Mandya : ತಮಿಳುನಾಡಿಗೆ (Tamilnadu) ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ (Supreme Court) ನೀಡಿರುವ ಆದೇಶದ ಹಿನ್ನಲೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸಾಮೀಜಿಗಳು ಮಂಡ್ಯದಲ್ಲಿ ಹೋರಾಟಕ್ಕಿಳಿದಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ ಹೋರಾಟದಲ್ಲಿ ಯಲ್ಲಿ ಭಾಗಿಯಾಗಲು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, (Dr.Nirmalanandanath Swamiji,) ಹಾಗೂ ವಿವಿಧ ಶಾಖೆಗಳ ಶಾಖಾ ಮಠಾಧೀಶರು ಆಗಮಿಸಿದ್ದಾರೆ. ಈಗಾಗಲೇ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಾಡಿನ ಅನೇಕ ನಟರು, ಸ್ವಾಮೀಜಿಗಳು, ಸಾಹಿತಿಗಳು ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ಇದೀಗ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೋರಾಟಕ್ಕೆ ಮುಂದಾಗಿರುವುದು ಕಾವೇರಿಯ ಕಾವು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನಲೆ ಪ್ರತಿಭಟನೆ ನಡೆಯುತ್ತಿದ್ದು, ಸೆಪ್ಟೆಂಬರ್ (September) 23 ರಂದು ಮಂಡ್ಯ ಬಂದ್ಗೂ ಕರೆ ನಿಡಲಾಗಿದೆ. ಕಾವೇರಿ ಹೋರಾಟಕ್ಕಿಳಿದಿರುವ ನಟ ಅಭಿಷೇಕ್ ಅಂಬರೀಷ್ ಹೋರಾಟಗಾರರಿಗೆ ಸಾಥ್ ನೀಡದ್ದು, ಬಂದ್ ಬಗ್ಗೆ ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಜಲಮಂಡಳಿಗೆ ಮುತ್ತಿಗೆ : ಪ್ರತಿಭಟನಾಕಾರರು ಬೆಂಗಳೂರು ಜಲಮಂಡಳಿಗೆ ಮುತ್ತಿಗೆ ಹಾಕಿದ್ದಾರೆ. ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿರುವ ಬೆಂಗಳೂರಿಗೆ ನೀರು ಸರಬರಾಜು ಆಗುವ ಕೇಂದ್ರದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಟ್ಟಿರುವುದನ್ನ ಖಂಡಿಸಿ ಆಕ್ರೋಶ ಹೊರಹಾಕಿದರು. ಇದೇ ವೇಳೆ ಬೆಂಗಳೂರಿಗರ ಮೇಲೂ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, “ಬೆಂಗಳೂರಿನ ಜನರು ಕಾವೇರಿ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ಕಾವೇರಿಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲ ಕನ್ನಡಿಗರ ಮೇಲೂ ಇದೆ. ಬೆಂಗಳೂರಿಗರು ಬದುಕುತ್ತಿರುವುದೇ ಕಾವೇರಿ ನೀರಿನಿಂದ. ಹೀಗಾಗಿ ಬೆಂಗಳೂರಿನಗರು ಕೂಡಾ ಬೀದಿಗೆ ಬಂದು, ಹೋರಾಟಕ್ಕೆ ಸಾಥ್ ನೀಡಬೇಕು. ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕಾವೇರಿ ನೀರು ಬೇಕು, ಹೋರಾಟ ಬೇಡ ಎನ್ನುವುದು ಸರಿಯಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಜಲಮಂಡಳಿಗೆ ಮುತ್ತಿಗೆ ಹಾಕಿದ್ದ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.