ಮಂಗಳೂರು ಆ. 08: ಕತಾರ್ ನಿಂದ 4 ತಿಂಗಳ ಹಿಂದೆ ಮಂಗಳೂರಿಗೆ ಮರಳಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆತನ ಸ್ಯಾಂಪಲ್ ನನ್ನು ಪರೀಕ್ಷೆಗೆ ಕಳುಹಿಸಿದಾಗ ಆತನಲ್ಲಿ ಕೊರೋನಾ ರೂಪಾಂತರಿ ಇಟಾ ವೈರಸ್ ಇರುವುದು ಧೃಢಪಟ್ಟಿದೆ. ಇದರ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಸೋಂಕಿತನು ಚಿಕಿತ್ಸೆ ಪಡೆದು ಗುಣಮುಖನಾಗಿದ್ದು, ಆತನ ಸಂಪರ್ಕದಲ್ಲಿದ್ದ 150 ಮಂದಿಯೂ ಸೇಫ್ ಆಗಿದ್ದಾರೆಂದು ತಿಳಿಸಿದ್ದಾರೆ.
ಈತನ ಸ್ವ್ಯಾಬ್ ಟೆಸ್ಟನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಡಲಾಗಿತ್ತು. ಅದರಲ್ಲಿ ಕೊರೊನಾ ಪಾಸಿಟಿವ್ ಬಂದ್ದಿದ್ದರಿಂದ ನಂತರ ಸ್ಯಾಂಪಲ್ ಅನ್ನು ಟೆಸ್ಟ್ ಗೆ ಕಳುಹಿಸಿದಾಗ ಇಟಾ ವೈರಸ್ ಪತ್ತೆಯಾಗಿದೆ.