download app

FOLLOW US ON >

Wednesday, June 29, 2022
Breaking News
ಸಿದ್ದರಾಮಯ್ಯ ಅಲೆಯೂ ಇಲ್ಲ, ಒಂದು ಗಟ್ಟಿಯಾದ ನೆಲೆಯೂ ಇಲ್ಲ : ಬಿಜೆಪಿನೇಪಾಳದಲ್ಲಿ ಪಾನಿಪುರಿ ನಿಷೇಧ ; ಯಾಕೆ ಎಂಬುದಕ್ಕೆ ಇಲ್ಲಿದೆ ಉತ್ತರಗವಿಮಠಕ್ಕೆ ಹರಿದು ಬರುತ್ತಿದೆ ದೇಣಿಗೆ, ಸರ್ಕಾರದಿಂದಲೂ 10 ಕೋಟಿ ಘೋಷಣೆGST ಹೊಸ ದರಗಳ ವಿವರಣೆ ; ವಸ್ತುಗಳ ಸಂಪೂರ್ಣ ಪಟ್ಟಿ ಇಲ್ಲಿದೆಬಿಜೆಪಿ ಅಂದ್ರೆ ಬಿಸ್ನೆಸ್ ಕ್ಲಾಸಿನ ಕಾಮಧೇನು : ಹೆಚ್.ಡಿಕೆಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆಮಂಡ್ಯ ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ ; ಸುಮಲತಾಕನ್ಹಯ್ಯಾ ಹತ್ಯೆ ; ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ : ಸಿದ್ದರಾಮಯ್ಯನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ವ್ಯಕ್ತಿಯ ಶಿರಚ್ಛೇದ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು
English English Kannada Kannada

ಮೂರು ಹೃದಯ, ಒಂಬತ್ತು ಮಿದುಳು ಮತ್ತು ನೀಲಿ ರಕ್ತವನ್ನು ಹೊಂದಿರುವ ಪ್ರಾಣಿ ಆಕ್ಟೊಪಸ್!

ಕಡಲಿನೊಳಗೆ ಜೀವಿಸುವ ಈ ಪ್ರಾಣಿ(Animal), ಕುತೂಹಲಕಾರಿ(Intresting) ಹಾಗೂ ವಿಚಿತ್ರ(Weird) ಪ್ರಾಣಿಗಳಲ್ಲೊಂದು ಎಂದು ಪರಿಗಣಿಸಲ್ಪಡುತ್ತದೆ.
octopus

ಕಡಲಿನೊಳಗೆ ಜೀವಿಸುವ ಈ ಪ್ರಾಣಿ(Animal), ಕುತೂಹಲಕಾರಿ(Intresting) ಹಾಗೂ ವಿಚಿತ್ರ(Weird) ಪ್ರಾಣಿಗಳಲ್ಲೊಂದು ಎಂದು ಪರಿಗಣಿಸಲ್ಪಡುತ್ತದೆ.

animal kingdom

ಅಕ್ಟೋಪಸ್(Octopus)ಪ್ರಾಣಿ ಎಂಟು ಕಾಲುಗಳನ್ನು ಹೊಂದಿದ್ದು, ಇದರ ಕಾಲುಗಳ ಚಲನೆಯನ್ನು ನೋಡುವುದೇ ಮನಮೋಹಕ. ಕಾಲುಗಳು ಚಲನೆಯ ಜೊತೆಗೆ ಆಹಾರ ಸಂಗ್ರಹಿಸಲೂ ನೆರವಾಗುತ್ತದೆ. ಆಕ್ಟೋಪಸ್‌ಗಳು ವಿಶಾಲವಾದ ಸಮುದ್ರದಲ್ಲಿ ದಿನದ ಬಹುಪಾಲು ಸಮಯ ಆಹಾರದ ಬೇಟೆಗಾಗಿ ಸಂಚರಿಸುತ್ತಿರುವುದರಿಂದ ಒಂದೇ ಕಡೆ ನೆಲೆ ನಿಲ್ಲುವುದು ಬಹಳ ಅಪರೂಪ. ಕನಿಷ್ಠ 8 ರಿಂದ 10 ದಿನಗಳಿಗೆ ಒಮ್ಮೆ ಅವು ತಮ್ಮ ಆವಾಸವನ್ನು ಬದಲಿಸುತ್ತವೆ! ಕಸದ ರಾಶಿಗಳು, ಕಲ್ಲಿನ ಪೊಟರೆಗಳು, ಮರಳಿನ ದಿಬ್ಬಗಳು ಮುಂತಾದ ಭೂಪ್ರದೇಶವನ್ನು ತಮ್ಮ ನೆಲೆಯಾಗಿಸಿಕೊಳ್ಳುತ್ತವೆ.

ಆಕ್ಟೋಪಸ್ ಬಗ್ಗೆ ಸಾಮಾನ್ಯವಾಗಿ ಕೆಲವೊಂದು ವಿಷಯಗಳು ಗೊತ್ತೆ ಇರುತ್ತವೆ. ಆದರೆ ಆಕ್ಟೋಪಸ್ ಪ್ರಾಣಿಗೆ ಬೇರೆ ಪ್ರಾಣಿಯಂತೆ ಒಂದು ಹೃದಯವಿದೆಯಾ ಅಥವಾ ಒಂದಕ್ಕಿಂತ ಹೆಚ್ಚು ಹೃದಯವಿದೆಯಾ ಎಂಬ ಮಾಹಿತಿಯನ್ನು ನೀವು ತಿಳಿಯಲೇಬೇಕು. ಅಚ್ಚರಿಯಾದರು ಇದೇ ಸತ್ಯ, ಆಕ್ಟೋಪಸ್‍ಗಳಿಗೆ ಮೂರು ಹೃದಯಗಳಿವೆ. ಕೇವಲ ಮೂರು ಹೃದಯದ ಮಾತ್ರವಲ್ಲ, ಒಂಭತ್ತು ಮೆದುಳು ಮತ್ತು ನೀಲಿ ರಕ್ತವಿದೆ. ಎರಡು ಹೃದಯಗಳು ಕಿವಿಗಳಿಗೆ ರಕ್ತವನ್ನು ಪಂಪ್ ಮಾಡುತ್ತವೆ. ಇನ್ನು ಉಳಿದ ಹೃದಯವು ದೇಹದ ಉಳಿದ ಭಾಗಗಳಿಗೆ ರಕ್ತವನ್ನು ಪರಿಚಲಿಸುತ್ತದೆ.

animal

ನರಮಂಡಲದ ಒಂದು ಕೇಂದ್ರ ಮೆದುಳಿನ ಮತ್ತು ಚಲನೆಯನ್ನು ನಿಯಂತ್ರಿಸುವ ದೊಡ್ಡ ಗ್ಯಾಂಗ್ಲಿಯಾನ್ ಅನ್ನು ಒಳಗೊಂಡಿದೆ. ಆಕ್ಟೊಪಸ್ ಆಕ್ಟೋಪೋಡಾ ಅಂದ್ರೆ (ಎಂಟು ಕಾಲುಗಳಿರೋ) ಜಾತಿಯ ಸೆಫಾಲೋಪೋಡಾ ವರ್ಗಕ್ಕೆ ಸೇರಿದ ಜಲಚರ. ಆಕ್ಟೊಪಸ್ ಗಳಿಗೆ ಎರಡು ಕಣ್ಣುಗಳು ಮತ್ತು ನಾಲ್ಕು ಜೊತೆ ಬಾಹುಗಳಿದ್ದು, ಇತರ ಸೆಫಾಲೋಪೋಡ್ ಗಳಂತೆಯೇ ದ್ವಿಪಾರ್ಶ್ವಸಮಾನತೆ ಕಂಡುಬರುತ್ತದೆ. ಆಕ್ಟೊಪಸ್ಗೆ ಗಟ್ಟಿಯಾದ ಕೊಕ್ಕು ಇದ್ದು, ಅದರ ಬಾಯಿ ಬಾಹುಗಳ ಕೇಂದ್ರಭಾಗದಲ್ಲಿ ಇರುತ್ತದೆ.

ಸಾಮಾನ್ಯವಾಗಿ ಎಲ್ಲಾ ಆಕ್ಟೊಪಸ್ ಗಳಿಗೂ ಒಳಗಿನ ಅಥವಾ ಹೊರಗಿನ ಅಸ್ಥಿಪಂಜರವಿಲ್ಲದ ಕಾರಣ, ಬಹಳ ಕಿರಿದಾದ ಜಾಗಗಳಲ್ಲೂ ಅದು ನುಸುಳಲು ಅನುಕೂಲವಾಗುತ್ತದೆ. ಆಕ್ಟೊಪಸ್ ಗಳು ಬಹಳ ಬುದ್ಧಿವಂತ ಜಲಚರಗಳು, ಪ್ರಾಯಶಃ ಅಕಶೇರುಕಗಳಲ್ಲಿಯೇ ಅತ್ಯಂತ ಬುದ್ಧಿಯುಳ್ಳವು. ಆಕ್ಟೋಪಸ್ ಗಳು ಸಮುದ್ರದ ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ವಾಸಿಸುತ್ತವೆ. ಆಕ್ರಮಣಕಾರಿ ವಿರುದ್ಧ ರಕ್ಷಿಸಿಕೊಳ್ಳಲು, ಅವು ಅಡಗಿಕೊಳ್ಳುತ್ತವೆ, ತಲೆ ತಪ್ಪಿಸಿಕೊಳ್ಳುತ್ತವೆ, ಒಂದು ರೀತಿಯ ಇಂಕ್ ಅನ್ನು ರಕ್ಷಿಸಿಕೊಳ್ಳಲು ಉಗುಳುತ್ತವೆ ಅಥವಾ ಬಣ್ಣ ಬದಲಾಯಿಸಿ ತಪ್ಪಿಸಿಕೊಳ್ಳುತ್ತವೆ.

octopus

ಒಂದು ಆಕ್ಟೋಪಸ್ ಈಜುತ್ತಾ ಹೋದಂತೆ ತನ್ನ ಎಂಟು ತೋಳುಗಳನ್ನು ತನ್ನ ಹಿಂದೆ ಎಳೆದುಕೊಂಡು ಹೋಗುತ್ತದೆ. ಎಲ್ಲಾ ಆಕ್ಟೋಪಸ್ ಗಳು ವಿಷಮಯವಾದವುಗಳು, ಆದರೆ ಕೇವಲ ನೀಲಿ ಉಂಗುರದ ಆಕ್ಟೋಪಸ್ ಗಳು ಮಾನವರಿಗೆ ಪ್ರಾಣ ಘಾತುಕವಾದುವುಗಳು. ಈ ಪ್ರಾಣಿಯ ಎಂಟೂ ಕಾಲುಗಳ ಕೆಳಭಾಗದಲ್ಲಿ ಹೀರುಬಟ್ಟಲುಗಳಿರುತ್ತವೆ. ಅವುಗಳಲ್ಲಿ ರುಚಿಗ್ರಾಹಕ ಜೀವಕೋಶಗಳಿರುತ್ತವೆ. ಈ ಕೋಶಗಳ ಸಹಾಯದಿಂದ ಆಕ್ಟೋಪಸ್ ತನ್ನ ಕಾಲಿನಿಂದ ಮುಟ್ಟುವ ವಸ್ತುವಿನ ರುಚಿಯನ್ನು ತಿಳಿಯುತ್ತದೆ. ಆಕ್ಟೋಪಸ್‌ಗಳ ಜೀವಿತಾವಧಿ ಕೇವಲ 3 ರಿಂದ 5 ವರ್ಷಗಳು.

ಕೇವಲ ಆರು ತಿಂಗಳು ಬದುಕುವ ಪ್ರಬೇಧಗಳೂ ಇವೆ. ಅವುಗಳಲ್ಲಿನ ವೈವಿಧ್ಯತೆಗನುಗುಣವಾಗಿ ಸುಮಾರು 300 ಪ್ರಬೇಧಗಳನ್ನು ಜೀವವಿಜ್ಞಾನಿಗಳು ಗುರುತಿಸಿದ್ದಾರೆ. ಅಕಶೇರುಕ ಗುಂಪಿಗೆ ಸೇರಿದ ಪ್ರಾಣಿಗಳಲ್ಲಿ ಇವು ಅತೀ ಬುದ್ಧಿವಂತ ಎಂಬುದು ಜೀವಶಾಸ್ತ್ರಜ್ಞರ ಅಭಿಪ್ರಾಯ.

  • ಪವಿತ್ರ ಸಚಿನ್

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article