸ್ ದೋಚಿದ ಟಾಪ್ 5 ಭಾರತೀಯ ಸಿನಿಮಾಗಳು

kgf 2

ಕೊರೋನಾ(CoronaVirus) ನಂತರ ಭಾರತೀಯ ಚಿತ್ರರಂಗ(Indian Cinemas) ಮತ್ತೆ ಹಳಿಗೆ ಮರಳಿದೆ. 2022ರಲ್ಲಿ ಭಾರತೀಯ ಚಿತ್ರಗಳು ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು, ಹಣಗಳಿಕೆಯಲ್ಲಿ ಭಾರೀ ಯಶಸ್ಸು ಕಂಡಿವೆ.

ಬಾಕ್ಸ್-ಆಫೀಸ್ನಲ್ಲಿ ಅತಿ ಹೆಚ್ಚು ಹಣವನ್ನು ದೋಚಿದ ಟಾಪ್ 5 ಭಾರತೀಯ ಚಲನಚಿತ್ರಗಳ ವಿವರ ಇಲ್ಲಿದೆ ನೋಡಿ.

ಟಾಪ್-5
ಚಿತ್ರ : ಭೂಲ್ ಭುಲೈಯಾ 2
ಭೂಲ್ ಭುಲೈಯಾ(Bhul Bhulaiya) 2 ಮೇ 2022 ರಲ್ಲಿ ಬಿಡುಗಡೆಯಾಗಿದೆ. ಇದು ಹಾಸ್ಯ ಚಿತ್ರವಾಗಿದ್ದು ಅಪಾರ ಜನಪ್ರಿಯತೆ ಗಳಿಸಿದೆ. ಭೂಲ್ ಭುಲೈಯಾ 2 ಚಿತ್ರವನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದಾರೆ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ, ಟಬು ಮತ್ತು ರಾಜ್ಪಾಲ್ ನೌರಂಗ್ಯಾದವ್ ಮುಖ್ಯ ತಾರಾಗಣದಲ್ಲಿದ್ದಾರೆ. ಇನ್ನು ಈ ಬಜೆಟ್ ಸುಮಾರು ರೂ. 80 ಕೋಟಿ ರೂ. ಆಗಿದ್ದು, ಮೊದಲ ದಿನವೇ ಚಿತ್ರ ವಿಶ್ವಾದ್ಯಂತ 20 ಕೋಟಿ ರೂ. ಸಂಗ್ರಹ ಮಾಡಿತ್ತು. ಇಲ್ಲಿಯವರೆಗೆ ವಿಶ್ವಾದ್ಯಂತ ಈ ಚಿತ್ರ 262 ಕೋಟಿ ರೂ. ಗಳಿಕೆ ಮಾಡಿದೆ.

ಟಾಪ್ -4
ಚಿತ್ರ : ದಿ ಕಾಶ್ಮೀರಿ ಫೈಲ್(The Kashmir Files)
ಈ ಚಿತ್ರದಲ್ಲಿ 1990ರಲ್ಲಿ ಕಣಿವೆರಾಜ್ಯ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕಥನವಿದೆ. ಈ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿಜೋಷಿ ನಟಿಸಿದ್ದಾರೆ. ಈ ಚಿತ್ರದ ಬಜೆಟ್ 20 ಕೋಟಿ ರೂ. ಮಾತ್ರ. ಆದರೆ ಇಲ್ಲಿಯವರೆಗೆ ಈ ಚಿತ್ರ ವಿಶ್ವದಾದ್ಯಂತ ಅಪಾರ ಹಣ ಗಳಿಕೆ ಮಾಡಿದೆ. ಭಾರತದಲ್ಲಿ 290 ಕೋಟಿ ರೂ. ಮತ್ತು ವಿದೇಶದಲ್ಲಿ 46 ಕೋಟಿ ರೂ.ಗಳಿಸಿದ್ದು, ಒಟ್ಟು 336 ಕೋಟಿ ರೂ.ಲಾಭ ಮಾಡಿದೆ.

ಟಾಪ್ -3
ಚಿತ್ರ : ವಿಕ್ರಮ್(Vikram)
ಇದೊಂದು ತಮಿಳು(Tamil) ಚಿತ್ರವಾಗಿದ್ದು, ಸರಣಿ ಹತ್ಯೆಗಳ ಕುರಿತಾದ ಸಾಹಸಮಯ ಚಿತ್ರವಾಗಿದ್ದು, ಇದನ್ನು ಕಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ವಿಜಯ ಸೇತುಪತಿ, ಫಹದ್ ಫಾಸಿಲ್ ನಟಿಸಿದ್ದಾರೆ. ಜೂನ್‍ನಲ್ಲಿ ಚಿತ್ರ ತೆರೆಕಂಡಿದೆ. ಈ ಚಿತ್ರದ ಬಜೆಟ್ ಸುಮಾರು 120 ಕೋಟಿ ರೂ.ಆಗಿದೆ. ಈ ಚಿತ್ರ ಭಾರತದಲ್ಲಿ 265 ಕೋಟಿ ರೂ. ಮತ್ತು ವಿದೇಶಗಳಲ್ಲಿ 120 ಕೋಟಿ ರೂ. ಒಟ್ಟು 385 ಕೋಟಿ ರೂ.ಗಳಿಕೆ ಮಾಡಿದೆ.
ಟಾಪ್-2
ಚಿತ್ರ : ಆರ್‍ಆರ್‍ಆರ್(RRR)
ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ(SS Rajamouli) ನಿರ್ದೇಶಿಸಿದ್ದಾರೆ. ಆರ್‍ಆರ್‍ಆರ್ ಚಿತ್ರ ಬಹುತಾರಾಗಣದ ಚಿತ್ರವಾಗಿದೆ. ಅಜಯ್ ದೇವಗನ್, ಜೂ.ಎನ್‍ಟಿಆರ್, ರಾಮ್ ಚರಣ್, ಆಲಿಯಾಭಟ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಬಜೆಟ್ ಸುಮಾರು 450 ಕೋಟಿ ರೂ. ಆಗಿದೆ. ಭಾರತದಲ್ಲಿ 920 ಕೋಟಿ ರೂ. ಮತ್ತು ವಿದೇಶಗಳಲ್ಲಿ 215 ಕೋಟಿ ರೂ. ಸೇರಿ ಒಟ್ಟು 1136 ಕೋಟಿ ರೂ.ಗಳಿಸಿದೆ.
https://vijayatimes.com/social-media-influencer-kaby-lame/

ಟಾಪ್-1
ಚಿತ್ರ : ಕೆಜಿಎಫ್ ಚಾಪ್ಟರ್ 2(KGF Chapter 2)

ಇದು ಕನ್ನಡದ ಆಕ್ಷನ್ ಚಿತ್ರವಾಗಿದೆ. ಈ ವರ್ಷದ ಏಪ್ರಿಲ್‍ನಲ್ಲಿ ಈ ಸಿನಿಮಾ ತೆರೆಕಂಡಿದೆ. ಈ ಚಿತ್ರದಲ್ಲಿ ಯಶ್(Yash), ಸಂಜಯ ದತ್, ರವೀನಾ ಟಂಡನ್ ನಟಿಸಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಬಜೆಟ್ 100 ಕೋಟಿ ರೂ. ಆದರೆ ಈ ಚಿತ್ರ ಮೊದಲ ದಿನವೇ 159 ಕೋಟಿ ರೂ. ಗಳಿಕೆ ಮಾಡಿತ್ತು. ಇದುವರೆಗೂ ವಿಶ್ವಾದ್ಯಂತ 1235 ಕೋಟಿ ರೂ. ದೋಚಿದೆ. ವಿದೇಶಗಳಲ್ಲಿ 205 ಕೋಟಿ ರೂ. ಮತ್ತು ಭಾರತದಲ್ಲಿ ಇದರ ಒಟ್ಟು ಸಂಗ್ರಹ ರೂ. 1030 ಕೋಟಿ ರೂ. ಎನ್ನಲಾಗಿದೆ.
Exit mobile version