ಮುಂದಿನ 3 ತಿಂಗಳಲ್ಲಿ ರೂಪಾಯಿ ಮೌಲ್ಯ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ : ವರದಿ

Indian Rupee

ಬೆಂಗಳೂರು : ಇತ್ತೀಚಿನ ಚೇತರಿಕೆಯ ಹೊರತಾಗಿಯೂ, ಹೆಚ್ಚುತ್ತಿರುವ ವ್ಯಾಪಾರ ಕೊರತೆ ಮತ್ತು ಅಮೇರಿಕಾದ ಡಾಲರ್ಗೆ(American Dollar) ಜಾಗತಿಕ ಹರಿವಿನ ಹೆಚ್ಚಳದ ಪರಿಣಾಮ, ರೂಪಾಯಿ ಮೌಲ್ಯ(Rupee Value) ಮುಂಬರುವ ಮೂರು ತಿಂಗಳಲ್ಲಿ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ ಎಂದು ವಿದೇಶಿ ವಿನಿಮಯ ತಂತ್ರಜ್ಞರ ರಾಯಿಟರ್ಸ್ ಸಮೀಕ್ಷೆಯ(Survey) ವರದಿ ಹೇಳಿದೆ. ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ಅಕ್ಟೋಬರ್(October) ಅಂತ್ಯದ ವೇಳೆಗೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(Reserve Bank Of India) ಬಡ್ಡಿದರಗಳ ಆಧಾರದ ಮೇಲೆ ಇದು ಹೆಚ್ಚು ಅವಲಂಬಿತವಾಗಿರುತ್ತದೆ. ಪ್ರಸ್ತುತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರೆಪೋ ದರ(Repo Rate) 4.9 ಇದ್ದು, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಎಚ್ಡಿಎಫ್ಸಿ(HDFC Bank) ಬ್ಯಾಂಕ್ನ ಅರ್ಥಶಾಸ್ತ್ರಜ್ಞೆ ಸಾಕ್ಷಿ ಗುಪ್ತಾ(Sakshi Gupta) ಅವರ ಪ್ರಕಾರ, ಯುಎಸ್ ಫೆಡರಲ್ ರಿಸರ್ವ್(US Federal Reserve) ತನ್ನ ಸೆಪ್ಟೆಂಬರ್(September) ಸಭೆಯಲ್ಲಿ ಸತತ ಮೂರನೇ ಬಾರಿಗೆ 75 ಬೇಸಿಸ್ ಪಾಯಿಂಟ್ ಬಡ್ಡಿದರ ಹೆಚ್ಚಳವನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಈಗ ಗಮನ ಹರಿಸಲಾಗಿದೆ.

ಅದರ ಆಧಾರದ ಮೇಲೆ ರೂಪಾಯಿ ಮೌಲ್ಯವನ್ನು ಅಂದಾಜು ಮಾಡಬಹುದು. ಅದೇ ರೀತಿ ಸದ್ಯದ ಪರಿಸ್ಥಿತಿಯಲ್ಲಿ ಆರ್ಬಿಐ(RBI) ಆಕ್ರಮಣಕಾರಿ ಆಗುವ ಸಾಧ್ಯತೆಯಿಲ್ಲ, ಹೀಗಾಗಿ ಇದು ರೂಪಾಯಿ ಮೌಲ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. ಇನ್ನು ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತದೆ ಎಂದು ಎಲ್ಲರಿಗೂ ಮನವರಿಕೆಯಾಗಿಲ್ಲ. ಏಕೆಂದರೆ ಸರಕುಗಳ ಬೆಲೆಗಳಲ್ಲಿನ ಇತ್ತೀಚಿನ ಕುಸಿತವು ಡಾಲರ್ಗೆ ಆಗುವ ಮತ್ತಷ್ಟು ಲಾಭಗಳನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.


ಇನ್ನೊಂದೆಡೆ ಮುಂಬರುವ ತಿಂಗಳುಗಳಲ್ಲಿ ರೂಪಾಯಿಯನ್ನು ರಕ್ಷಿಸಲು ಆರ್ಬಿಐ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಡಾಲರ್ನ ಹೆಚ್ಚಿನ ಏರಿಕೆ ಈಗ ಮುಗಿದಿದೆ. ಮುಂದಿನ ತಿಂಗಳುಗಳಲ್ಲಿ ಸರಕುಗಳ ಬೆಲೆಗಳು ಸಹ ಇಳಿಯುತ್ತವೆ ಎಂದು ಕ್ಯಾಪಿಟಲ್ ಎಕನಾಮಿಕ್ಸ್ನ(Capital Economics) ಹಿರಿಯ ಭಾರತೀಯ ಅರ್ಥಶಾಸ್ತ್ರಜ್ಞೆ ಶಿಲಾನ್ ಶಾ ಹೇಳಿದ್ದಾರೆ.

Exit mobile version