ಲಂಚ ಪಡೆದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಅಧಿಕಾರಿ ಜೆ. ಮಂಜುನಾಥನನ್ನು ಮರುನೇಮಕ ಮಾಡಿದ ಸರ್ಕಾರ!

Bengaluru : ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜೆ. ಮಂಜುನಾಥ್(J Manjunath Reappointed) ಅವರು ಜಮೀನು ವ್ಯಾಜ್ಯ ಇತ್ಯರ್ಥ ಪಡಿಸಲು ವ್ಯಕ್ತಿ ಒಬ್ಬರಿಂದ ಐದು ಲಕ್ಷ ರೂ. ಲಂಚ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ(ACB) ಅವರನ್ನು ಸೋಮವಾರ ಬಂಧಿಸಿದೆ.

ಇದೇ ವರ್ಷ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಜೆ.ಮಂಜುನಾಥ್‍ ರವರನ್ನು ರಾಜ್ಯ ಸರ್ಕಾರ(J Manjunath Reappointed) ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಳಿಸಲು ಆದೇಶ ಹೊರಡಿಸಿತ್ತು.

ಸೋಮವಾರ ರಾಜ್ಯ ಸರ್ಕಾರ ವಿಶೇಷ ಅಧಿಕಾರಿ ಹಾಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿಯಾಗಿ ಜೆ. ಮಂಜುನಾಥ್ ರವರನ್ನು ನೇಮಿಸಿದೆ.

ಆನೇಕಲ್ ತಾಲೂಕಿನ, ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯ ಬೆಂಗಳೂರು(Bengaluru) ನಗರದ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ತೀರ್ಪು ಬಾಕಿ ಇತ್ತು.

ಜಿಲ್ಲಾಧಿಕಾರಿಯು ಆ ಪ್ರಕರಣವಾಗಿ ಒಟ್ಟಾರೆ ತನಿಖೆ ನಡೆಸಿದ್ದಾಗ ಐಎಎಸ್ ಅಧಿಕಾರಿ ಮಂಜುನಾಥ್ ಅವರ ತೀರ್ಪು ಪ್ರಕಟ ಮಾಡಿರಲಿಲ್ಲ.

https://fb.watch/gzaP8zntxL/ ಜಿಲ್ಲಾ ಉಸ್ತುವಾರಿ ನಾರಾಯಣಗೌಡ ಅವರ ಕನ್ನಡ ರಾಜ್ಯೋತ್ಸವ ಭಾಷಣವನ್ನು ನೀವು ಒಮ್ಮೆ ಕೇಳಿ.

2021 ಮೇ ತಿಂಗಳಲ್ಲಿ ಎಸಿಬಿ ಅಧಿಕಾರಿಗಳು ಉಪತಹಶೀಲ್ದಾರ್ ಮಹೇಶ್ ಪಿ.ಎಸ್ ಮತ್ತು ಗುತ್ತಿಗೆ ನೌಕರ ಚೇತನ್ ಎಂಬುವವರನ್ನು ಬಂಧಿಸಿತ್ತು.

ಬಂಧಿತ ಇಬ್ಬರು ಅಧಿಕಾರಿಗಳು ಬೆಂಗಳೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.\

ಇದನ್ನೂ ಓದಿ : https://vijayatimes.com/sri-ramulu-efforts-win/

ಈ ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕಣದಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಲಯದಿಂದ ಅವರಿಗೆ ಅನುಕೂಲಕರವಾಗಿ ಆದೇಶ ಪಡೆಯಲು ಐದು ಲಕ್ಷ ರೂ. ಪಡೆಯುತ್ತಿರುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.

ಆದರೆ ಬೆಂಗಳೂರು ನಗರದ ಜಿಲ್ಲಾಧಿಕಾರಿಗಳು ವಿಚಾರಣೆಗೆ ಒಳಪಡಿಸದ ಕಾರಣವಾಗಿ ಕರ್ನಾಟಕ ಹೈಕೋರ್ಟ್ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ಈ ವೇಳೆ ಹೈಕೋರ್ಟ್ ತರಾಟೆಯ ಬಳಿಕ ಸೋಮವಾರದಂದು ಜೆ. ಮಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದರು. ಆದರೆ, ಅರೆಸ್ಟ್ ಬಳಿಕ ಅಧಿಕಾರಿಯನ್ನು ರಾಜ್ಯ ಸರ್ಕಾರ ಈಗ ಜಂಟಿ ಕಾರ್ಯದರ್ಶಿಯಾಗಿ ಮರುನೇಮಕ ಮಾಡಿಕೊಂಡಿದೆ.

ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಹಲವರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

Exit mobile version