ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧೀಯವರ ಹತ್ಯೆ ಆಕಸ್ಮಿಕ : ಬಿಜೆಪಿ ಸಚಿವ ಗಣೇಶ್ ಜೋಷಿ

ಇಂದಿರಾಗಾಂಧಿ(Indira Gandhi) ಮತ್ತು ರಾಜೀವ್ ಗಾಂಧೀಯವರ(Rajiv Gandhi) ಹತ್ಯೆ ಆಕಸ್ಮಿಕ ಎಂದಿರುವ ಉತ್ತರಾಖಂಡದ(Indira Gandhi death accidental) ಕೃಷಿ ಸಚಿವ ಬಿಜೆಪಿ ನಾಯಕ ಗಣೇಶ್ ಜೋಷಿಯವರ(Ganesh Joshi) ಹೇಳಿಕೆ ಈಗ ಭಾರೀ ವಿವಾದ ಸೃಷ್ಟಿಸಿದೆ.

ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ(Mahatma Gandhiji) ಪಾತ್ರ ಬಹು ಮುಖ್ಯವಾಗಿದೆ.

ಅದರಂತೆಯೇ ಚಂದ್ರಶೇಖರ್ ಆಜಾದ್(Chandrashekhar Azaad), ಭಗತ್ ಸಿಂಗ್(Bhagath Singh), ಸೇರಿದಂತೆ ಅನೇಕರು ಹುತಾತ್ಮರಾಗಿದ್ದಾರೆ.

ವೀರ ಮರಣವನ್ನು ಹೊಂದಿದ್ದಾರೆ. ಆದರೆ ರಾಹುಲ್ ಗಾಂಧಿ(Rahul Gandhi) ಕುಟುಂಬದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಗಳು ಆಕಸ್ಮಿಕವಾಗಿವೆ.

ಹುತಾತ್ಮಕತೆಗೂ ಹಾಗೂ ಇಂಥಾ ಆಕಸ್ಮಿಕ ಹತ್ಯೆಗೂ ಬಹಳ ವ್ಯತ್ಯಾಸವಿದೆ ಎಂದು ಉತ್ತರಾಖಂಡದ ರೈತ(Indira Gandhi death accidental)ಕಲ್ಯಾಣ, ಕೃಷಿ,

ಗ್ರಾಮೀಣಾಭಿವೃದ್ದಿ, ಮತ್ತು ಸೈನಿಕ ಕಲ್ಯಾಣ ಖಾತೆಯ ರಾಜ್ಯ ಸಚಿವರಾದ ಗಣೇಶ್ ಜೋಷಿಯವರು ಹೇಳಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ರಾಹುಲ್ ಗಾಂಧಿಯವರ ಭಾರತ್ ಜೋಡೋ(Bharath Jodo Yatra) ಯಾತ್ರೆ ಸುಸೂತ್ರವಾಗಿ ನಡೆದಿದೆ.

ಈ ಸಂದರ್ಭದಲ್ಲಿ ಶ್ರೀನಗರದಲ್ಲಿ(Sri Nagar) ನಡೆದ ಈ ಸಮಾರೋಪದಲ್ಲಿ ಕಾಂಗ್ರೇಸ್ ನಾಯಕರು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ವರದಿಗಾರರ ಪ್ರಶ್ನೆಗೆ

ಉತ್ತರಿಸಿದ ಗಣೇಶ್ ಜೋಷಿಯವರು ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ನಡೆಯಲು ಪ್ರಧಾನಿ ನರೇಂದ್ರ ಮೋದಿಯವರೇ(Narendra Modi) ಕಾರಣ, ಇದರ ಕೀರ್ತಿ ಮೋದಿಯವರಿಗೆ ಸಲ್ಲಬೇಕು ಎಂದು ಬಣ್ಣಿಸಿದರು.

ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 5 2019 ರಂದು 370ನೇ ವಿಧಿಯನ್ನು ರದ್ದುಪಡಿಸಿದ್ದರಿಂದ ಸಹಜತೆ ಮರಳಿದೆ,

ಇದರಿಂದ ರಾಹುಲ್ ಗಾಂಧಿಯವರು ಲಾಲ್‌ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಏನಿದು 370 ನೇ ವಿಧಿ ಅಥವಾ ಕಲಂ 370?
ಭಾರತ ಮತ್ತು ಪಾಕಿಸ್ತಾನ 1947 ರಲ್ಲಿ ಸ್ವತಂತ್ರ ರಾಷ್ಟ್ರಗಳಾದವು. ಆದರೆ ಕಾಶ್ಮೀರದ ರಾಜ ಹರಿಸಿಂಗ್(Hari singh) ಸ್ವತಂತ್ರ್ಯವಾಗಿ ಉಳಿಯಬೇಕೆಂದು ಬೇರೆ ರಾಷ್ಟ್ರದ ಜೊತೆ ಒಂದಾಗಲಿಲ್ಲ .

ಆದರೆ ಕಾಶ್ಮೀರದ ಮೇಲೆ ಪಾಕಿಸ್ತಾನ(Pakistan) ದಾಳಿ ನಡೆಸಿದಾಗ ರಾಜ ಭಾರತದ ಸಹಾಯ ಹಸ್ತ ಕೇಳುತ್ತಾರೆ. ಆ ಸಂದರ್ಭದಲ್ಲಿ ಕಾಶ್ಮೀರವನ್ನು (Indira Gandhi death accidental) ಭಾರತದ ಜೊತೆ ವಿಲೀನಗೊಳಿಸಲು ಒಪ್ಪಿಕೊಳ್ಳುತ್ತಾರೆ.

ಈ ವೇಳೆ ರಾಜಹರಿಸಿಂಗ್ ಕೆಲವು ಷರತ್ತುಗಳನ್ನು ಮುಂದಿಡುತ್ತಾರೆ. ಈ ಸಂದರ್ಭದಲ್ಲಿ ಹುಟ್ಟು ಪಡೆದದ್ದೇ ಕಲಂ 370.

370 ನೆ ವಿಧಿಯನ್ನು (35 ಎ ಕಲಂ) ರದ್ದುಗೊಳಿಸಿದ ನಂತರ ಆದ ಬದಲಾವಣೆಗಳೇನು?

ರಶ್ಮಿತಾ ಅನೀಶ್‌

Exit mobile version