ಗಾಜಾ ಮೇಲಿನ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಇರಾನ್ ಅಧ್ಯಕ್ಷ ಮನವಿ

New Delhi: ಗಾಜಾಪಟ್ಟಿಯ (Gazapatti) ಮೇಲೆ ಇಸ್ರೇಲ್ (Iran president appeals – Modi) ಸೇನೆ ನಡೆಸುತ್ತಿರುವ ಭೀಕರ ದಾಳಿಯನ್ನು ನಿಲ್ಲಿಸಲು ನಿಮ್ಮ ಸಾಮರ್ಥ್ಯವನ್ನು ಬಳಸಿ.

ಈ ಮೂಲಕ ಯುದ್ದವನ್ನು ಕೊನೆಗಾಣಿಸಿ, ಶಾಂತಿ ಸ್ಥಾಪಿಸಲು ನೆರವಾಗುವಂತೆ ಇರಾನ್ ಅಧ್ಯಕ್ಷ ಸೆಯ್ಯದ್ ಇಬ್ರಾಹಿಂ ರೈಸಿ (Seyyed Ebrahim Raisi) ಭಾರತದ ಪ್ರಧಾನಿ ನರೇಂದ್ರ ಮೋದಿ

ಅವರಿಗೆ ದೂರವಾಣಿ ಕರೆ ಮಾಡಿ (Iran president appeals – Modi) ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಇರಾನ್ ಅಧ್ಯಕ್ಷ ಸೆಯ್ಯದ್ ಇಬ್ರಾಹಿಂ ರೈಸಿ ಅವರು ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಪರಿಸ್ಥಿತಿ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ

ಮಾಡಿಕೊಂಡಿದ್ದು, ಭಯೋತ್ಪಾದಕ ಘಟನೆಗಳು, ಹಿಂಸಾಚಾರ ಮತ್ತು ನಾಗರಿಕರ ಜೀವಹಾನಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಎಂದು ಪ್ರಧಾನ

ಮಂತ್ರಿ ಕಚೇರಿ (ಪಿಎಂಒ) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಇರಾನ್ (Iran) ಅಧ್ಯಕ್ಷ ಸೆಯ್ಯದ್ ಇಬ್ರಾಹಿಂ ರೈಸಿ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಪ್ರಧಾನಿ ಮೋದಿ ಅವರು ಇಸ್ರೇಲ್-ಪ್ಯಾಲೆಸ್ತೀನ್ (Palestine) ವಿಷಯದಲ್ಲಿ ಭಾರತದ

ದೀರ್ಘಕಾಲದ ಮತ್ತು ಸ್ಥಿರವಾದ ನಿಲುವನ್ನು ಪುನರುಚ್ಚರಿಸಿದರು. ಈ ಕುರಿತು ಟ್ವೀಟ್ (Tweet) ಮಾಡಿರುವ ಪ್ರಧಾನಿ ಮೋದಿ ಅವರು, ಪಶ್ಚಿಮ ಏಷ್ಯಾದಲ್ಲಿನ ಕಠಿಣ ಪರಿಸ್ಥಿತಿ ಮತ್ತು ಇಸ್ರೇಲ್-ಹಮಾಸ್

(Hamas) ಸಂಘರ್ಷದ ಕುರಿತು ಇರಾನ್ನ ಅಧ್ಯಕ್ಷ ರೈಸಿ ಅವರೊಂದಿಗೆ ಮಾತುಕತೆ ನಡೆಸಲಾಯಿತು.

ಭಯೋತ್ಪಾದಕ ಘಟನೆಗಳು, ಹಿಂಸಾಚಾರ ಮತ್ತು ನಾಗರಿಕರ ಜೀವಹಾನಿಗಳು ಗಂಭೀರ ಕಳವಳಗಳಾಗಿವೆ. ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.

ಚಬಹಾರ್ ಬಂದರು ಸೇರಿದಂತೆ ಇರಾನ್ನೊಂದಿಗಿನ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯನ್ನು ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಘರ್ಷಣೆಯಲ್ಲಿ ಹಿಂಸಾಚಾರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ರೈಸಿಯೊಂದಿಗಿನ ಮೋದಿ ಅವರ ಸಂಭಾಷಣೆಯು ಪಶ್ಚಿಮ ಏಷ್ಯಾದಲ್ಲಿನ ಉನ್ನತ ನಾಯಕರೊಂದಿಗೆ ನಡೆಯುತ್ತಿರುವ ಸಂವಾದದ

ಭಾಗವಾಗಿದೆ. ಕಳೆದ ವಾರ, ಮೋದಿ ಅವರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (Rishi Sunak) ಮತ್ತು ಯುಎಇ ಅಧ್ಯಕ್ಷ ಮೊಹಮದ್ ಬಿನ್ ಝಾಯೆದ್ ಅಲ್ ನಹ್ಯಾನ್ (Mohammed bin Zayed Al Nahyan)

ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದರು.

ಸಂಘರ್ಷ ಆರಂಭವಾದಾಗಿನಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್, ಜೋರ್ಡಾನ್ ರಾಜ ಅಬ್ದುಲ್ಲಾ II ಮತ್ತು ಈಜಿಪ್ಟ್

ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಇದನ್ನು ಓದಿ: ಸತೀಶ್ ಜಾರಕಿಹೊಳಿ ಜತೆ ಸೀಕ್ರೆಟ್ ಮೀಟಿಂಗ್: ​ಮಾತುಕತೆ ಬಳಿಕ ದೆಹಲಿಗೆ ಡಿಕೆಶಿ

Exit mobile version