2023 ನೇ ವಿಧಾನಸಭೆ ಚುನಾವಣೆಗೆ JDS ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟ

Bengaluru : 2023ನೇ ವಿಧಾನಸಭೆ ಚುನಾವಣೆಯ (Assembly election) ಪಕ್ಷದ ಅಭ್ಯರ್ಥಿಗಳ ಹೆಸರು ಮತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಪಟ್ಟಿಯನ್ನು ಜೆಡಿಎಸ್‌ (JDS Assembly list 2023) ಪಕ್ಷ ಅಧಿಕೃತವಾಗಿ ಪ್ರಕಟಿಸಿದೆ. ಸದ್ಯ ಜೆಡಿಎಸ್‌ ಬಿಡುಗಡೆಗೊಳಿಸಿರುವ ಪಟ್ಟಿಯ ಈ ಕೆಳಕಂಡಂತೆ ಇದೆ.

ಅಭ್ಯರ್ಥಿಗಳ ಪಟ್ಟಿ :

ರಾಜ್ಯ ರಾಜಕೀಯದಲ್ಲಿ 2023 ರ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯ ಬಿಜೆಪಿ(State Bjp), ರಾಜ್ಯ ಕಾಂಗ್ರೆಸ್‌ ಮತ್ತು ಜಾತ್ಯಾತೀತ ಜನತಾದಳ(ಜೆಡಿಎಸ್)‌ ನಡುವೆ ಚುನಾವಣಾ ಪೈಪೋಟಿ ಭರ್ಜರಿಯಾಗಿ ಸಾಗುತ್ತಿದೆ.

ರಾಜಕೀಯ ಅಖಾಡದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಹಗರಣಗಳ ಆರೋಪ-ಪ್ರತ್ಯಾರೋಪ,

https://youtu.be/iN6ZYyNqBf4

ಕಾಲೆಳೆಯುವ ತಂತ್ರ-ಕುತಂತ್ರಗಳು, ಏಟಿಗೆ ಎದಿರೇಟು ಎಂಬಂತೆ ನಡೆಯುತ್ತಿದೆ. ಅತ್ತ ಬಿಜೆಪಿ(BJP) ನಾಯಕರಲ್ಲಿ ಸ್ಥಾನಕ್ಕಾಗಿ ಕಚ್ಚಾಟ ನಡೆಯುತ್ತಿದ್ದರೂ ಲೆಕ್ಕಿಸದೇ,

ಕಾಂಗ್ರೆಸ್‌(Congress) ವಿರುದ್ಧ ಮಾತಿನ ಸಮರ ಸಾರುತ್ತಿದೆ. ಕಾಂಗ್ರೆಸ್-ಬಿಜೆಪಿ ಮಾತಿನ ಜಟಾಪಟಿಗೆ ಇಳಿದಿದ್ದರೇ,

ಇತ್ತ ಹೆಚ್.ಡಿ ಕುಮಾರಸ್ವಾಮಿ (JDS Assembly list 2023) ಅವರ ನೇತೃತ್ವದಲ್ಲಿ ಮುನ್ನುಗ್ಗುತ್ತಿರುವ ಜೆಡಿಎಸ್‌ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳ ಆಯಾ ಕ್ಷೇತ್ರಗಳ ಅನುಸಾರ ಪಟ್ಟಿಯನ್ನು ಪ್ರಕಟಿಸಿದೆ.

https://vijayatimes.com/1930-to-2022-football-winners/

ಈ ಬಗ್ಗೆ ಅಧಿಕೃತವಾಗಿ ಟ್ವೀಟ್‌(Tweet) ಮುಖೇನ ತಿಳಿಸಿರುವ ಜೆಡಿಎಸ್‌,

2023 ರ ವಿಧಾನಸಭೆ ಚುನಾವಣೆಯ ಜನತಾದಳ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಡಿ.19 ರಂದು(ಸೋಮವಾರ) ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ(CM Ibrahim) ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಪಕ್ಷದ ಸಂಸದೀಯ ಮಂಡಳಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡ (H.D DeveGowda) ಅವರ ಅನುಮೋದನೆ ಮೇರೆಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಟ್ವೀಟ್‌ ಮಾಡಿ ತಿಳಿಸಿದೆ.
Exit mobile version