ಆರೋಪಿ ಬೇಕಂತ ಕೊಲೆ ಮಾಡಿಲ್ಲ, ನರ ಕಟ್ ಆಗಿ ಚಂದ್ರು ಸತ್ತಿದ್ದಾನೆ : ಜಮೀರ್ ಅಹ್ಮದ್!

Zameer ahmed

ಇತ್ತೀಚಿಗೆ ಬೆಂಗಳೂರಿನ(Bengaluru) ಜೆಜೆ ನಗರದ(JJ Nagar) ನಿವಾಸಿ ಚಂದ್ರು ಕೊಲೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಇದೇ ಚಂದ್ರು ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ(Congress MLA) ಜಮೀರ್ ಅಹ್ಮದ್(Jameer Ahmed) ಖಾನ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಂದ್ರುವನ್ನು ಕೊಲ್ಲುವ ಉದ್ದೇಶವನ್ನು ಆರೋಪಿಗಳು ಹೊಂದಿರಲಿಲ್ಲ. ಗಲಾಟೆಯಲ್ಲಿ ಚಂದ್ರುವಿನ ತೊಡೆಯ ಭಾಗಕ್ಕೆ ಚಾಕು ಚುಚ್ಚಿದ್ದಾರೆ, ಆಗ ಯಾವುದೋ ನರ ಕಟ್ ಆಗಿ ತೀವ್ರ ರಕ್ತಸ್ರಾವ ಉಂಟಾಗಿ, ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಚಂದ್ರು ಸತ್ತು ಹೋಗಿದ್ದಾನೆ ಎಂದು ಹೇಳುವ ಮೂಲಕ ಶಾಸಕ ಜಮೀರ್ ಅಹ್ಮದ್ ಪರೋಕ್ಷವಾಗಿ ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ.

ಇನ್ನು ಬಿಜೆಪಿಯವರು ಈ ಕೊಲೆಯ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾವು ಶಾಂತಿ-ಸಹಬಾಳ್ವೆಗೆ ಮಹತ್ವ ನೀಡುತ್ತೇವೆ. ಚಾಮರಾಜಪೇಟೆಯಲ್ಲಿ ನಾನು ಶಾಸಕನಾದ ಮೇಲೆ ಯಾವುದೇ ರೀತಿಯ ಗಲಾಟೆಗೂ ಅವಕಾಶ ನೀಡಿಲ್ಲ. ನಾನು ಶಾಸಕನಾಗುವುದಕ್ಕಿಂತ ಮುಂಚೆ ಒಂದಲ್ಲಾ ಒಂದು ಗಲಾಟೆ ಚಾಮರಾಜಪೇಟೆಯಲ್ಲಿ ನಡೆಯುತ್ತಿತ್ತು ಎಂದಿದ್ದಾರೆ.

ಇನ್ನು ಪ್ರತಿಬಾರಿ ಗಲಾಟೆ ಮಾಡಿಸೋದು ರಾಜಕಾಣಿಯೇ ಆದರೆ ಗಲಾಟೆಯಲ್ಲಿ ರಾಜಕಾರಣಿಗಳು ಎಂದಾದರೂ ಸತ್ತಿದ್ದಾರಾ? ಗಲಾಟೆಯಲ್ಲಿ ರಾಜಕಾರಣಿ ಎಂದಿಗೂ ಸಾಯುವುದಿಲ್ಲ.ಆತ ಎಸಿ ರೂಮ್ ನಲ್ಲಿ ಆರಾಮವಾಗಿ ಕುಳಿತಿರುತ್ತಾರೆ. ಹೀಗಾಗಿ ಯಾವುದೇ ಪ್ರಚೋದನೆಗೆ ಒಳಗಾಗದೇ ನನ್ನ ಕ್ಷೇತ್ರದ ಜನತೆ ಸಹಬಾಳ್ವೆಯಿಂದ ಇರಬೇಕೆಂದು ಮನವಿ ಮಾಡಿದರು.

ಇನ್ನು ಇದೇ ಸಂದರ್ಭದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆ ಕುರಿತು ಮಾತನಾಡಿ, ಕೋರ್ಟ್ ಹೇಳಿದಷ್ಟು ಮಾತ್ರ ಶಬ್ದದ ಮೀತಿಯನ್ನು ನಿಯಂತ್ರಿಸಲು ಡಿವೈಸ್ ಗಳನ್ನು ಅಳವಡಿಸಲು ಮೌಲ್ವಿಗಳಿಗೆ ತಿಳಿಸಿದ್ದೇನೆ. ಕಾನೂನು ಪಾಲನೆ ಮಾಡಲಾಗುತ್ತದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಧ್ವನಿವರ್ಧಕ ಬಳಸಲಾಗುವುದು ಎಂದರು.

Exit mobile version