ನವದೆಹಲಿ ಅ 12: ಭಾರತದಲ್ಲಿ ಉತ್ಪಾದನೆದೊಂದ ರಷ್ಯಾದ ಸಿಂಗಲ್ ಡೋಸ್ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ಲೈಟ್ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗಾಗಿ ಇನ್ನೂ ಅನುಮೋದಿಸಲಾಗಿಲ್ಲ. ಭಾರತೀಯ ಔಷಧೀಯ ಕಂಪನಿ ಹೆಟೆರೊ ಬಯೋಫಾರ್ಮಾ ಲಿಮಿಟೆಡ್ ಗೆ 4 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ರಷ್ಯಾಕ್ಕೆ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ವಿಷಯಕ್ಕೆ ಸಂಬಂಧಿದ ಮೂಲಗಳು ವರದಿ ಮಾಡಿವೆ.
ಸ್ಪುಟ್ನಿಕ್ ಲೈಟ್ ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಲಸಿಕೆಯ ಘಟಕ -1 ಅನ್ನು ಹೋಲುತ್ತದೆ. ಭಾರತದ ಔಷಧ ನಿಯಂತ್ರಕವು ಏಪ್ರಿಲ್ನಲ್ಲಿ ಸ್ಪುಟ್ನಿಕ್ ವಿ ಯ ತುರ್ತು ಬಳಕೆಯನ್ನು ಅನುಮೋದಿಸಿದೆ. ನಂತರ ಇದನ್ನು ಭಾರತದ ಕೋವಿಡ್ -19 ವಿರೋಧಿ ಲಸಿಕೆ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿದೆ.
ಭಾರತದಲ್ಲಿ ಔಷಧ ನಿಯಂತ್ರಕದಿಂದ ತುರ್ತು ಬಳಕೆಗಾಗಿ ಲಸಿಕೆಯನ್ನು ಅನುಮೋದಿಸುವವರೆಗೂ ಹೆಟೆರೊ ಬಯೋಫಾರ್ಮಾ ತಯಾರಿಸಿದ ಸ್ಪುಟ್ನಿಕ್ ಲೈಟ್ ಅನ್ನು ರಷ್ಯಾಕ್ಕೆ ರಫ್ತು ಮಾಡಲು ಅನುಮತಿ ನೀಡುವಂತೆ ರಷ್ಯಾದ ರಾಯಭಾರಿ ನಿಕೋಲಾಯ್ ಕುಡ್ಶೇವ್ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.