Visit Channel

ಭಯರಹಿತ ಪ್ರಾಣಿಯೆಂದು `ಗಿನ್ನಿಸ್ ಬುಕ್’ ಸೇರಿದ ತರಕರಡಿಯ ವಿಶೇಷತೆ ಏನು?

honey badger

ತರಕರಡಿಗಳಿಗೆ(Honey badger) ಕೊಟ್ಟಿರುವ ಈ ಮೇಲಿನ badge ಯಾವುದೊ ಸಿನಿಮಾ ನಟನಿಗೆ ಅಭಿಮಾನಿಗಳು ಕೊಟ್ಟ ಸಂಬಂಧವಿಲ್ಲದ ಬಿರುದಾಗಲಿ ಅಥವಾ ರಾಜಕೀಯ ನಾಯಕನನ್ನು ಮೆಚ್ಚಿಸಲು ಆತನ ಹಿಂಬಾಲಕರು ಹೇಳುವ ಉತ್ಪ್ರೇಕ್ಷೆಯ ಮಾತಾಗಲಿ ಅಲ್ಲ. ಒಂದು ಪ್ರಾಣಿಯ ಗುಣ ಸ್ವಭಾವದಿಂದ ಅದನ್ನು ಯಾವುದೇ ಪೂರ್ವಗ್ರಹಗಳಿಲ್ಲದೇ ಬಣ್ಣಿಸಿರುವ ಮಾತು. ಈ ಮಾತು, ಮಾತಿಗಷ್ಟೆ ಸೀಮಿತವಾಗಿಲ್ಲ. ಗಿನ್ನಿಸ್ ದಾಖಲೆಯ(Guiness world records) ಪುಟದಲ್ಲೂ ಅಚ್ಚಾಗುವ ಹೊಸ್ತಿಲ್ಲಲ್ಲಿದೆ. ಇಂತಹ ಒಂದು ಅಪರೂಪದ ಪ್ರಾಣಿಯ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ.

honey badger

ಭಾರತದ(Indian) ಕೆಲವೇ ಭಾಗಗಳಲ್ಲಿ ಕಂಡು ಬರುವ ಈ ತರಕರಡಿ(Honey Badger), ನಮ್ಮ ಕರ್ನಾಟಕದ ಕಾವೇರಿ ವನ್ಯಧಾಮದಲ್ಲಿಯೂ ಸಹ ಕಂಡುಬರುತ್ತದೆ. ಅದು ಕೆಲವೇ ವರ್ಷಗಳ‌ ಹಿಂದೆ ಇದರ ಇರುವಿಕೆಯನ್ನು ಕಾವೇರಿ ವನ್ಯಧಾಮದಲ್ಲಿ ದಾಖಲಿಸಲಾಗಿದೆ. ಅಲ್ಲಿನ ಹಲಗೂರು ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಇದು ಕಂಡು ಬಂದಿತ್ತು. ಅಪರೂಪದ, ಬಹಳ ವಿಶೇಷ ಗುಣಗಳನ್ನು ಹೊಂದಿದ ಈ ಪ್ರಾಣಿ ಕಂಡು ಬಂದಿದ್ದೆ ತಡ, ಅಲ್ಲಿನ ಅರಣ್ಯಾಧಿಕಾರಿಗಳು ಕಾವೇರಿ ವನ್ಯಧಾಮದ ಲಾಂಛನವಾಗಿ ಈ ಪ್ರಾಣಿಯ ಚಿತ್ರವನ್ನೆ ಬಳಸಲು ಮುಂದಾದರು.

wildlife

ಭಾರತದಲ್ಲಿ‌ ಕೆಲವು ಕಡೆಗಳಲ್ಲಿ ‘ಬಿಜ್ಜು’(Bijju) ಎಂದು ಕರೆಯಲ್ಪಡುವ, ಈ ತರಕರಡಿಯು ಅತ್ಯಂತ ಧೈರ್ಯಶಾಲಿ, ಭಯರಹಿತ ಪ್ರಾಣಿಯೆಂದು ಗಿನ್ನಿಸ್ ದಾಖಲೆಯ ‌ಪುಟ ಸೇರುವಷ್ಟು ವಿಶೇಷ ಗುಣ ಇದಕ್ಕೇನಿದೆ? ಎನ್ನುವುದು ನೋಡುವುದಾದರೆ, ಇದು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕೂಡ ಕಾಡಿನ ಅತಿ ಧೈರ್ಯಶಾಲಿ, ಬಲಶಾಲಿ, ಕಾಡಿನ ರಾಜನೆನಿಸಿಕೊಳ್ಳುವ ಹುಲಿ, ಸಿಂಹಗಳನ್ನೆ ಕೆಣಕುವುದು, ಅತ್ಯಂತ ವಿಷಕಾರಿ ಹಾವುಗಳನ್ನೆ ತಿನ್ನುವುದು, ಮುಳ್ಳುಹಂದಿಯನ್ನೆ ಮುಟ್ಟುವುದು, ಅಸಂಖ್ಯಾತ ಜೇನು ನೋಣಗಳನ್ನು ಬೇಧಿಸಿ ಜೇನಿನ ಸವಿ ಸವಿಯುವುದು, ಚೀತಾಗಳ ಮರಿಗಳನ್ನು ಅಪಹರಿಸುವುದು, ಹಸಿದ ಸಿಂಹಗಳ ಬಳಿ ತೆರಳಿ ಅವುಗಳ ಬೇಟೆಯ ಆಹಾರವನ್ನು ಕದ್ದು ಹೊತ್ತೊಯ್ಯವುದು ಮುಂತಾದ ಸಾಹಸಮಯ ಕ್ರಿಯೆಗಳಿಂದಾದ ಇವು Most fearless animal ಎಂಬ ಅಭಿದಾನಗಳಿಸಿವೆ.

guiness records

ಒಟ್ಟಾರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥವಾಗಿದೆ ನಮ್ಮ ಪ್ರೀತಿಯ ಈ ತರಕರಡಿ. ಇಂತಹ ಒಂದು ಅಪರೂಪದ ಧೈರ್ಯಶಾಲಿ ಪ್ರಾಣಿ ನಮ್ಮ ನಾಡಿನಲ್ಲಿಯೂ ಇದೆ ಎನ್ನವುದೇ ನಾವೆಲ್ಲರೂ ಹೆಮ್ಮೆ ಪಡುವ ವಿಚಾರ.

  • Source Credits : ಸಂಜಯ್ ಹೊಯ್ಸಳ

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.