ಊಬರ್ ಓಡಿಸುತ್ತ, ತಾಯ್ತನವನ್ನು ನಿಭಾಯಿಸುತ್ತಿರುವ ಬೆಂಗಳೂರಿನ ಮಹಿಳೆಗೆ ನೆಟ್ಟಿಗರ ಶ್ಲಾಘನೆ

Bengaluru : ಎಲ್ಲಾ ವಸ್ತುಗಳ ಬೆಳೆ ಗಗನಕ್ಕೇರಿರುವ ಈ ಕಾಲದಲ್ಲಿ, ಬೆಂಗಳೂರಿನಂತಹ (Inspiring Woman Cab Driver) ಮಹಾನಗರದಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗಷ್ಟೇ ಗೊತ್ತು.

ಇಂತಹ ಸಂದರ್ಭದಲ್ಲಿ ನಿರುದ್ಯೋಗ ಎನ್ನುವ ಮಹಾಮಾರಿಗೆ ಹೆದರಿ, ಆತ್ಮಹತ್ಯೆಯಂತಹ ಮಾರ್ಗ ಹಿಡಿಯುವವರೇ ಹೆಚ್ಚು.

ಇಂತವರಿಗೆ ಸ್ಫೂರ್ತಿಯಾಗಿ ನಿಂತಿರುವ ಮಹಿಳೆಯೊಬ್ಬರ ಕಥೆ ಇಲ್ಲಿದೆ.

ಕ್ಯಾಬ್ (Cab) ಓಡಿಸುತ್ತಾ ತಮ್ಮ ಬದುಕು ಕಟ್ಟಿಕೊಂಡಿರುವ ಮಹಿಳಾ ಚಾಲಕಿಯೊಬ್ಬರ ಕತೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದ್ದು, ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.


ಈ ದಿಟ್ಟ ಮಹಿಳೆಯ ಜೀವನ ಕಥೆಯನ್ನು ಹಂಚಿಕೊಂಡವರು, CloudSEK ಎನ್ನುವ ಕಂಪೆನಿಯೊಂದರ ಸಹ ಸಂಸ್ಥಾಪಕರಾದ ರಾಹುಲ್ ಸಸಿ ಎನ್ನುವ ವ್ಯಕ್ತಿ. ಈ ಮಹಿಳೆ ಕ್ಯಾಬ್‌ ಚಾಲಕಿ ಮಾತ್ರವಲ್ಲ, ಒಂದು ಮಗುವಿನ ತಾಯಿ ಕೂಡ.

ಕಷ್ಟದ ನಡುವೆಯೂ ಕನಸುಗಳನ್ನು ಕಮರಲು ಬಿಡದೇ, ಸಾವಿರಾರು ಕನಸುಗಳನ್ನು ಹೊತ್ತು ಬದುಕು ಸಾಗಿಸುತ್ತಿರುವ ಮಹಿಳೆಯೊಬ್ಬರ ಕತೆಯನ್ನು ತಮ್ಮ ಲಿಂಕ್ಡಿನ್ ಪೋಸ್ಟ್‌ನಲ್ಲಿ ರಾಹುಲ್ ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ನ ಸಾರಾಂಶ ಇಲ್ಲಿದೆ.

ಇದನ್ನೂ ಓದಿ : https://vijayatimes.com/chethan-statement-pricked/

“ನಿನ್ನೆ ನನ್ನ ಸ್ನೇಹಿತ ನನಗಾಗಿ ಉಬರ್ ಕ್ಯಾಬ್ ಬುಕ್ ಮಾಡಿದ್ದರು, ಈ ವೇಳೆ ನನ್ನನ್ನು ಕರೆದುಕೊಂಡು ಹೋಗಲು ಡ್ರೈವರ್ ಆಗಿ ಮಹಿಳೆಯೊಬ್ಬರು (Inspiring Woman Cab Driver) ಬಂದರು.

ಕಾರು ನನ್ನನ್ನು ಕರೆದುಕೊಂಡು ಹೋಗುತ್ತಿರಬೇಕಾದರೆ ಮುಂಭಾಗದ ಸೀಟಿನಲ್ಲಿ ಮಗುವೊಂದು ಮಲಗಿರುವುದನ್ನು ಗಮನಿಸಿ, ಆ ಮಹಿಳೆ ಬಳಿ ಮೇಡಂ ಇದು ನಿಮ್ಮ ಮಗುವೇ ಎಂದು ಕೇಳಿದೆ.

ಆಗ ಮಾತು ಆರಂಭಿಸಿದ ಅವರು ಹೌದು ಸರ್‌, ನನ್ನ ಮಗಳು, ಅವಳಿಗೆ ಈಗ ಶಾಲೆಗೆ ರಜೆ ಇದೆ. ಹೀಗಾಗಿ ನಾನು ಕೆಲಸ ಹಾಗೂ ಮಗುವನ್ನು ನೋಡಿಕೊಳ್ಳುವ ಎರಡೆರಡು ಕಾರ್ಯವನ್ನು ಜೊತೆ ಜೊತೆಯಲ್ಲಿ ಮಾಡುತ್ತಿದ್ದೇನೆ ಎಂದರು.

ಇದರಿಂದ ಕುತೂಹಲಕ್ಕೊಳಗಾದ ನಾನು ಆಕೆಯ ಬಗ್ಗೆ ಇನ್ನಷ್ಟು ತಿಳಿಯಲು ಆರಂಭಿಸಿ ಮಾತು ಮುಂದುವರಿಸಿದೆ,

ಇದನ್ನೂ ಓದಿ : https://vijayatimes.com/appu-is-karnataka-ratna/

ಆಗ ಆಕೆಯ ಜೀವನ ಕಥೆ ತಿಳಿಯಿತು. ಆ ಮಹಿಳಾ ಕಾರು ಚಾಲಕಿಯ ಹೆಸರು ನಂದಿನಿ, ಸದ್ಯ ಬೆಂಗಳೂರಿನಲ್ಲಿ ಉಬರ್ ಕ್ಯಾಬ್ (Uber Cab) ಚಾಲಕಿಯಾಗಿರುವ ನಂದಿನಿಗೆ ಉದ್ಯಮಿಯಾಗಬೇಕೆಂಬ ಆಸೆಯಿತ್ತು.

ಹೀಗಾಗಿ ಕೋವಿಡ್ ಆರಂಭವಾಗುವುದಕ್ಕೂ ಮೊದಲು, ತಮ್ಮೆಲ್ಲಾ ಉಳಿತಾಯದೊಂದಿಗೆ ಆಹಾರ ಉದ್ಯಮವನ್ನು ಆರಂಭಿಸಿದರು.

ಆದರೆ ಮಹಾಮಾರಿಯಂತೆ ಬಂದ ಕೋವಿಡ್ ಎಲ್ಲವನ್ನೂ ಸರ್ವನಾಶಗೊಳಿಸಿತು. ವ್ಯವಹಾರ ಕೈ ಹಿಡಿಯದೇ, ಹಾಕಿದ ಬಂಡವಾಳ ಕೈಗೆ ಬಾರದೇ ಅವರು ಕಂಗಾಲಾದರು.

ನಂತರ, ಹೊಟ್ಟೆಪಾಡಿನ ಸಲುವಾಗಿ ಉಬರ್ ಕ್ಯಾಬ್ ಚಾಲಕರಾಗಿ ಕೆಲಸ ಮಾಡಲು ಶುರು ಮಾಡಿದರು.

ದಿನಕ್ಕೆ 12 ಗಂಟೆ ಕೆಲಸ ಶುರು ಮಾಡಿದ್ದು, ಇದಕ್ಕಿಂತಲೂ ಹೆಚ್ಚು ಕೆಲಸ ಮಾಡುವುದಕ್ಕೂ ನಾನು ಸಿದ್ಧವಾಗಿದ್ದೇನೆ ಎನ್ನುವ ನಂದಿನಿ, ಹಣವನ್ನು ಉಳಿಸಿ ತಾನು ಕಳೆದುಕೊಂಡಿದ್ದನ್ನೆಲ್ಲಾ ಮತ್ತೆ ಗಳಿಸುವ ಉತ್ಸಾಹದಲ್ಲಿದ್ದಾರೆ.

ಇವರೊಂದಿಗಿನ ಪ್ರಯಾಣ ಕೊನೆಗೊಳ್ಳುತ್ತಿದಂತೆ, ನಾನು ಅವರೊಂದಿಗೆ ಒಂದು ಸೆಲ್ಫಿಗಾಗಿ ವಿನಂತಿಸಿದೆ. ಅವರು ಏಕೆ ಎಂದು ಆಶ್ಚರ್ಯದಿಂದ ಕೇಳಿದಾಗ, ಪ್ರತಿಕ್ರಿಯಿಸಿದ ನಾನು,

ಮೇಡಂ ನಿಮ್ಮ ಕತೆ ಸ್ಪೂರ್ತಿದಾಯಕವಾಗಿದ್ದು, ಅನೇಕರು ಸಣ್ಣ ಪುಟ್ಟ ವಿಷಯಗಳಿಗೆ ಬದುಕಿನಲ್ಲಿ ವೈಫಲ್ಯ ಕಂಡಾಗ ನಿರಾಶೆಯಿಂದ ಬೇರೆ ಮಾರ್ಗ ಹಿಡಿಯುತ್ತಾರೆ.

ಅದರೆ ನೀವು ಕಷ್ಟ ಸೋಲುಗಳಿಗೆ ಎದೆಗುಂದದೇ ಹೋರಾಡುತ್ತಿದ್ದೀರಿ, ನಿಮ್ಮ ಕತೆ ಅನೇಕರಿಗೆ ಸ್ಪೂರ್ತಿಯಾಗಬಹುದು.

ಇದನ್ನು ನಾನು ಇತರರೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ ಎಂದಾಗ ಆಕೆ ಮುಗುಳ್ನಕ್ಕು ಒಪ್ಪಿಗೆ ಸೂಚಿಸಿದರು” ಎಂದು ರಾಹುಲ್ ತಮ್ಮ ಪೋಸ್ಟ್ ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

ಕೋವಿಡ್ ಸಂಕಷ್ಟ ಸಮಯದಲ್ಲಂತೂ ಸಾವಿರಾರು ಜನ, ಉಬರ್ ಓಲಾದಲ್ಲಿ ಚಾಲಕರಾಗಿ, ಝೋಮ್ಯಾಟೋ, ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್‌ಗಳಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

https://youtu.be/ZSfGYhQT2UA ಹೆದ್ದಾರಿ ತುಂಬ ಹೊಂಡಗಳಿವೆ ಹುಷಾರ್ …!

ಒಬ್ಬೊಬ್ಬರ ಜೀವನ ಹಾಗೂ ಕಷ್ಟ ಒಂದೊಂದು ರೀತಿಯಿದ್ದರೂ, ಎಲ್ಲರೂ ತಮ್ಮ ತುತ್ತಿನ ಚೀಲ ತುಂಬಿಸುವುದಕ್ಕಾಗಿಯೇ ಹೋರಾಡುತ್ತಿದ್ದಾರೆ.

ಹೃದಯ ಶ್ರೀಮಂತಿಕೆಯುಳ್ಳ ಕೆಲ ಗ್ರಾಹಕರು, ಇಂತಹ ಸ್ಫೂರ್ತಿದಾಯಕ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಅವರನ್ನು ಜನ ಗುರುತಿಸುವಂತೆ ಮಾಡುತ್ತಿರುವುದು ಶ್ಲಾಘನೀಯ.
Exit mobile version