ನಾನು ಧರಣಿ ಕುಳಿತರು ಡಿಸಿ ಬರಲಿಲ್ಲ, ನಾನೇನು ದನಕಾಯೋನ : ಹೆಚ್ .ಡಿ ರೇವಣ್ಣ!

JDS

ಹಾಸನ(Hassan) ಜಿಲ್ಲೆಯ ವಿಚಾರವಾಗಿ ನಾನು ಧರಣಿ ಕುಳಿತರು ಜಿಲ್ಲಾಧಿಕಾರಿ(DC) ಸೌಜನ್ಯಕ್ಕೂ ಸ್ಥಳಕ್ಕೆ ಬಂದು ಸಮಸ್ಯೆ ಏನೆಂದು ಕೇಳಲಿಲ್ಲ. ನಾನೇನು ದನಕಾಯೋನ?

ಯಾವಾಗ್ಲೂ ಬಿಜೆಪಿ ಅಧಿಕಾರದಲ್ಲಿ ಇರುತ್ತಾ? ನಾನು ಕಳೆದ 25 ವರ್ಷಗಳಿಂದ ಎಲ್ಲವನ್ನೂ ನೋಡಿಕೊಂಡೆ ಬಂದಿದ್ದೇನೆ ಎಂದು ಜೆಡಿಎಸ್(JDS) ಶಾಸಕ(MLA) ಎಚ್.ಡಿ ರೇವಣ್ಣ(HD Revanna) ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್(R Girish) ವಿರುದ್ದ ಆಕ್ರೋಶ ಹೊರಹಾಕಿದರು. ಹಾಸನದಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ ಜಿಲ್ಲಾಧಿಕಾರಿ ಕರೆದ ಸಭೆಗೆ ಹೋದರೆ ಬೆಲೆ ಕೊಡಲ್ಲ. ಅಧಿಕಾರ ಇದೆ ಅಂತಾ ಎಷ್ಟು ದಿನಾ ಅಡ್ತಾನೆ ಆಡ್ಲಿ. ರಾತ್ರೋರಾತ್ರಿ ತಾಲೂಕು ಕಚೇರಿ ಒಡೆದ್ರು.

ಹಗಲಿನಲ್ಲಿ ಮಾಡಲು ಇವರಿಗೆ ಪುರುಸೊತ್ತಿಲ್ಲ. ರಾತ್ರಿ ವೇಳೆ ಬಿಡ್ದಿಂಗ್ ಒಡೆಯುವುದರಲ್ಲಿ ಬ್ಯುಸಿ ಇದ್ದಾರೆ. ಇವರು ಹೀಗೆ ಮಾಡುತ್ತಾ ಹೋದರೆ ಡಿಸಿ ಅನ್ನೊ ಪದ ತೆಗೆಯಬೇಕಾಗುತ್ತದೆ. ಇನ್ನು ನಾನು ಶಾಸಕನಾಗಿದ್ದೇನೆ. ನನ್ನ ವ್ಯಾಪ್ತಿಗೆ ಎರಡು ಹೋಬಳಿ ಬರುತ್ತೇ. ಮಂತ್ರಿ ಹೇಳಿದ್ರು ಅಂತಾ ಏನು ಬೇಕಾದ್ರು ಮಾಡೋಕೆ ಆಗುತ್ತಾ? ಮಂತ್ರಿ ಅವರಿಗೆ ನನಗಲ್ಲ. ಸರ್ಕಾರಿ ಕಟ್ಟಡಗಳನ್ನು ರಾತ್ರಿ ಒಡೆಯುವ ಬದಲು ಹಗಲಿನಲ್ಲಿ ಒಡೆಯಬೇಕಿತ್ತು. ಹೇಳೋರು, ಕೇಳೋರು ಯಾರು ಇಲ್ಲಾ ಎಂದುಕೊಂಡಿದ್ದಾರೆ. ಎಷ್ಟು ದಿನ ನಡೆಯುತೇ ಈ ಅಧಿಕಾರದ ದರ್ಪ ಎಂದು ವಾಗ್ದಾಳಿ ನಡೆಸಿದರು.

ಇನ್ನು ಮಂತ್ರಿ ಹೇಳಿದ್ರು ಅಂತಾ ತಾಲೂಕು ಕಚೇರಿ ಹೊಡೆದ್ರು. ಈಗ ಜಿಲ್ಲಾಧಿಕಾರಿ ಕಚೇರಿ ಹೊಡೆದ್ರೆ ಪರಿಣಾಮ ಗಂಭೀರ ಆಗುತ್ತೆ. ಜಿಲ್ಲಾಧಿಕಾರಿ ವಿರುದ್ದ ಕ್ರಿಮಿನಲ್ ಕೇಸ್ ಹಾಕುತ್ತೇನೆ. ಈಗಾಗಲೇ ರಾಜ್ಯಪಾಲರಿಗೆ ಈ ಕುರಿತು ಪತ್ರ ಬರೆದಿದ್ದೇನೆ. ಈಗಿರುವ ಡಿಸಿಗೆ ಅಧಿಕಾರ ನಡೆಸುವ ಯೋಗ್ಯತೆ ಇಲ್ಲ. ರಬ್ಬರ್ ಸ್ಟಾಂಪ್ ತರ ಕೆಲಸ ಮಾಡ್ತಾನೆ. ಇವರಿಗೆಲ್ಲಾ ಜನಹಿತ ಬೇಕಿಲ್ಲ. ದುಡ್ಡು ಹೊಡೆಯುತ್ತಾರೆ ಎಂದು ಆರೋಪಿಸಿದರು.

Exit mobile version