ನ್ಯಾಯಾಲಯ ಆದೇಶ ಉಲ್ಲಂಘಿಸಿ ಟ್ರೇಡ್‌ ಮಾರ್ಕ್ ಬಳಕೆ, ಕರ್ಲಾನ್‌ ಸಂಸ್ಥಾಪಕರಿಗೆ 15 ದಿನ ಸೆರೆವಾಸ:

Bengaluru: ವಾಣಿಜ್ಯ ನ್ಯಾಯಾಲಯ ಟ್ರೇಡ್‌ ಮಾರ್ಕ್ ಬಳಸದಂತೆ ಹೊರಡಿಸಿದ್ದ ನಿರ್ಬಂಧದ ಆದೇಶವನ್ನು ಕರ್ಲಾನ್‌ ಎಂಟರ್‌ಪ್ರೈಸಸ್‌ (jail for Kurl-on founder) ಲಿ.ನ ಸಂಸ್ಥಾಪಕ ಟಿ ಸುಧಾಕರ್‌

ಪೈ ಉದ್ದೇಶ ಪೂರ್ವಕವಾಗಿ ಉಲ್ಲಂಘಿಸಿದ ಕೇಸ್‌ಗೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್‌ (Highcourt) 15 ದಿನದ ಜೈಲು ಶಿಕ್ಷೆ ವಿಧಿಸಿದೆ. ಇವರ ವಿರುದ್ಧ ಮಣಿಪಾಲ್‌ ಅಕಾಡೆಮಿ ಹೈಯರ್‌

ಎಜುಕೇಷನ್‌ ಹಾಗೂ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಲಿಟಿಗೇಷನ್ (jail for Kurl-on founder) ಹೂಡಿತ್ತು.

ಕರ್ಲಾನ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ ಸಂಸ್ಥಾಪಕ ಟಿ. ಸುಧಾಕರ್‌ ಪೈಗೆ ಟ್ರೇಡ್‌ ಮಾರ್ಕ್ (Trade Mark) ಬಳಸದಂತೆ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಹೊರಡಿಸಿದ್ದ ನಿರ್ಬಂಧ ಆದೇಶವನ್ನು

ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ 15 ದಿನದ ಜೈಲು (Jail) ಸೆರೆವಾಸವನ್ನು ವಿಧಿಸಿದೆ.

ಸುಧಾಕರ್‌ ಪೈ (Sudhakar Pai) ಅವರು ವಾಣಿಜ್ಯ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ. ಅನಂತ ರಾಮನಾಥ ಹೆಗಡೆ (Ramanatha hegde) ಅವರಿದ್ದ ಹೈಕೋರ್ಟ್‌ನ

ನ್ಯಾಯಪೀಠ ಸಂಪೂರ್ಣ ಮಾನ್ಯ ಮಾಡಿದ್ದು, 3 ತಿಂಗಳು ಸಿವಿಲ್‌ ಸೆರೆವಾಸದ ಮೇಲ್ಮನವಿದಾರರಿಗೆ ವಿಧಿಸಿ ವಾಣಿಜ್ಯ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನ ನ್ಯಾಯಪೀಠ ಮೋಡಿಫೈ ಮಾಡಿದೆ.

ಹೈಕೋರ್ಟ್‌ನ ನ್ಯಾಯಪೀಠ ಅರ್ಜಿದಾರರ ಆಸ್ತಿಯನ್ನು 6 ತಿಂಗಳವರೆಗೆ ಜಪ್ತಿ ಮಾಡುವಂತೆ ಹಾಗು ಶಿಕ್ಷೆಯ ಪ್ರಮಾಣವನ್ನು 15 ದಿನಗಳಿಗೆ ಇಳಿಕೆ ಮಡುವಂತೆ ಆದೇಶಿಸಿದೆ. ಅಲ್ಲದೆ ಇದೇ ವೇಳೆ, ಸೆರೆವಾಸ

ಆದೇಶ ಪ್ರಶ್ನಿಸಲು ಮೇಲ್ಮನವಿದಾರರಿಗೆ ಅವಕಾಶ ಕಲ್ಪಿಸಿ, ಶಿಕ್ಷೆ ಜಾರಿಯನ್ನು 3 ವಾರಗಳ ಕಾಲ ಅಮಾನತಿನಲ್ಲಿರಿಸಿದೆ.

ಮಣಿಪಾಲ ಹೆಸರು ಹಾಗೂ ಟ್ರೇಡ್‌ ಮಾರ್ಕ್‌ಗಳನ್ನು ಬಳಸದಂತೆ ಉಡುಪಿಯ ಮಣಿಪಾಲ ಮೂಲದ ಮಣಿಪಾಲ್‌ ಅಕಾಡೆಮಿ ಹೈಯರ್‌ ಎಜುಕೇಷನ್‌ (Manipal Academy Higher education) ಹಾಗೂ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಡೀಮ್ಡ್‌ ವಿಶ್ವವಿದ್ಯಾಲಯ) ಲಿಟಿಗೇಷನ್ (Litigation) ಹಾಕಿದ್ದು, ಕರ್ಲಾನ್‌ ಸಂಸ್ಥಾಪಕ ಸುಧಾಕರ್‌ ಪೈ ಮತ್ತು ಹಲವರನ್ನು ನಿರ್ಬಂಧಿಸಬೇಕೆಂದು ಮನವಿ ಮಾಡಿತ್ತು.

ಇದನ್ನು ಓದಿ: ಕುತೂಹಲದಿಂದ ಕಾಯುತ್ತಿರುವ IND vs PAk ವಿಶ್ವಕಪ್ ಪಂದ್ಯ ಅಕ್ಟೋಬರ್ 15 ನಡೆಯಲ್ಲ : ಕಾರಣ ಇಲ್ಲಿದೆ

ಮಣಿಪಾಲ್‌ ಸಂಸ್ಥೆಗಳ ಕೇಸಿನ ವಿಚಾರಣೆ ನಡೆಸಿದ್ದ ನ್ಯಾಯಾಲಯವು 2019ಫೆ. 21ರಂದು ತಾತ್ಕಾಲಿಕ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತಾದರೂ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ

ಕಾರಣಕ್ಕೆ ಕರ್ಲಾನ್‌ನ ಸುಧಾಕರ್‌ ಪೈ ಅವರನ್ನು ದೋಷಿ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸುಧಾಕರ್‌ ಪೈ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಕರ್ಲಾನ್‌ ಎಂಟರ್‌ಪ್ರೈಸ್‌ ಲಿಮಿಟೆಡ್‌ ಕರ್ನಾಟಕ (Karnataka) ಮೂಲದ ಪ್ರತಿಷ್ಠಿತ ಕಂಪನಿ ಎನ್ನಬಹುದಾದ್ರು ಇದನ್ನು ಶೀಲಾ ಫೋಮ್‌ ಲಿಮಿಟೆಡ್‌ಗೆ (Sheela Foam Limited) ಮಾರಾಟ ಮಾಡಲಾಗಿತ್ತು.

ಇನ್ನು ಮಾಧ್ಯಮಗಳ ವರದಿ ಪ್ರಕಾರ ಸುಮಾರು 3,250 ಕೋಟಿ ರೂ.ಗಳ ಬೃಹತ್‌ ಮೊತ್ತಕ್ಕೆ ಈ ಮಾರಾಟ ಪ್ರಕ್ರಿಯೆ ನಡೆದಿತ್ತು. ಕಂಪನಿಯ ಶೇ. 100ರಷ್ಟೂ ಷೇರುಗಳನ್ನು ಎರಡು ಹಂತಗಳಲ್ಲಿ ಶೀಲಾ ಫೋಮ್‌

ಖರೀದಿಸಲಿದೆ. ಈ ಮಾರಾಟ ಒಪ್ಪಂದವು ಒಂದೆರಡು ತಿಂಗಳೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದ್ದು, ತನ್ನ ಪ್ರತಿಸ್ಪರ್ಧಿ ಕರ್ಲಾನ್‌ ಎಂಟರ್‌ಪ್ರೈಸ್‌ ಅನ್ನು ಶೀಲಾ ಫೋಮ್‌ ಸ್ವಾಧೀನಪಡಿಸಿಕೊಳ್ಳುತ್ತಿದೆ.

ಭವ್ಯಶ್ರೀ ಆರ್.ಜೆ

Exit mobile version