ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಲಿಖಿತ ಪರೀಕ್ಷೆ ಇಲ್ಲ, SSLC ವಿದ್ಯಾರ್ಹತೆ..!

Shimoga: ಕರ್ನಾಟಕ (Karnataka) ರಾಜ್ಯ ಅರಣ್ಯ ಇಲಾಖೆಯ ಶಿವಮೊಗ್ಗ #Shimoga ವಲಯದ ಅರಣ್ಯ ವೃತ್ತದಲ್ಲಿ ಖಾಲಿ ಇರುವ ಅರಣ್ಯ (Job vacancy in KFD 2023) ವೀಕ್ಷಕರ

ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಿರುವ ವಿದ್ಯಾರ್ಹತೆ,

ಅರ್ಜಿ ಶುಲ್ಕ, ಆಯ್ಕೆ ವಿಧಾನ, ವೇತನ ಸೇರಿದಂತೆ (Job vacancy in KFD 2023) ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಶೈಕ್ಷಣಿಕ ಅರ್ಹತೆ : ಎಸ್ಎಸ್ಎಲ್ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯನ್ನು ಪಾಸ್ ಮಾಡಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು.ಹಿಂದುಳಿದ ವರ್ಗದವರಿಗೆ 32 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ ಅಭ್ಯರ್ಥಿಗಳಿಗೆ 33 ವರ್ಷ ಗರಿಷ್ಠ ವಯಸ್ಸಿನ ಮಿತಿಯನ್ನು ನಿಗಧಿಪಡಿಸಲಾಗಿದೆ.

ಅರ್ಜಿ ಶುಲ್ಕ :
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 200 ರೂ.ಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 100 ರೂ.ಗಳು
ಅರ್ಜಿ ಸಲ್ಲಿಕೆ ಮಾಡಿದ ನಂತರ ಆನ್ಲೈನ್ನಲ್ಲಿ ಚಲನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇ-ಪಾವತಿ ಸೌಲಭ್ಯ ಇರುವ ಅಂಚೆಗಳಲ್ಲಿ ಶುಲ್ಕವನ್ನು ಪಾವತಿ ಮಾಡಬೇಕು.

ಅರ್ಜಿ ಸಲ್ಲಿಸುವ ವಿಧಾನ : ರಾಜ್ಯ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ https://aranya.gov.in ಮುಖ ಪುಟಕ್ಕೆ ಭೇಟಿ ನೀಡಿ, ಅರ್ಜಿ ಭರ್ತಿ ಮಾಡಬಹುದು. ಈ ವಿಧಾನವನ್ನು ಹೊರತುಪಡಿಸಿ

ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸಲ್ಲಿಸಬಾರದು.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು : ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಜಾತಿ / ಪ್ರವರ್ಗ / ಗ್ರಾಮೀಣ / ಕನ್ನಡ ಮಾಧ್ಯಮ / ಯೋಜನಾ ನಿರಾಶ್ರಿತ / ಸೈನಿಕ ಸೇವೆ / ತೃತೀಯ ಲಿಂಗ

ಅಭ್ಯರ್ಥಿಗಳು ಇತ್ಯಾದಿ ದೃಢೀಕರಣ ಪ್ರಮಾಣ ಪತ್ರಗಳನ್ನು ಮತ್ತು ಜನ್ಮ ದಿನಾಂಕ ದೃಢೀಕರಿಸುವ ಪ್ರಮಾಣ ಪತ್ರಗಳು.
ಆಯ್ಕೆ ವಿಧಾನ : ಅಂಕಗಳ ಆಧಾರದಲ್ಲಿ 1:20 ಪಟ್ಟಿ ಬಿಡುಗಡೆ. ನಂತರ ದೈಹಿಕ ಪರೀಕ್ಷೆ ನಡೆಸಿ ಅರ್ಹತಾ ಪಟ್ಟಿ ಬಿಡುಗಡೆ. ಮೂಲ ದಾಖಲೆಗಳ ಪರಿಶೀಲನೆ, ಮೆಡಿಕಲ್ ಟೆಸ್ಟ್ (Medical Test) ನಂತರ

ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ : 27-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 26-10-2023
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 31-10-2023

ಇದನ್ನು ಓದಿ: ಕಾವೇರಿದ ಕಾವೇರಿ ಕಿಚ್ಚು ; ಹೋರಾಟಕ್ಕಿಳಿದ ನಿರ್ಮಲಾನಂದನಾಥ ಶ್ರೀಗಳು..!

Exit mobile version