‘ಗೋಡ್ಸೆಯನ್ನು ದೇವರಾಗಿ ಕಾಣುವ ಮೋದಿ’ ಎಂದು ಟ್ವೀಟ್ ಮಾಡಿದ್ದ ಜಿಗ್ನೇಶ್ ಮೆವಾನಿ ಪೊಲೀಸರ ವಶಕ್ಕೆ!

jignesh mevani

ಗುಜರಾತಿನ(Gujarat) ವಡಗಾಮ್ ಕ್ಷೇತ್ರದ ಕಾಂಗ್ರೆಸ್ ಶಾಸಕ(Congress MLA) ಜಿಗ್ನೇಶ್ ಮೆವಾನಿಯನ್ನು(Jignesh Mewani) ಅಸ್ಸಾಂ ಪೋಲಿಸರು(Assam Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಧಾನಿ(Primeminister) ನರೇಂದ್ರ ಮೋದಿಯವರ(Narendra Modi) ಕುರಿತು ಮತ್ತು ಸಾಮಾಜಿಕ ಸ್ವಾಸ್ಥ್ಯ ಕದಡುವ ರೀತಿ ಟ್ವೀಟ್(Tweet) ಮಾಡಿರುವ ಆರೋಪದ ಹಿನ್ನಲೆಯಲ್ಲಿ ಶಾಸಕ ಜಿಗ್ನೇಶ ಮೆವಾನಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ‘ಗೋಡ್ಸೆಯನ್ನು ದೇವರಾಗಿ ಕಾಣುವ ಪ್ರಧಾನಿ ಮೋದಿ’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದ ಜಿಗ್ನೇಶ್ ಮೆವಾನಿ, ಗುಜರಾತ್ ಹತ್ಯಾಕಾಂಡದ ಕುರಿತು ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾಗಿ ಮಾತನಾಡಬೇಕು.

ಗುಜರಾತ್‍ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಬೇಕು ಎಂದಿದ್ದರು. ಈ ಟ್ವೀಟ್‍ಗಳ ಕುರಿತು ದೂರು ನೀಡಿರುವ ಅಸ್ಸಾಂ ರಾಜ್ಯದ ಕೋಕರಾಝಾರ್ ಜಿಲ್ಲೆಯ ಅನುಪ್ ಕುಮಾರ್ ಡೇ “ಜಿಗ್ನೇಶ್ ಮೆವಾನಿ ಅವರು ಮಾಡಿರುವ ಈ ಟ್ವೀಟ್‍ಗಳಿಂದ ಒಂದು ನಿರ್ದಿಷ್ಟ ಸಮುದಾಯ ಮತ್ತೊಂದು ಸಮುದಾಯದ ಮೇಲೆ ಗಲಾಟೆ ನಡೆಸುವಂತೆ ಉತ್ತೇಜಿಸುತ್ತದೆ. ಇದರಿಂದ ಸಾರ್ವಜನಿಕ ಶಾಂತಿಗೆ ಹಾನಿಯಾಗಿದೆ” ಎಂದು ಅಸ್ಸಾಂನಲ್ಲಿ ದೂರು ನೀಡಿದ್ದಾರೆ.

ಇನ್ನು ಅಸ್ಸಾಂ ಪೊಲೀಸರ ತಂಡವು ಬನಾಸಕಾಂಠಾದ ಪಾಲನ್ಪುರ್‍ನ ಅಥಿತಿ ಗೃಹದಲ್ಲಿ ಜಿಗ್ನೇಶ ಮೆವಾನಿಯನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಪೋಲಿಸರು ಕಾಂಗ್ರೆಸ್ ಕಾರ್ಯಕರ್ತರಿಗೆ ಬಂಧನದ ಕಾರಣ ತಿಳಿಸಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಮುಖಂಡರು ಮತ್ತು ಬೆಂಬಲಿಗರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಗಲಾಟೆ ನಡೆಸುತ್ತಿದ್ದಂತೆ, ಜಿಗ್ನೇಶ್ ಮೆನಾವಿ ಮಾಡಿರುವ ಟ್ವೀಟ್‍ಗಳ ಬಗ್ಗೆ ದೂರು

Exit mobile version