ಇದು ಪ್ರಚಾರ ತೆವಲಿನ ಹೋರಾಟ ; ಕೆ.ಎಸ್.ಭಗವಾನ್ ವಿರುದ್ದ ಜಗ್ಗೇಶ್ ಆಕ್ರೋಶ

ಸನ್ಮಾನ್ಯ ಭಗವಾನರೆ ಸಾಧ್ಯವಾದರೆ ಬಡತನ ನಿರ್ಮೂಲನೆ ಹೋರಾಟ, ಜಾತಿಯತೆ ದೂರಮಾಡಿ (Jaggesh against on KSBhagavan) ಸಾಮರಸ್ಯಕ್ಕೆ ಹೋರಾಟ, ದೇಶ ಮೊದಲು

ಜಾತಿ ನಂತರ ಎಂದು ಹೋರಾಟ, ಎಲ್ಲಾ ಮಕ್ಕಳಿಗು ಸಮಾನ ವಿಧ್ಯೆ ಸಿಗಲಿ ಎಂದು ಹೋರಾಟ, ಬಡವ ಶ್ರೀಮಂತ ರೇಖೆ ಅಳಿಸಿ ಬದುಕುವ ಕಲೆ ಕಲಿಸಲು ಹೋರಾಟ, ಯಾವುದು ಇದು ಪ್ರಚಾರ

ತೆವಲಿನ ಹೋರಾಟ ದಿಕ್ಕಾರವಿರಲಿ ನಿಮ್ಮ ಗುಣಕ್ಕೆ ಎಂದು ನವರಸನಾಯಕ ಜಗ್ಗೇಶ್ (Jaggesh) ಅವರು ಕೆ.ಎಸ್.ಭಗವಾನ್ ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸನ್ಮಾನ್ಯ ಭಗವಾನ (Bhagavan) ರವರೆ ನೀವು ವಿಧ್ಯಾವಂತರ?ನೀವು ಜ್ನಾನಿಗಳ?ನೀವು ಹಿರಿಯರಾ?ನೀವು ಸಮಾಜ ಸುಧಾರಕರ? ಒಕ್ಕಲುತನ

ಸಮುಧಾಯ ಅಣಕಮಾಡಿ ಯಾಕೆ ಕುವೆಂಪು ರವರ ಮೇಲೆ ಹಾಕಿ ತೆವಲು ತೀರಿಸಿಕೊಂಡು ಪಲಾಯನ ಮಾಡಿದಿರಿ. ಕರ್ನಾಟಕ (Karnataka) ಆರಕ್ಷಕ ಇಲಾಖೆ ಯಾಕಿ ಮೌನ? DKS ರವರೆ

ಯಾಕೆ ಮೌನ? ಸಮಾಜ ಸ್ವಾಸ್ಥ ಕೆಡಿಸುವವರ ಮೇಲೆ ಕ್ರಮ ಜರುಗಿಸಿ ಆರಕ್ಷಕ ಮಹನೀಯರೆ (Jaggesh against on KSBhagavan) ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನ (Mysore) ಪುರಭವನದಲ್ಲಿ ಅಕ್ಟೋಬರ್ (October) 13ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆ.ಎಸ್.ಭಗವಾನ್ ಅವರು, ಒಕ್ಕಲಿಗರು ಸಂಸ್ಕೃತಿ ಹೀನರು

ಅಥವಾ ಅವರು ಹೀನ ಸಂಸ್ಕೃತಿಯುಳ್ಳವರು. ಇದನ್ನು ನಾನು ಹೇಳಿಲ್ಲ, ಮಹಾನ್ ಕವಿ ಹಾಗೂ ಲೇಖಕ ಕುವೆಂಪು (Kuvempu) ಅವರೇ ಹೇಳಿದ್ದಾರೆ. ಕುವೆಂಪು ಅವರು ಹೇಳಿರುವುದನ್ನು

ನಾನು ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆ.ಎಸ್.ಭಗವಾನ್ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ

ಹರಿದಾಡುತ್ತಿದ್ದು ಜನಾಕ್ರೋಶವನ್ನು ಒಗ್ಗೂಡಿಸುವಂಥದ್ದಾಗಿದೆ.

ಹೀಗಾಗಿ ಮೈಸೂರಿನಲ್ಲಿರುವ ಕೆ.ಎಸ್.ಭಗವಾನ್ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. ಒಕ್ಕಲಿಗ ಸಮುದಾಯ ಕುರಿತು ಕೆ.ಎಸ್.ಭಗವಾನ್ ನೀಡಿರುವ ಅವಹೇಳನಕಾರಿ ಹೇಳಿಕೆಗೆ

ಇಡೀ ಒಕ್ಕಲಿಗ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬೇರೆ ಸಮುದಾಯಗಳನ್ನು ಅವಹೇಳನ ಮಾಡುವ ಅಂತ ನೀಚ ಮನಸ್ಥಿತಿಯ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಇದನ್ನು ಓದಿ: ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ, ಹೃದಯ ಬಡಿತ ನಿಲ್ಲಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Exit mobile version