ಸ್ಪುಟ್ನಿಕ್ ಲೈಟ್ ರಫ್ತು ಮಾಡಲು ಸರ್ಕಾರದ ಅನುಮತಿ

ನವದೆಹಲಿ ಅ 12: ಭಾರತದಲ್ಲಿ ಉತ್ಪಾದನೆದೊಂದ  ರಷ್ಯಾದ ಸಿಂಗಲ್ ಡೋಸ್ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ಲೈಟ್ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗಾಗಿ ಇನ್ನೂ ಅನುಮೋದಿಸಲಾಗಿಲ್ಲ. ಭಾರತೀಯ ಔಷಧೀಯ ಕಂಪನಿ ಹೆಟೆರೊ ಬಯೋಫಾರ್ಮಾ ಲಿಮಿಟೆಡ್ ಗೆ 4 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ರಷ್ಯಾಕ್ಕೆ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ವಿಷಯಕ್ಕೆ ಸಂಬಂಧಿದ ಮೂಲಗಳು ವರದಿ ಮಾಡಿವೆ. 

ಸ್ಪುಟ್ನಿಕ್ ಲೈಟ್ ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಲಸಿಕೆಯ ಘಟಕ -1 ಅನ್ನು ಹೋಲುತ್ತದೆ. ಭಾರತದ ಔಷಧ ನಿಯಂತ್ರಕವು ಏಪ್ರಿಲ್‌ನಲ್ಲಿ ಸ್ಪುಟ್ನಿಕ್ ವಿ ಯ ತುರ್ತು ಬಳಕೆಯನ್ನು ಅನುಮೋದಿಸಿದೆ. ನಂತರ ಇದನ್ನು ಭಾರತದ  ಕೋವಿಡ್ -19 ವಿರೋಧಿ ಲಸಿಕೆ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿದೆ.

ಭಾರತದಲ್ಲಿ ಔಷಧ ನಿಯಂತ್ರಕದಿಂದ ತುರ್ತು ಬಳಕೆಗಾಗಿ ಲಸಿಕೆಯನ್ನು ಅನುಮೋದಿಸುವವರೆಗೂ ಹೆಟೆರೊ ಬಯೋಫಾರ್ಮಾ ತಯಾರಿಸಿದ ಸ್ಪುಟ್ನಿಕ್ ಲೈಟ್ ಅನ್ನು ರಷ್ಯಾಕ್ಕೆ ರಫ್ತು ಮಾಡಲು ಅನುಮತಿ ನೀಡುವಂತೆ ರಷ್ಯಾದ ರಾಯಭಾರಿ ನಿಕೋಲಾಯ್ ಕುಡ್ಶೇವ್ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Exit mobile version