Tumakur:ಐಟಿಐ (ITI), ಡಿಪ್ಲೊಮ (Deploma), ಯಾವುದಾದರೂ ಪದವಿ ಪಾಸ್ ಮಾಡಿದ್ದೀರಾ? ಹಾಗಾದ್ರೆ (job vacancy in hal) ನಿಮಗಿದೆ ಸುವರ್ಣಾವಕಾಶ. ಹೆಚ್.ಎ.ಎಲ್ (HAL) ತುಮಕೂರು
ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆರ್ಹರಿಂದ ಅರ್ಜಿ ಕರೆಯಲಾಗಿದೆ. ಈ ಹುದ್ದೆಗಳಿಗೆ ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ತುಮಕೂರಿನ ಗುಬ್ಬಿ (Gubbi) ತಾಲ್ಲೂಕಿನಲ್ಲಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಹೆಲಿಕಾಪ್ಟರ್ (Helicopter) ವಿಭಾಗವು ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಗೆ
ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಲಿದ್ದು, ಆಸಕ್ತರು (job vacancy in hal) ಇಲ್ಲಿಗೆ ಅರ್ಜಿ ಹಾಕಬಹುದಾಗಿದೆ.
ನೀವು ಈಗಾಗಲೇ ನೊಂದಾಯಿತರಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳು ತಮ್ಮ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸಗಳನ್ನು ಎನ್‌ಎಸಿ (NAC)/ ಎನ್‌ಸಿವಿಟಿ (NCVT)/ ಏಟಿಎಸ್ (ATS) ನ ಪ್ರಮಾಣ
ಪತ್ರವನ್ನು ತಮ್ಮ ನೋಂದಾಯಿತ ಎಂಪ್ಲಾಯ್‌ಮೆಂಟ್ (Employeement) ಕಾರ್ಡ್‌ಗೆ ಸೇರಿಸುವುದು ಕಡ್ಡಾಯವಾಗಿರುತ್ತದೆ. ಐಟಿಐ, ಡಿಪ್ಲೊಮ, ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು (ಬಿ.ಇ (B.E) /
ಬಿ.ಟೆಕ್ (B.Tech) ಹೊರತುಪಡಿಸಿ) ಅಗತ್ಯ ದಾಖಲಾತಿಗಳೊಂದಿಗೆ ತುಮಕೂರು ಉದ್ಯೋಗ ವಿನಿಮಯ ಕಛೇರಿಗೆ ಭೇಟಿ ನೀಡಿ ತಮ್ಮ ಹೆಸರು ನೊಂದಾವಣೆ ಮಾಡಿಕೊಳ್ಳಬೇಕಾಗಿದೆ.

ರಿಜಿಸ್ಟ್ರೇಷನ್‌ಗೆ (Registration) ಬೇಕಾದ ದಾಖಲಾತಿಗಳು
ಹೆಸರು:
ಇ-ಮೇಲ್ (E-Mail) ವಿಳಾಸ:
ಮೊಬೈಲ್ ನಂಬರ್ (Mobile Number):
ಎಸ್‌ಎಸ್‌ಎಲ್‌ಸಿ (S.S.L.C) ಅಂಕಪಟ್ಟಿ:
ಹುಟ್ಟಿದ ದಿನಾಂಕ ಪ್ರಮಾಣ ಪತ್ರ:
ಐಟಿಐ (ITI), ಡಿಪ್ಲೊಮ (Diploma), ಪದವಿ ಪ್ರಮಾಣ ಪತ್ರ
ಆಧಾರ್ ಕಾರ್ಡ್ (Aadhar Card):
ಕಾರ್ಯಾನುಭವಿಗಳಾಗಿದ್ದಲ್ಲಿ ಪ್ರಮಾಣ ಪತ್ರ:
ತುಮಕೂರು ಉದ್ಯೋಗ ವಿನಿಮಯ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಪಡೆದ ಅಭ್ಯರ್ಥಿಗಳನ್ನು ಹೆಚ್‌ಎಎಲ್ (HAL) ಹುದ್ದೆಗಳಿಗೆ ಅನುಗುಣವಾಗಿ ನಿಗದಿತ ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಶಾರ್ಟ್
ಲಿಸ್ಟ್ (Shart List) ಮಾಡಿ ಹೆಸರುಗಳನ್ನು ಶಿಫಾರಸು ಮಾಡಲಾಗುತ್ತದೆ.
ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಕಂಪನಿಗೆ ಕರ್ನಾಟಕದಲ್ಲಿ ಭಾರೀ ವಿರೋಧ..!
ಅಂತಹ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಸಂದರ್ಶನಕ್ಕೆ ಹಾಜರಾಗಬೇಕಿರುತ್ತದೆ. ನಂತರ ಅಂತಿಮವಾಗಿ ಉದ್ಯೋಗ ಆದೇಶ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಯ ಕುರಿತು ನಿಗಧಿತ
ದಿನಾಂಕವನ್ನು ಪ್ರಕಟಣೆಯಲ್ಲಿ ತಿಳಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ಸಾಧ್ಯವಾದಷ್ಟು ಶೀಘ್ರದಲ್ಲಿ ರಿಜಿಸ್ಟ್ರೇಷನ್ (Registration) ಪಡೆಯಬೇಕಿದೆ.
ಯಾವುದೇ ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಸದರಿ ಕಚೇರಿಯನ್ನು ಕೂಡಲೇ ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ – 0816-2278488
ಭವ್ಯಶ್ರೀ ಆರ್.ಜೆ