ಭೂಮಂಡಲದಲ್ಲಿ ವೈವಿದ್ಯಮಯ(Biodiversity) ಪ್ರಾಣಿ ಸಂಕುಲ ಬದುಕುತ್ತಿದ್ದು, ಪ್ರತಿಯೊಂದು ಜೀವಿಯೂ ಕೂಡ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಅಂತಹುದೇ ಒಂದು ವಿಶೇಷ ಪ್ರಾಣಿ(Special Animal) ಪಾಂಡಾ(Panda). ಪಾಂಡಾಗಳು ಮೈಮಾಟ ಮತ್ತು ಆಕಾರದಲ್ಲಿ ಕರಡಿಯನ್ನು ಹೋಲುತ್ತವೆ. ಪಾಂಡಾವನ್ನು ಶತಮಾನಗಳಿಂದಲೂ ಚೀನಾದಲ್ಲಿ ಶಾಂತಿ ಹಾಗೂ ಸ್ನೇಹದ ಸಂಕೇತವನ್ನಾಗಿ ಬಿಂಬಿಸಲಾಗಿದೆ.

ಇವುಗಳದ್ದು ಆಕ್ರಮಣಕಾರಿ ಸ್ವಭಾವವಲ್ಲ, ಸಾಮಾನ್ಯವಾಗಿ ತಾನಾಗಿಯೇ ಇತರ ಪ್ರಾಣಿಗಳ ಮೇಲೆ ಆಕ್ರಮಣ ಮಾಡುವುದಿಲ್ಲ. ಈ ನಡವಳಿಕೆಯೇ ಪಾಂಡಾವು ಶಾಂತಿಯ ಸಂಕೇತವಾಗಿ ರೂಪುಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಹಿಂದೆ, ದೊಡ್ಡ ದೊಡ್ಡ ಕಾಳಗವನ್ನು ಕೊನೆಗೊಳಿಸಲು ಪಾಂಡಾ ಚಿತ್ರವಿರುವ ಬಾವುಟಗಳನ್ನು ಬಳಸಲಾಗುತ್ತಿತ್ತು. ಪಾಂಡಾಗಳ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಇವು ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಇಡುವುದರಿಂದ, ವೇಗವಾಗಿ ಓಡುವುದಿಲ್ಲ. ಗಂಡು ಪಾಂಡಾ ಮರಿಯು ದೊಡ್ಡದಾಗಲು 5 ವರ್ಷ ತೆಗೆದುಕೊಂಡರೆ, ಹೆಣ್ಣು ಪಾಂಡಾ ಮರಿ 7 ವರ್ಷ ತೆಗೆದುಕೊಳ್ಳುತ್ತದೆ.
ಪಾಂಡಾಗಳು 42 ಹಲ್ಲುಗಳನ್ನು ಹೊಂದಿದ್ದು, ನಮ್ಮಂತೆ ಇವುಗಳಿಗೂ ಚಿಕ್ಕ ವಯಸ್ಸಿನಲ್ಲಿನ ಹಲ್ಲುಗಳು ಬಿದ್ದು ಹೋಗಿ, ಮತ್ತೆ ಹೊಸ ಹಲ್ಲುಗಳು ಬರುತ್ತವೆ. ಅಂತಾರಾಷ್ಟ್ರೀಯ ಸಂರಕ್ಷಣಾ ಸಂಸ್ಥೆ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಸುಮಾರು ವರ್ಷಗಳಿಂದ ಪಾಂಡಾವನ್ನು ತನ್ನ ಗುರುತನ್ನಾಗಿಸಿಕೊಂಡಿದೆ.

ಇವು ತುಂಬಾ ಸೋಮಾರಿ ಸ್ವಭಾವದಾಗಿದ್ದು, ದಿನದ ಹೆಚ್ಚಿನ ಸಮಯವನ್ನು ತಿನ್ನುವುದು ಹಾಗೂ ಮಲಗುವುದರಲ್ಲಿಯೇ ಕಳೆಯುತ್ತವೆ. ಆದರೆ ಚಳಿಗಾಲದಲ್ಲಿ ತುಂಬಾ ಕಡಿಮೆ ನಿದ್ದೆ ಮಾಡುತ್ತವೆ. ಇವು ನೋಡಲು ತುಂಬಾ ಮುದ್ದಾಗಿ ಕಾಣಿಸುವುದರಿಂದ ಹೆಚ್ಚಿನ ಮಂದಿಗೆ ಇಷ್ಟವಾಗುತ್ತದೆ. ಮಾರುಕಟ್ಟೆಯಲ್ಲಿನ “ಟೆಡ್ಡಿ ಬೇರ್” ರೂಪದ ಬೊಂಬೆಗಳು ಇವುಗಳನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ.
ಸಾಮಾನ್ಯವಾಗಿ ಇವು ಬಿದಿರು ಗಿಡಗಳಲ್ಲಿನ ಬೀಜಗಳನ್ನು ಬೇರೆ ಕಡೆಗೂ ಹರಡುವುದರಿಂದ ಬಿದಿರಿನ ಕಾಡುಗಳ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತವೆ.
ಪಾಂಡಾಗಳು ಕಾಡಿನಲ್ಲಿ ಸಾಮಾನ್ಯವಾಗಿ 14 ರಿಂದ 20 ವರ್ಷಗಳ ಕಾಲ ಬದುಕಿದರೆ, ಕಾಡಿನ ಹೊರಗೆ ಅಂದರೆ, ಜೂ(Zoo) ಮುಂತಾದ ಜಾಗಗಳಲ್ಲಿ ಸುಮಾರು 30 ವರ್ಷ ಬದುಕುತ್ತವೆ ಎಂದು ಹೇಳಲಾಗುತ್ತದೆ.
ಚೀನಾದಲ್ಲಿ ಪಾಂಡಾಗಳಿಗೆ ಒಂದು ವಿಶೇಷವಾದ ಸ್ಥಾನವಿದ್ದು, ಅಲ್ಲಿನ ಸರಕಾರ ಇವುಗಳನ್ನು ರಾಷ್ಟೀಯ ಸಂಪತ್ತು ಎಂದು ಘೋಷಿಸಿದೆ.
ಇನ್ನು ಇವುಗಳ ಹಲ್ಲುಗಳು, ಗಾತ್ರದಲ್ಲಿ ಮನುಷ್ಯನ ಹಲ್ಲುಗಳಿಗಿಂತ ಸುಮಾರು ಏಳು ಪಟ್ಟು ದೊಡ್ಡದಾಗಿ ಹಾಗೂ ಗಟ್ಟಿಯಾಗಿರುತ್ತವೆ. ಕಾಲುಗಳಿನ ಪಂಜಗಳು ವಿಶೇಷವಾದ ರಚನೆಯನ್ನು ಹೊಂದಿದ್ದು, ಮರ ಹತ್ತಲು ಸಹಾಯಮಾಡುತ್ತದೆ.

ಇನ್ನು ಪಾಂಡಾದ ಮರಿ ಜನಿಸಿದ ಸಮಯದಲ್ಲಿ ಇಲಿ ಮರಿಯಷ್ಟು ಚಿಕ್ಕದಿರುತ್ತದೆ. ಎಷ್ಟೊಂದು ಇಂಟೆರೆಸ್ಟಿಂಗ್ ಮಾಹಿತಿ ಅಲ್ವಾ! ಪ್ರಾಣಿ ಸಂತತಿ ಅಮೂಲ್ಯವಾದ ಆಸ್ತಿ. ಇದನ್ನು ಸಾಧ್ಯವಾದಷ್ಟು ರಕ್ಷಿಸಿ ನಮ್ಮ ಮುಂದಿನ ಪೀಳಿಗೆ ಸಹಾಯ ಮಾಡೋಣ.
- ಪವಿತ್ರ ಸಚಿನ್