ಐಪಿಎಲ್‌ ಪಂದ್ಯಗಳಿಗೂ ಮುನ್ನವೇ ಪ್ರ್ಯಾಕ್ಟಿಸ್‌ನಲ್ಲಿ ಅಬ್ಬರಿಸಿದ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ ; ವೀಡಿಯೋ ವೈರಲ್

India : ಭಾರತೀಯ ಕ್ರಿಕೆಟ್‌ (Cricket) ತಂಡದ ಮಾಜಿ ನಾಯಕ, ಚೆನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ, ದಿಗ್ಗಜ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ಅವರು ಐಪಿಎಲ್‌ (IPL) 2023 ರ ಪಂದ್ಯಗಳಿಗೂ ಮುನ್ನ ತರಬೇತಿ ಪಂದ್ಯದಲ್ಲಿ (Indian Premier League 2023) ಅಬ್ಬರಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಕ್ರಿಕೆಟ್‌ ಅಭಿಮಾನಿಗಳ ಆರಾಧ್ಯದೈವ, ಕ್ಯಾಪ್ಟನ್‌ ಕೂಲ್‌ ಎಂದೇ ಕರೆಯಲ್ಪಡುವ ಎಂ.ಎಸ್‌ ಧೋನಿ ಅವರು ಸಿಕ್ಸರ್‌ ಸಿಡಿಸುವ ಮುಖೇನ ಅವರ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಐಪಿಎಲ್ 2023 ರ ಪಂದ್ಯಗಳಿಗೂ ಮುನ್ನ ನಡೆದ ತರಬೇತಿ ಅವಧಿಯಲ್ಲಿ ಚೆನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕನಾಗಿ, ಮತ್ತೊಮ್ಮೆ ಪವರ್-ಹಿಟ್ಟಿಂಗ್ ಪ್ರದರ್ಶನವನ್ನು ತೋರಿದ್ದಾರೆ.


ಇಂಡಿಯನ್ ಪ್ರೀಮಿಯರ್ ಲೀಗ್ನ(Indian Premier League) ಮುಂಬರುವ ಆವೃತ್ತಿಯನ್ನು ಪ್ರಾರಂಭಿಸಲು

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಕಳೆದ ವಾರ ತಮ್ಮ ತವರಾದ ಚೆನೈನಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ.

2023ರ ಹೊಸ ಆವೃತ್ತಿಯು ಇದೇ ಮಾರ್ಚ್ 31 ರಂದು ಬೃಹತ್‌ ಚಾಲನೆ ಪಡೆಯುವ ಮೂಲಕ ಆರಂಭವಾಗಲಿದೆ.

ಇದನ್ನೂ ಓದಿ : https://vijayatimes.com/naresh-and-pavitralokesh-marriage/

ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ (Narendra Modi) ಸ್ಟೇಡಿಯಂನಲ್ಲಿ ೧ ಬಾರಿ ಚಾಂಪಿಯನ್ ಆದ ಗುಜರಾತ್ ಟೈಟಾನ್ಸ್

ವಿರುದ್ಧ 4 ಬಾರಿ ಐಪಿಎಲ್‌ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದ ಧೋನಿ ನಾಯಕತ್ವದ ಚೆನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿ ಮೊದಲ ಪಂದ್ಯವನ್ನು ಆರಂಭಿಸಲಿದೆ.

ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಉತ್ತಮ ಪ್ರದರ್ಶನ ನೀಡದೆ ಅಂಕ ಪಟ್ಟಿಯಲ್ಲಿ ಕೆಳ ಕ್ರಮಾಂಕಕ್ಕೆ (Indian Premier League 2023) ಹೋಗುವ ಮೂಲಕ ಲೀಗ್‌ನಿಂದ ಹೊರಗುಳಿಯಿತು.

ಇದು ಧೋನಿ ಅವರ ಬೃಹತ್‌ ಅಭಿಮಾನಿ ಬಳಗಕ್ಕೆ ಬೇಸರ ನೀಡಿತು. ಗುರುವಾರ,

ಸಿಎಸ್‌ಕೆ ತಂಡದ ಅಧಿಕೃತ ಟ್ವಿಟ್ಟರ್ (Twitter) ಖಾತೆಯು ತಮ್ಮ ತಂಡ ನಡೆಸಿದ ಅಭ್ಯಾಸದ ಪಂದ್ಯದಲ್ಲಿ ಕ್ಯಾಪ್ಟನ್‌ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್‌ ಪ್ರದರ್ಶನದ ಕಿರು ವೀಡಿಯೊವನ್ನು ಹಂಚಿಕೊಂಡಿದೆ.

ಇದನ್ನೂ ಓದಿ : https://vijayatimes.com/kumaraswamy-vs-sumalatha/

41 ವರ್ಷ ವಯಸ್ಸಾಗಿದ್ದರು ಕೂಡ ಚಿರ ಯುವಕನಂತೆ ಸ್ಟಾರ್ ವೇಗಿಗಳಿಗೆ ಮತ್ತು ಸ್ಪಿನ್ನರ್‌ಗಳಿಗೆ ದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ತಮ್ಮ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ ಧೋನಿ.

ವೀಡಿಯೊದಲ್ಲಿ ಧೋನಿ ಅವರು ಸಿಡಿಸಿದ ಎಲ್ಲಾ ಮೂರು ಸಿಕ್ಸರ್‌ಗಳು ಲಾಂಗ್-ಆಫ್ ಪ್ರದೇಶವನ್ನು ದಾಟಿ ಹೋಗಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಿದೆ. 2023 ರ ಐಪಿಎಲ್‌ ಪಂದ್ಯವೇ ಮಹೇಂದ್ರ ಸಿಂಗ್‌ ಧೋನಿ ಅವರ ಕೊನೆಯ ಪಂದ್ಯವಾಗಲಿದೆ.

ಈ ಆವೃತ್ತಿಯೇ ಅವರ ಕೊನೆಯ ಆವೃತ್ತಿಯಾಗಲಿದೆ. ಅವರ ಬೃಹತ್ ಅಭಿಮಾನಿ ಬಳಗಕ್ಕೆ ತಮ್ಮ ನೆಚ್ಚಿನ ನಾಯಕನನ್ನು ಕೊನೆಯ ಬಾರಿಗೆ ಅವರ ಆಟ ಮತ್ತು ನಾಯಕತ್ವವನ್ನು ನೋಡುವ ಖುಷಿ ಒಂದೆಡೆಯಾದರೆ,

ಅಪಾರ ಪ್ರಮಾಣದ ದುಃಖ ಮತ್ತೊಂದೆಡೆ. 2023 ರ ಐಪಿಎಲ್‌ ಸೀಸನ್ ಹರಾಜಿನಲ್ಲಿ,

ಚೆನ್ನೈ ಸೂಪರ್ ಕಿಂಗ್ಸ್ ತಂಡವೂ 16.25 ಕೋಟಿ ರೂ.ಗೆ ಇಂಗ್ಲೆಂಡ್‌ ತಂಡದ ಸ್ಪೋಟಕ ಆಲ್‌ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಸೇರ್ಪಡೆಗೊಳಿಸುವ ಮೂಲಕ ತಮ್ಮ ತಂಡವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

Exit mobile version