ಸುದೀಪ್-ದರ್ಶನ್‌ ನೀವಿಬ್ಬರು ಒಂದಾಗಿ; ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟಜಾಗ ನಂದನವನ ಆಗುತ್ತದೆ!

Bengaluru : ಕನ್ನಡ ಚಿತ್ರರಂಗದ ಟಾಪ್‌ ನಟರಾದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌(Challenging Star Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌(Kichcha Sudeep) ಅವರ ನಡುವಿನ ಮುನಿಸಿನ ಬಗ್ಗೆ ನವರಸ ನಾಯಕ ಜಗ್ಗೇಶ್‌(Jaggesh) ಟ್ವೀಟ್‌ ಮೂಲಕ ತಮ್ಮದೊಂದು ಮನವಿ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕ್ರಾಂತಿ(Kranti) ಸಿನಿಮಾದ ಹಾಡನ್ನು ಬಿಡುಗಡೆಗೊಳಿಸಲು ಹೊಸಪೇಟೆಗೆ ತೆರಳಿದ್ದ ವೇಳೆ ಅವರಿಗೆ ಚಪ್ಪಲಿ ಎಸೆದ ಘಟನೆಯೊಂದು ಚಿತ್ರರಂಗಕ್ಕೆ ತೀವ್ರ ಬೇಸರ ಮೂಡಿಸಿತ್ತು.

ಈ ಒಂದು ದುಷ್ಕೃತ್ಯಕ್ಕೆ ಅನೇಕ ದಿಗ್ಗಜರು ಖಂಡನೆ ವ್ಯಕ್ತಪಡಿಸಿ, ನಟ ದರ್ಶನ್‌ ಪರ ನಿಂತು ಮಾತನಾಡಿದರು.

ನಟ ದರ್ಶನ್‌ ಅವರು ಕ್ರಾಂತಿ ಚಿತ್ರದ ಹಾಡನ್ನು ಬಿಡುಗಡೆಗೊಳಿಸಲು ಹೊಸಪೇಟೆಗೆ ಆಗಮಿಸಿದ್ದ ವೇಳೆ ಕಿಡಿಗೇಡಿಗಳ ಗುಂಪೊಂದು ದರ್ಶನ್‌ ಅವರ ಮುಖಕ್ಕೆ ಚಪ್ಪಲಿ ಎಸೆದು ಉದ್ಧಟತನ ಪ್ರದರ್ಶಿಸಿತು.

ಈ ಕೃತ್ಯಕ್ಕೆ ಹೆಚ್ಚು ಸ್ಪಂದಿಸದ ನಟ ದರ್ಶನ್‌, ಇರಲಿ ಪರವಾಗಿಲ್ಲ ಬಿಡಿ ಎಂದು ಹೇಳಿ ಸ್ಥಳದಿಂದ ಹೊರ ನಡೆದರು. ಈ ಘಟನೆ ಬಳಿಕ ನಟ ದರ್ಶನ್‌ ಪರ ಕನ್ನಡ ಚಿತ್ರರಂಗ ಬೆಂಗಾವಲಾಗಿ ನಿಂತು,

ಇದನ್ನೂ ನೋಡಿ : https://fb.watch/hBjkvHQhFF/ ಪೊಲೀಸ್ರೇ…. ಫೈನ್‌ ಕಟ್ಲಿ. No fine to police?

ಟ್ವೀಟ್‌(Tweet) ಮುಖೇನ ದರ್ಶನ್‌ ಅವರಿಗೆ ಬೆಂಬಲ ಸೂಚಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಅನೇಕ ನಟ-ನಟಿಯರ ಪೈಕಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು,

ತಮ್ಮ ಮತ್ತು ದರ್ಶನ್‌ ಅವರ ನಡುವೆ ಇರುವ ಕೊಂಚ ಮುನಿಸನ್ನು ಬದಿಗಿಟ್ಟು, ದರ್ಶನ್‌ ಅವರಿಗೆ ಎದುರಾದ ಪರಿಸ್ಥಿತಿಯನ್ನು ಖಂಡಿಸಿ, ದರ್ಶನ್‌ ಅವರಿಗೆ ಆತ್ಮೀಯವಾಗಿ ಬೆಂಬಲ ಸೂಚಿಸಿದರು.

ದರ್ಶನ್‌ ಅವರಿಗೆ ಮಾಡಿದ ಅವಮಾನ ಒಪ್ಪಲಾರದು! ಇಂಥ ಘಟನೆಗಳು ಕಲಾವಿದರಿಗೆ ನಡೆಯಬಾರದು ಎಂದು ಹೇಳಿದರು. ದರ್ಶನ್‌ ಮತ್ತು ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಈ ಪ್ರೀತಿಯ ಮಾತುಗಳಿಗೆ ವ್ಯಾಪಕ ಬೆಂಬಲ ನೀಡಿದ್ದು,

ಸುದೀಪ್‌ ಅವರ ಗೌರವ, ಪ್ರೀತಿಗೆ ಮೆಚ್ಚುಗೆಗಳನ್ನು ಹರಿಸಿದ್ದಾರೆ. ಹಲವು ಅಭಿಮಾನಿಗಳು ನೀವಿಬ್ಬರು ಒಂದಾಗಬೇಕು ಸರ್‌ ಎಂದು ಕಮೆಂಟ್‌(Comment) ಮಾಡಿದರೇ,

ಇನ್ನು ಕೆಲವರು ನಿಮ್ಮಿಬ್ಬರ ಸ್ನೇಹ, ಪ್ರೀತಿ ದೂರವಿರಬಾರದು ದಯಮಾಡಿ ಒಟ್ಟಾಗಿ ಎಂದು ಕಮೆಂಟ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದಲೂ ಟ್ವಿಟರ್‌(Twitter) ಟಾಪ್‌ ಟ್ರೇಡಿಂಗ್‌ ಪಟ್ಟಿಯಲ್ಲಿ ನಟ ದರ್ಶನ್‌ ಹಾಗೂ ಕಿಚ್ಚ ಸುದೀಪ್‌ ಅವರ ಹೆಸರು ಟ್ರೇಡಿಂಗ್‌ ಆಗುತ್ತಿದೆ. ಸ್ವತಃ ನಟ ದರ್ಶನ್‌ ಅವರೇ ಕಿಚ್ಚ ಸುದೀಪ್‌ ಅವರ ಮಾತುಗಳಿಗೆ ಧನ್ಯವಾದ ಎಂದು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಇದನ್ನು ನೋಡಿದ ನವರಸ ನಾಯಕ ಜಗ್ಗೇಶ್‌ ಅವರು ದರ್ಶನ್‌ ಮತ್ತು ಸುದೀಪ್‌ ಇಬ್ಬರನ್ನು ಕುರಿತು ತಮ್ಮದೊಂದು ವಿಷಯವನ್ನು ಟ್ವೀಟ್‌ ಮುಖೇನ ಮನವಿ ಮಾಡಿದ್ದಾರೆ.

ಅದೇನೆಂದರೇ, ಪ್ರೀತಿಯ ದರ್ಶನ್ ಹಳೆಯ ಚಿಂತನೆಗೆ ವಿನಾಯ್ತಿ ಹೇಳಿ ಹೊಸ ಸ್ನೇಹದ ಭಾಷ್ಯಕ್ಕೆ ಮುನ್ನುಡಿ ಬರೆದು, ಕಿಚ್ಚ ಸುದೀಪ್ ನೀನು ಒಂದಾಗಿ ಸಹಸ್ರ ಅಭಿಮಾನಿಗಳಿಗೆ ಹರ್ಷದ ಹೊನಲುಹರಸಿ.

ಇದನ್ನೂ ಓದಿ : https://vijayatimes.com/protest-against-nps/

ನೀವಿಬ್ಬರು ಒಂದಾದರೆ ಕೋಟಿಮನ, ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟಜಾಗ ನಂದನವನ ಆಗುತ್ತದೆ! ಹಳೆಯದನ್ನು ಮರೆತು ನೀವಿಬ್ಬರು ಒಬ್ಬರಿಗೊಬ್ಬರು ಅಪ್ಪಿಕೊಂಡು ಒಂದಾಗಿ ಎಂದು ಹೇಳಿಕೊಂಡಿದ್ದಾರೆ.

Exit mobile version