ಟಿಕಟ್ ಆಕಾಂಕ್ಷಿಗಳಿಗೆ ಪರೀಕ್ಷೆ ನಡೆಸಲು ಮುಂದಾದ ಜೆಡಿಎಸ್

ರಾಮ​ನ​ಗರ ಸೆ.28 : 2023 ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಜೆಡಿಎಸ್‌ ಇದೀಗ ಚುನಾವಣಾ ಟಿಕೆಟ್ ಆಕಾಂಕ್ಷಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಪ್ರಯತ್ನದೊಂದಿಗೆ ಜಡಿಎಸ್‌ ಪ್ರಬಲ ಅಭ್ಯರ್ಥಿಗಳ ಹುಡುಕಾಟಕ್ಕೆ ಮುಂದಾಗಿರುವುದಂತು ಸ್ಷಷ್ಟವಾಗಿದೆ.

ಹಾಗದ್ರೆ ಆಕಾಂಕ್ಷಿಗಳ ಪರೀಕ್ಷೆ ಪ್ರಶ್ನೆ ಪತ್ರಿಕೆ ಹೇಗಿರಲಿದೆ

ಈ ಪ್ರಶ್ನೆ ಪತ್ರಿ​ಕೆ​ಯಲ್ಲಿ ಗೆಲುವಿಗಾಗಿ ಆಯ್ಕೆ ಮಾಡಿಕೊಂಡ ಟಾಪ್‌ 10 ನಾಯಕರ ಹೆಸರು, ತಮ್ಮ ಕ್ಷೇತ್ರದಲ್ಲಿ ಎಷ್ಟುಸದಸ್ಯತ್ವ ನೋಂದಣಿ ಮಾಡಿಸಿದ್ದೀರಿ? ಎಚ್‌ಡಿಕೆ ಅವರಲ್ಲಿ ನಿಮಗೆ ಇಷ್ಟವಾದ ಎರಡು ಗುಣಗಳೇನು? ಎಚ್‌ಡಿಕೆ ಅವರ ಇಷ್ಟವಾಗದ ಎರಡು ಗುಣಗಳು ಯಾವುವು? ನಿಮ್ಮ ಕ್ಷೇತ್ರದ ಜನ ನಿಮ್ಮಲ್ಲಿ ಇಷ್ಟಪಡುವ ಗುಣಗಳೇನು? ಇಷ್ಟಪಡದ ಗುಣಗಳೇನು? ಪ್ರಾದೇ​ಶಿಕ ಪಕ್ಷದ ಆರು ಅನು​ಕೂ​ಲ​ತೆ​ಗಳನ್ನು ತಿಳಿಸಿ? ತಮ್ಮ ಗೆಲು​ವಿನ ಎರಡು ಪ್ರಮುಖ ಸೂತ್ರ​ಗ​ಳನ್ನು ತಿಳಿಸಿ ಎಂಬ ಪ್ರಶ್ನೆಗಳ ಜೊತೆಗೆ ಇನ್ನೂ ಹಲವು ಪ್ರಶ್ನೆಗಳು ಇರಲಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಮುಂದಿನ ಚುನಾವಣಗೆ ಈಗಿನಿಂದಲೇ ತಯಾರಿ

ಮುಂದಿನ ವಿಧಾನಸಭೆ ಚುನಾವಣೆಯ ಪಕ್ಷವನ್ನು ಸಜ್ಜುಗೊಳಿಸುವ ದೃಷ್ಠಿಯಿಂದ ಜೆಡಿಎಸ್‌ಆರಂಭಿಸಿರುವ 4 ದಿನಗಳ ‘ಜನತಾ ಪರ್ವ -1.0 ಹಾಗೂ ಜೆಡಿ​ಎಸ್‌ ಮಿಷನ್‌ -123’ ಕಾರ್ಯಾ​ಗಾ​ರ​ದಲ್ಲಿ ಮೊದಲ ದಿನ ಭಾಗ​ವ​ಹಿ​ಸಿದ್ದ 200 ಪ್ರತಿ​ನಿ​ಧಿ​ಗ​ಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಹಲವು ಸಲಹೆಗಳನ್ನು ನೀಡಿದರು.

ಈ ಬಗ್ಗೆ ಒಂದು ತಾಸಿಗೂ ಹೆಚ್ಚು ಕಾಲ 2023ರ ವಿಧಾ​ನ​ಸಭಾ ಚುನಾವಣೆ ಎದುರಿಸುವ ಬಗ್ಗೆ ತಮ್ಮ ಕನಸು, ಪರಿಕಲ್ಪನೆ ಹಂಚಿಕೊಂಡ ಎಚ್‌ಡಿಕೆ, ಜನರನ್ನು ತಲುಪುವ ಬಗೆ, ಸಂಘಟನೆ, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಕಾಲ ಕಾಲಕ್ಕೆ ಪಕ್ಷ ನೀಡುವ ಸೂಚನೆಗಳನ್ನು ಪಾಲಿಸುವುದು, ಗೆಲುವಿಗಾಗಿ ಮಾಡಬೇಕಾದ ಎಲ್ಲ ಪ್ರಯತ್ನಗಳ ಬಗ್ಗೆ ವಿವರವಾಗಿ ಹೇಳಿದರು.

ಪಕ್ಷವನ್ನು ಸಂಘಟನೆ ಮಾಡುವುದರ ಜತೆಗೆ ಮಹಿಳಾ ಘಟಕ ಯುವ ಘಟಕ, ವಿಧ್ಯಾರ್ಥಿ ಘಟಕವನ್ನು ಬಲಗೊಳಿಸುವ ಬಗ್ಗೆ ಸಲಹೆ ನೀಡಿದರು. ಕಷ್ಟಕಾಲದಲ್ಲಿ ಪಕ್ಷದ ಜೊತೆ ನಿಂತ ಯಾರನ್ನೂ ಕೈ ಬಿಡುವುದಿಲ್ಲ. ಎಲ್ಲರೂ ತಮ್ಮ ಶಕ್ತಿಯನ್ನು ಬಳಸಿ ಸಂಘಟನೆ ಮಾಡಿ ಗೆಲ್ಲಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಪಕ್ಷ ನೀಡಲಿದೆ ಎಂದು ಹೆಚ್‌ಡಿಕೆ ಅವರು ತಿಳಿಸಿದರು

Exit mobile version