ಇದು ಹಣವಂತ ಹಾಗೂ ಹೃದಯವಂತನ ನಡುವಿನ ಯುದ್ಧ, ಡಾಕ್ಟರ್ – ಲೂಟರ್ ನಡುವಿನ ಸಂಗ್ರಾಮ – ಡಿಕೆ ಬ್ರದರ್ಸ್ ವಿರುದ್ದ ದಳ ಕಿಡಿ

ಮುಂಬರುವ ಲೋಕಸಭಾ ಚುನಾವಣೆ ಹಣವಂತ ಹಾಗೂ ಹೃದಯವಂತನ ನಡುವಿನ ಯುದ್ಧ. ದರ್ಪ ಮತ್ತು (JDS Tweet Against DK Brothers) ವಿನಯದ ನಡುವಿನ ಸಮರ. ಡಾಕ್ಟರ್ – ಲೂಟರ್

(Doctor-Looter) ನಡುವಿನ ಸಂಗ್ರಾಮ. ನಿಮ್ಮನ್ನು ಹೆದರಿಸುವ ಬೆದರಿಸಿ ಸುಲಿಗೆ ಮಾಡುವ ಲೂಟಿಕೋರರರು ಬೇಕೋ ಅಥವಾ ಜನಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಡಾಕ್ಟರ್

ಬೇಕೋ.. ನೀವೇ ನಿರ್ಧರಿಸಿ ಎಂದು ಡಿಕೆ ಬ್ರದರ್ಸ್ (JDS Tweet Against DK Brothers) ವಿರುದ್ದ ಜೆಡಿಎಸ್ (JDS) ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಜೆಡಿಎಸ್, ನಿಮ್ಮ ಕೆಲಸ ಆಗಬೇಕಾ? ನನ್ನ ತಮ್ಮನನ್ನು ಗೆಲ್ಲಿಸಿ..! ನಿಮಗೆಲ್ಲ ಕಾವೇರಿ ನೀರು ನಾನು ಕೊಡಕ್ಕಾಗುತ್ತಾ ಇನ್ನು ಯಾರಾದ್ರೂ ಕೊಡಕ್ಕಾಗುತ್ತಾ?

ಮತಗಳನ್ನು ಬಾರ್ಟರ್ ಸಿಸ್ಟಮ್ ನಲ್ಲಿ ಖರೀದಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಡಿಕೆ ಶಿವಕುಮಾರ್ (D K Shivakumar) ರಾಜ್ಯದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಈ ವ್ಯಕ್ತಿ ಅಪಾರ್ಟ್ಮೆಂಟ್

ಜನರಿಗೆ ಹೆದರಿಸಿ ಬೆದರಿಸುತ್ತಿರುವುದು ಸ್ಪಷ್ಟ. ಸೋಲಿನ ಖಚಿತ ಸುಳಿವು ಸಿಕ್ಕಿರುವುದಕ್ಕೇ ಮತದಾರರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ತಿಹಾರ್ ಕುಮಾರ! ಈ ವ್ಯಕ್ತಿಯ ನಡವಳಿಕೆ ಯಾವ ಮಟ್ಟದಲ್ಲಿದೆ

ಎನ್ನುವುದನ್ನು ಜನರು ಗಮನಿಸಬೇಕು.

ಅಣ್ಣ-ತಮ್ಮ ಇಬ್ಬರೂ ಕುಕ್ಕರ್ ಸೀರೆ ಹಂಚಿದ್ದಾಯಿತು, ಕೂಪನ್ ಕಾರ್ಡ್ (Coupon Card) ಕೊಟ್ಟಿದ್ದಾಯಿತು, ಪುಡಿರೌಡಿಗಳನ್ನು ಬಿಟ್ಟು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿದ್ದಾಯಿತು.

ಈಗ ಮತದಾರರನ್ನು ಬ್ಲಾಕ್ ಮೇಲ್ (Black Mail) ಮಾಡುತ್ತಿದ್ದಾರೆ ಎಂದು ಟೀಕಿಸಿದೆ. ಇನ್ನೊಂದು ಟ್ವೀಟ್ನಲ್ಲಿ, ಅಣ್ಣ-ತಮ್ಮ ಇಬ್ಬರೂ ಸೇರಿ ನೀತಿ ಸಂಹಿತೆ ಮಾತಿರಲಿ, ನೀತಿಗೆಟ್ಟ ಕೆಲಸಗಳಿಂದ ಇಡೀ ಚುನಾವಣೆಯ

ನಿಯಮಗಳನ್ನೇ ಮಾರಣಹೋಮ ಮಾಡುತ್ತಿದ್ದಾರೆ.

ಅವರಿಬ್ಬರೂ ಇಷ್ಟೆಲ್ಲಾ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಚುನಾವಣಾ ಆಯೋಗ ಇದೆಯಾ? ಇಲ್ಲವಾ? ಈ ಪ್ರಶ್ನೆ ಸಹಜ. ಸೋಲಿನ ಭೀತಿ ಏನನ್ನೆಲ್ಲಾ

ಮಾಡಿಸುತ್ತದೆ ಎನ್ನುವುದಕ್ಕೆ ಅಣ್ತಮ್ಮಗಳ ಹಾರಾಟ, ಚೀರಾಟವೇ ಸಾಕ್ಷಿ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಡಾ||ಸಿ.ಎನ್.ಮಂಜುನಾಥ್ (Dr. C N Manjunath) ಅವರನ್ನು ಎನ್ಡಿಎ

ಅಭ್ಯರ್ಥಿಯನ್ನಾಗಿ ಘೋಷಿಸಿದಾಗಲೇ ಬಂಡೆಗಳು ಕಂಪಿಸಿ ಬಿರುಕು ಬಿಟ್ಟಿದ್ದವು! ಈಗ ಬೆವರುತ್ತಿವೆ, ಜೂನ್ (June) 4ರಂದು ಮತದಾರ ಪ್ರಭುಗಳ ಆಶೀರ್ವಾದದಿಂದ ಅವು ಪುಡಿ ಪುಡಿ ಆಗುವುದರಲ್ಲಿ

ಅನುಮಾನವೇ ಇಲ್ಲ ಎಂದಿದೆ.

ಇದನ್ನು ಓದಿ: ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Exit mobile version