ಜಗತ್ತಿನಲ್ಲಿ ಸುಮಾರು 10,000ಕ್ಕೂ ಹೆಚ್ಚು ವಿಧವಿಧವಾದ ಟೊಮೋಟೊಗಳಿವೆ! ; ಇಲ್ಲಿದೆ ಓದಿ ಮಾಹಿತಿ

Vegetables

ಇಂದು ಎಲ್ಲರ ಅಡುಗೆ ಮನೆಯಲ್ಲಿಯೂ ಟೊಮ್ಯಾಟೊ(Tomato) ಕಂಡುಬರುತ್ತದೆ. ಟೊಮೆಟೊ ಇರದೆ ದಿನ ಸಾಗುವುದಿಲ್ಲ. ರಸಂ, ಸಾಂಬಾರು, ಗೊಜ್ಜು, ಚಟ್ನಿ ಎಲ್ಲದಕ್ಕೂ ಈ ಟೊಮ್ಯಾಟೊ ಬೇಕೇ ಬೇಕು. ಟೊಮ್ಯಾಟೊ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಟೊಮ್ಯಾಟೊ ಮನುಷ್ಯನ ಯೌವನವನ್ನು ಕಾಪಾಡುತ್ತದೆ, ಏಕೆಂದರೆ ಟೊಮ್ಯಾಟೊ ಸರಿಯಾದ ಜೀರ್ಣಶಕ್ತಿಯನ್ನು ನಿರ್ವಹಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ಹೊಟ್ಟೆಯ ಹುಳುಗಳನ್ನು ನಿವಾರಿಸುತ್ತದೆ. ಹೊಟ್ಟೆ ಶುದ್ಧವಾಗಿದ್ದರೆ ಮನುಷ್ಯ ಆರೋಗ್ಯವಂತನಾಗಿರುತ್ತಾನೆ.

ಆರೋಗ್ಯವಂತನಾಗಿದ್ದರೆ ಯೌವನವಾಗಿ ಕಾಣುತ್ತಾನೆ ಎಂಬುದು ಸರಳವಾದ ವಿಷಯ. ಟೊಮ್ಯಾಟೊ ಇನ್ನೊಂದು ವಿಶೇಷತೆ ಎಂದರೆ ಅದರಲ್ಲಿ ಕಂಡುಬರುವ ವಿಶೇಷ ಅಂಶಗಳು ಸೂರ್ಯನ ಬಿಸಿಲು ಮತ್ತು ನೇರಳಾತೀತ ಕಿರಣಗಳಿಂದ ಮಾನವ ಚರ್ಮವನ್ನು ರಕ್ಷಿಸುತ್ತದೆ. ಆದರೆ ಟೊಮ್ಯಾಟೊವನ್ನು ಅತಿಯಾಗಿ ಸೇವಿಸಿದರೆ ಆಮ್ಲೀಯತೆಯನ್ನು ಉಂಟು ಮಾಡುತ್ತದೆ. ಇನ್ನು, ಭಾರತೀಯರ ಅಡುಗೆ ಮನೆಗೆ ಟೊಮ್ಯಾಟೊ ಪ್ರವೇಶ ಬಹಳ ತಡವಾಗಿಯೇ ಆಗಿದೆ ಎನ್ನುವುದು ವಿಶೇಷ. ಅದೇ ರೀತಿ, ಟೊಮ್ಯಾಟೊ ತರಕಾರಿಯೋ? ಹಣ್ಣೋ? ಎಂಬುದು ಹಲವರನ್ನು ಕಾಡುವ ಪ್ರಶ್ನೆ.

ಆದರೆ ಟೊಮ್ಯಾಟೊ ಖಂಡಿತವಾಗಿಯೂ ಒಂದು ತರಕಾರಿಯಾಗಿದ್ದು, ಇದನ್ನು ಇಡೀ ಪ್ರಪಂಚದಲ್ಲಿ ಹೆಚ್ಚು ಸೇವಿಸಲಾಗುತ್ತದೆ. ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಖಂಡಿತಾ ಟೊಮ್ಯಾಟೊ ಕಾಣಸಿಗುತ್ತದೆ. ನಿತ್ಯಹರಿದ್ವರ್ಣ ಟೊಮ್ಯಾಟೊ ಪ್ರತಿ ಋತುವಿನಲ್ಲಿ ಲಭ್ಯವಿರುತ್ತದೆ. ಪ್ರಪಂಚದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ವಿಧದ ಟೊಮೆಟೊಗಳನ್ನು ಬೆಳೆಯಲಾಗುತ್ತದೆ. ಭಾರತದಲ್ಲಿ ಮುಂಬೈ, ನಾಸಿಕ್, ಜೈಪುರಿಯಾ ಟೊಮ್ಯಾಟೊ ಜತೆಗೆ ಚೆರ್ರಿ ಟೊಮ್ಯಾಟೊ ಕೂಡ ಹೆಚ್ಚು ಸಿಗುತ್ತದೆ. ಇದರ ಇತಿಹಾಸ ಗಮನಿಸುವುದಾದರೆ, ಟೊಮ್ಯಾಟೊ ಕೃಷಿಯು ಪೆರುವಿನಲ್ಲಿ ಐದನೇ ಶತಮಾನದಲ್ಲಿ ಪ್ರಾರಂಭವಾಯಿತು.

ನಂತರ ಅದು ಸ್ಪೇನ್, ಮೆಕ್ಸಿಕೋ ಮೂಲಕ ಮುಂದುವರೆಯಿತು. ಒಂದು ಕಾಲದಲ್ಲಿ ಅಮೆರಿಕಾದಲ್ಲಿ ಇದನ್ನು ‘ಲವ್ ಆಪಲ್’ ಎಂದು ಕರೆಯಲಾಗುತ್ತಿತ್ತು. ಕೆಲವು ದೇಶಗಳಲ್ಲಿ, ಟೊಮ್ಯಾಟೊದ ಕೆಂಪು ಬಣ್ಣವನ್ನು ನೋಡಿ, ಅದನ್ನು ವಿಷಕಾರಿ ಎಂದು ಪರಿಗಣಿಸಲಾಯಿತು. ಆದರೆ ನಂತರ ಇದು ವಿಷಕಾರಿಯಲ್ಲ ಎನ್ನುವ ಅಂಶ ಬೆಳಕಿಗೆ ಬಂದಿತು.
ಇನ್ನು, ಭಾರತಕ್ಕೆ ಟೊಮ್ಯಾಟೊ ಪ್ರವೇಶವು 16ನೇ ಶತಮಾನದಲ್ಲಿ ಆಗಿದೆ ಎಂದು ನಂಬಲಾಗಿದೆ. ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ವ್ಯಾಪಾರಿಗಳ ಮೂಲಕ ದೇಶಕ್ಕೆ ಟೊಮ್ಯಾಟೊ ಪ್ರವೇಶವಾಯಿತು.

ಆ ಸಮಯದಲ್ಲಿ ಭಾರತದಲ್ಲಿ ಇದನ್ನು ‘ವಿದೇಶಿ ಬದನೆ’ ಎಂದು ಕರೆಯಲಾಗುತ್ತಿತ್ತು. ಆದರೆ ಅದರ ಹಳೆಯ ಹೆಸರು ಟೊಮ್ಯಾಟೊ ಆಗಿರುವುದರಿಂದ ಅದೇ ಹೆಸರಿನಿಂದ ಜನಪ್ರಿಯವಾಗಿದೆ. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಎರಡನೇ ಯುದ್ಧದ ಸಮಯದಲ್ಲಿ ಟೊಮ್ಯಾಟೊ ಕೃಷಿ ಮತ್ತು ಬಳಕೆ ಪ್ರಪಂಚದಾದ್ಯಂತ ಹೆಚ್ಚಾಯಿತು ಎನ್ನುವ ಉಲ್ಲೇಖವಿದೆ.

Exit mobile version