Yadagiri: ಇಂದು (ನ.೪) ಕಲಬುರಗಿ ಹಾಗೂ ಯಾದಗಿರಿಯಲ್ಲಿ ಕೆಪಿಎಸ್ಸಿಯ ಸಿ ಗ್ರೂಪ್ (Inspection for KPSC exam students) ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷೆಗೆ
ಕಟ್ಟುನಿಟ್ಟಿನ ತಪಾಸಣೆ ಮೂಲಕ ಪರೀಕ್ಷಾರ್ಥಿಗಳನ್ನ ಒಳಗೆ ಬಿಡಲಾಗಿದೆ. ಯಾದಗಿರಿಯಲ್ಲಿ ಪರೀಕ್ಷಾ ಸಮಯದ ಒಂದೂವರೆ ಗಂಟೆ ಮೊದಲೇ ಪೊಲೀಸರು ಪರೀಕ್ಷಾರ್ಥಿಗಳ ತಪಾಸಣೆ
ಮಾಡಿದ್ದಾರೆ. FDA ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದ ಹಿನ್ನಲೆ ಯಾದಗಿರಿಯಲ್ಲಿ ಪರೀಕ್ಷಾ ಸಮಯದ ಒಂದೂವರೆ ಗಂಟೆ ಮೊದಲೇ ಪೊಲೀಸರು ಪರೀಕ್ಷಾರ್ಥಿಗಳ ತಪಾಸಣೆ ಮಾಡಿದ್ದು,
ಪರೀಕ್ಷಾರ್ಥಿಗಳ ಕಿವಿ ಓಲೆ, ಚೈನ್, ಕಾಲುಂಗುರ (Inspection for KPSC exam students) ಸೇರಿದಂತೆ ಎಲ್ಲವನೂ ತೆಗೆಸಿದ್ದಾರೆ.
ಯಾದಗಿರಿಯ ಒಟ್ಟು ಐದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದು, ಒಬ್ಬೊಬ್ಬ ಪರೀಕ್ಷಾರ್ಥಿಯನ್ನ ನಾಲ್ಕು ಭಾರೀ ಪರೀಶಿಲನೆ ನಡೆಸಿದ್ದಾರೆ. FDA ಪರೀಕ್ಷೆ ಅಕ್ರಮದ ನಂತರ ಎಚ್ಚೆತ್ತುಕೊಂಡ
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಫುಲ್ ಅಲರ್ಟ್ (Full Alert) ಆಗಿದೆ. ಯಾದಗಿರಿಯ ಒಟ್ಟು ಐದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದೆ.
1 ಡಿವೈಎಸ್ಪಿ(DYSP), 2 ಸಿಪಿಐ, 6 ಪಿಎಸ್ಐ (PSI) ಸೇರಿ ನೂರಕ್ಕೂ ಅಧಿಕ ಪೊಲೀಸ್ ಪೇದೆಗಳ ನಿಯೋಜನೆ ಮಾಡಲಾಗಿದ್ದು, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ತಪಾಸಣೆ
ಬಳಿಕವೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಇನ್ನು ಕಲಬುರಗಿಯಲ್ಲಿ ಇಂದು ಸಾಮಾನ್ಯ ಕನ್ನಡ ಪರೀಕ್ಷೆ ನಡೆಯುತ್ತಿದ್ದು, ಒಂದು ಗಂಟೆ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಬಂದವರ ತಪಾಸಣೆ
ಮಾಡಿ ಒಳಗೆ ಬಿಡಲಾಗಿದೆ.
ಒಬ್ಬೊಬ್ಬ ಪರೀಕ್ಷಾರ್ಥಿಗಳನ್ನ 4 ಬಾರಿ ತಪಾಸಣೆ ಮಾಡಲಾಗುತ್ತಿದ್ದು, ಕಲಬುರಗಿಯಲ್ಲಿ 11 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದೆ. ಯಾವುದೇ ಅಕ್ರಮ ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ FDA ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಕಳೆದ ವರ್ಷ ನಡೆದ 545 ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಸದ್ದು ಮಾಡಿದ ರೀತಿಯಲ್ಲೇ ಇತ್ತೀಚೆಗೆ
ನಡೆದ KEA, FDA ನೇಮಕಾತಿ ಪರೀಕ್ಷೆ ಅಕ್ರಮ ಕೂಡ ಭಾರೀ ಸದ್ದು ಮಾಡ್ತಿದೆ.
KEA ನಡೆಸಿದ FDA ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ (Bluetooth) ಬಳಸಿ ಅಕ್ರಮವೆಸಗುತ್ತಿದ್ದ ಅಭ್ಯರ್ಥಿಗಳನ್ನು ಕಲಬುರಗಿ ಮತ್ತು ಯಾದಗಿರಿ ಪೊಲೀಸರು ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ 5 ಜನ ಅಭ್ಯರ್ಥಿಗಳು ಸೇರಿ 12 ಕ್ಕೂ ಹೆಚ್ಚು ಜನರನ್ನ ಪೊಲೀಸರು ಕಂಬಿ ಹಿಂದೆ ತಳ್ಳಿ ತೀವ್ರ ವಿಚಾರಣೆ ನಡೆಸ್ತಿದ್ದಾರೆ.
ಇದನ್ನು ಓದಿ: “ಇದು ಇವರ ಸನಾತನ ಧರ್ಮ “ – ಪ್ರಧಾನಿ ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ
- ಭವ್ಯಶ್ರೀ ಆರ್.ಜೆ