‘ಕಾಂತಾರ ಚಿತ್ರ ಅಲ್ಲಾ ರೋಮಾಂಚನ ಅನುಭವ’ ; ಅಮೇರಿಕಾದಲ್ಲಿ “ಕಾಂತಾರ” ನೋಡಿ ಮುಕ್ತಕಂಠದಿಂದ ಹೊಗಳಿದ ಜಗ್ಗೇಶ್

America : ರಿಷಬ್ ಶೆಟ್ಟಿ ನಿರ್ದೇಶಿಸಿರುವ ಕಾಂತಾರ(#Kantara) ಸಿನಿಮಾವನ್ನು ಅಮೇರಿಕಾದಲ್ಲಿ ನೋಡಿದ ನಟ ಜಗ್ಗೇಶ್(Jaggesh) ಚಿತ್ರವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ(Jaggesh Appreciates Kantara). ಈ ಕುರಿತು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿರುವ ಅವರ ಬರಹ ಇಲ್ಲಿದೆ ನೋಡಿ.

Jaggesh


“ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು, ಕಾರಣ ನನ್ನ ಬದುಕಿಗೆ ಸಕಲವು ನೀಡಿದ ನನ್ನ ತಾಯಿ ಕನ್ನಡ ಚಿತ್ರರಂಗ..ಬಾಲ್ಯದಿಂದ ಕನ್ನಡ ಹಾಗು ರಾಜಣ್ಣನ ಹುಚ್ಚು ಅಭಿಮಾನಿಯಾದ ನಾನು,

ಕರುನಾಡ ದಾಟಿ ಹೊರಹೋಗದೆ ಬದುಕಿದವನು..

ಸದಾ ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಹಂಬಲಿಸುವ ಜನ್ಮ ನನ್ನದು. ಇತ್ತೀಚಿನ ಚಿತ್ರ ಕಾಂತಾರ ವಿದೇಶಕ್ಕೆ ಬಂದ ಕಾರಣ ನೋಡಲಾಗಲಿಲ್ಲಾ.

ಆದರೆ ನನ್ನ ಅಕ್ಕನ ಮಗ ಜೀವನ್ ಹಾಗು ನನ್ನ ಅನೇಕ ಚಿತ್ರ ಗುರು ಮೇಲುಕೋಟೆ ಮಂಜ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದವನು.

ಇಂದು ಅಮೇರಿಕದ ಡೆನ್ವರ್ ನಲ್ಲಿ ಒರ್ಯಾಕಲ್ ಸಂಸ್ಥೆಯಲ್ಲೆ ಶ್ರೇಷ್ಠ ಸ್ಥಾನದಲ್ಲಿರುವ ಅವನ ಮನೆ ಹತ್ತಿರದಲ್ಲೆ ಮಾಲ್ ಇತ್ತು.

ಇದನ್ನೂ ಓದಿ : https://vijayatimes.com/shahid-afridi-against-jay-shah/

ಅಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು(Jaggesh Appreciates Kantara) ನೋಡಿ ಬಂದೆ.

ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30 ವರ್ಷದ ಅಭ್ಯಾಸ.

ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ.

https://youtu.be/J5zku2oo81U ವಿಜಯಟೈಮ್ಸ್ ಬಿಗ್ ಇಂಪ್ಯಾಕ್ಟ್ ! ಕಂಠೀರವ ಸ್ಟೇಡಿಯಂ ತೊಂದರೆಗೆ ಸ್ಪಂದಿಸಿದ ಸಿಎಂ!

ಆಧ್ಯಾತ್ಮಿಕ ಅನುಭವಕ್ಕೆ ಈ ಕ್ಷೇತ್ರದಲ್ಲಿ ಸಂತೃಪ್ತ ಭಾವ ಸಿಗುತ್ತದೆ.

ಇಂಥ ನಾಡಿನಿಂದ ಎಂಥ ಅದ್ಭುತ ನಟ ನಿರ್ದೇಶಕ ರಿಷಭ್ ಶೆಟ್ಟಿ(Rishab Shetty) ಹುಟ್ಟಿಬಂದ ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ.

ಕಾಂತಾರ ಕಡೆಯ 25 ನಿಮಿಷ ನಾನು ಎಲ್ಲಿರುವೆ ಮರೆತು ಹೋಯಿತು.

Kantara

ಚಿತ್ರ ನೋಡಿದ ಮೇಲೆ ಮೌನವಾಯಿತು ದೇಹ ಮನಸ್ಸು ಹೊರಬಂದಾಗ ಕಾಕತಾಳಿಯ ಎಂಬಂತೆ ಮಂತ್ರಾಲಯ ನರಸಿಂಹಚಾರ್ ವಾಟ್ಸ್ಯಾಪ್(Whats App) ಕರೆಮಾಡಿ ರಾಯರ ದರ್ಶನ ಮಾಡಿಸಿದರು ಮೂಕವಿಸ್ಮಿತನಾದೆ.

ನಂತರ ನನಗೆ ಅನ್ನಿಸಿದ್ದು, ಇದು ರಿಷಭ್ ಮಾಡಿದ ಚಿತ್ರವಲ್ಲಾ ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮ ಮಾಡಿಸಿದ್ದಾರೆ.

https://fb.watch/gfhno5NCvv/ ವಿಜಯಪುರ : ಭಾರಿ ಮಳೆಗೆ ತತ್ತರಿಸಿದ ರೈತರ ಜೀವನ!

ದೇವರ ದಯೆಯಿಂದ ರಿಷಭನಿಗೆ ನೂರ್ಕಾಲ ಆಯುಷ್ಯ ಆರೋಗ್ಯ ಕೊಟ್ಟು, ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ.. ಕಾಂತಾರ ಸಿನಿಮ ಅಲ್ಲಾ ರೋಮಾಂಚನ ಅನುಭವ.

Exit mobile version