ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ಜಗದೀಶ್ ಶೆಟ್ಟರ್ ; ಟಿಕೆಟ್ ಪಡೆಯುವ ವಿಶ್ವಾಸ

Bengaluru : ವಿಧಾನಸಭಾ ಚುನಾವಣೆಗೆ (Assembly election) ಟಿಕೆಟ್ ಸಿಗದ ಹಿನ್ನಲೆ ತಮ್ಮ ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagdish Shetter), ಇದೀಗ ನವದೆಹಲಿಯಲ್ಲಿರುವ ಬಿಜೆಪಿ ಹೈಕಮಾಂಡ್‌ ಭೇಟಿ ನೀಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿ, ಟಿಕೆಟ್ ಪಡೆಯುವ (JagdishShetter meet JP Nadda) ಭರವಸೆಯೊಂದಿಗೆ ಹಿಂದಿರುಗಿದ್ದಾರೆ ಎನ್ನಲಾಗಿದೆ.

ಜಗದೀಶ್ ಶೆಟ್ಟರ್ ಕರ್ನಾಟಕ ಚುನಾವಣೆಗೆ ಟಿಕೆಟ್ ಪಡೆಯುವ ವಿಶ್ವಾಸ ಪಡೆದುಕೊಂಡಿದ್ದಾರೆ ಎಂದು ಸದ್ಯ ಮೂಲಗಳು ತಿಳಿಸಿವೆ. ಜಗದೀಶ್ ಶೆಟ್ಟರ್ ಅವರು ಬುಧವಾರ

ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಅವರು ಪಕ್ಷದ ಹೈಕಮಾಂಡ್‌ಗೆ ಸ್ಪಷ್ಟ ರೀತಿಯಲ್ಲಿ ಕರ್ನಾಟಕ ಚುನಾವಣೆಯನ್ನು ಎದುರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಮಾಧ್ಯಮದವರೊಂದಿಗೆಮಾತನಾಡಿದ ಜಗದೀಶ್ ಶೆಟ್ಟರ್, ನಾನು ಜೆಪಿ ನಡ್ಡಾ (BJP National President JP Nadda) ಅವರನ್ನು ಭೇಟಿ ಮಾಡಿ, ವಿಷಯ ತಿಳಿಸಿದ್ದೇನೆ.

ಅವರು ಪಕ್ಷದ ಹೈಕಮಾಂಡ್ ಎರಡು ದಿನಗಳ ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದು ನನಗೆ ಹೇಳಿದ್ದಾರೆ.

ಹೈಕಮಾಂಡ್ ಭೇಟಿ ನಂತರ ಹೊರಬಂದ ಜಗದೀಶ್ ಶೆಟ್ಟರ್ ತುಂಬಾ ಸಂತಸದಿಂದ ಮಾತನಾಡಿರುವುದು ಕಂಡುಬಂದಿದೆ.

ಇದನ್ನೂ ಓದಿ : https://vijayatimes.com/two-list-of-bjp-released/

ಜಗದೀಶ್ ಶೆಟ್ಟರ್ ತಮ್ಮ ತವರು ಕ್ಷೇತ್ರವಾದ ಹುಬ್ಬಳ್ಳಿಗೆ ಮರಳಲು ಮುಂದಾಗಿದ್ದು, ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಬಿಜೆಪಿ ಬಿಡುಗಡೆ ಮಾಡಿರುವ ಎರಡು ಪಟ್ಟಿಗಳಲ್ಲಿ ಜಗದೀಶ್ ಶೆಟ್ಟರ್

ಅವರ ಹೆಸರು ಇಲ್ಲ ಎಂಬುದು ತಿಳಿಯುತ್ತಿದ್ದಂತೆ ಜಗದೀಶ್ ಶೆಟ್ಟರ್ ಪಕ್ಷದ ವಿರುದ್ಧ ತೀವ್ರ (JagdishShetter meet JP Nadda) ಅಸಮಾಧಾನ ವ್ಯಕ್ತಪಡಿಸಿದ್ದರು.

ಮಂಗಳವಾರ ಬಿಜೆಪಿ 189 ಅಭ್ಯರ್ಥಿಗಳೊಂದಿಗೆ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಬಿಜೆಪಿ (BJP) ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ,

ಆರು ಬಾರಿ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಅವರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು ಮತ್ತು ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳಬೇಕಿತ್ತು ಎಂದು ಒತ್ತಿ ಹೇಳಿದರು.

ಈ ಸಂಗತಿ ತಿಳಿದ ಒಂದು ದಿನದ ಬಳಿಕ, ಅತೃಪ್ತ ಬಿಜೆಪಿ ನಾಯಕರು ನವದೆಹಲಿಯಲ್ಲಿ ಪಕ್ಷದ ಮುಖ್ಯಸ್ಥ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಚುನಾವಣೆಗೆ ಜಗದೀಶ್ ಶೆಟ್ಟರ್ ಬಿಜೆಪಿ ಟಿಕೆಟ್ ಪಡೆಯುವ 99% ಸಾಧ್ಯತೆಗಳಿವೆ ಎಂದು ಕರ್ನಾಟಕದ ಮಾಜಿ ಸಿಎಂ ಮತ್ತು ಬಿಜೆಪಿ ನಾಯಕ ಯಡಿಯೂರಪ್ಪ (Yediyurappa) ಬುಧವಾರ ಹೇಳಿದ್ದಾರೆ.


ಈ ಮಧ್ಯೆ ಕರ್ನಾಟಕ ಚುನಾವಣೆಗೆ ಬಿಜೆಪಿ ತನ್ನ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ.

ಜಗದೀಶ್ ಶೆಟ್ಟರ್ ಮತ್ತೆ ಸ್ಪರ್ಧಿಸಲು ಬಯಸುವ ಹುಬ್ಬಳ್ಳಿ ಕ್ಷೇತ್ರಕ್ಕೆ ಶೆಟ್ಟರ್ ಅವರ ಹೆಸರಾಗಲಿ ಅಥವಾ ಬೇರೆ ಯಾವುದೇ ಅಭ್ಯರ್ಥಿಗಳ ಹೆಸರಾಗಲಿ ಪಟ್ಟಿಯಲ್ಲಿ ಇರಲಿಲ್ಲ!

ಇದನ್ನೂ ಓದಿ : https://vijayatimes.com/tweet-from-congress-to-bjp/

ಜಗದೀಶ್ ಶೆಟ್ಟರ್ ಪ್ರಸ್ತುತ ಹುಬ್ಬಳ್ಳಿ-ಧಾರವಾಡ (ಕೇಂದ್ರ) ಕ್ಷೇತ್ರದ ಶಾಸಕರಾಗಿದ್ದಾರೆ. ಅವರು 2008 ರ ಚುನಾವಣೆಯ ನಂತರ ಈ ಸ್ಥಾನವನ್ನು ಹೊಂದಿದ್ದಾರೆ.

2018 ರ ಕೊನೆಯ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ (Congress) ಮಹೇಶ್ ನಲ್ವಾಡ್ ಅವರನ್ನು 21,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು.

ಕರ್ನಾಟಕ ವಿಧಾನಸಭೆಯ ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ಏಪ್ರಿಲ್ 13 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು,

ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕರ್ನಾಟಕದಲ್ಲಿ ಮೇ 10 ರಂದು ಹೊಸ ಸರ್ಕಾರಕ್ಕಾಗಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

Exit mobile version