ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ (Hindustan Copper ltd) ಅಧಿಕೃತ ಅಧಿಸೂಚನೆಯ ಮೂಲಕ ಸೂಪರ್ವೈಸರ್ (jobs in hcl 2023)
ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು (jobs in hcl 2023) ಆಹ್ವಾನಿಸಿದೆ. ಅದರ ವಿವರ ಇಲ್ಲಿದೆ ನೋಡಿ.

ಸಂಸ್ಥೆಯ ಹೆಸರು: ಹಿಂದೂಸ್ತಾನ್ ಕಾಪರ್ ಲಿಮಿಟೆಡ್ – HCL
ಒಟ್ಟು ಹುದ್ದೆಗಳ ಸಂಖ್ಯೆ: 65
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ: 30000-120000 ರೂಪಾಯಿ ಪ್ರತಿ ತಿಂಗಳು
ಹುದ್ದೆಗಳ ವಿವರ :
ಹಣಕಾಸು- 1
ಮಾನವ ಸಂಪನ್ಮೂಲ- 1
ಗಣಿಗಾರಿಕೆ- 49
ಎಲೆಕ್ಟ್ರಿಕಲ್- 8
ಸಮೀಕ್ಷೆ- 2
ಯಾಂತ್ರಿಕ- 2
ಕಾರ್ಯದರ್ಶಿ- 2

ಅರ್ಹತೆಗಳು :
• ಹಣಕಾಸು: ಸಿಎ (CA), ಪದವಿ, ಸ್ನಾತಕೋತ್ತರ ಪದವಿ, ಹಣಕಾಸು ವಿಷಯದಲ್ಲಿ ಎಂಬಿಎ
• ಮಾನವ ಸಂಪನ್ಮೂಲ: ಮಾನವ ಸಂಪನ್ಮೂಲ ಅಥವಾ MBA ನಲ್ಲಿ ಸ್ನಾತಕೋತ್ತರ ಪದವಿ
• ಎಲೆಕ್ಟ್ರಿಕಲ್ (Electrical): ಡಿಪ್ಲೊಮಾ (Deploma), ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ (Electrical Engineer) ಪದವಿ
• ಗಣಿಗಾರಿಕೆ: ಡಿಪ್ಲೊಮಾ, ಮೈನಿಂಗ್ ಎಂಜಿನಿಯರಿಂಗ್ನಲ್ಲಿ (Mining Engineer) ಪದವಿ ಅಥವಾ ಡಿಪ್ಲೊಮಾ, ಮೈನಿಂಗ್ ಇಂಜಿನಿಯರಿಂಗ್/ಸಿವಿಲ್ ಎಂಜಿನಿಯರಿಂಗ್ನಲ್ಲಿ
(Civil Engineer) ಪದವಿ, ಜಿಯೋಮ್ಯಾಟಿಕ್ಸ್ನಲ್ಲಿ ಎಂ.ಟೆಕ್ (M.Tech)
• ಮೆಕ್ಯಾನಿಕಲ್: ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ (Mechanical Engineer) ಡಿಪ್ಲೊಮಾ, ಮೆಕ್ಯಾನಿಕಲ್ ಎಂಜಿನಿಯರಿಂಗ್/ಮೈನಿಂಗ್ ಮೆಷಿನರಿಯಲ್ಲಿ ಪದವಿ
ವಯೋಮಿತಿ: ಅಭ್ಯರ್ಥಿಯು 01-ಆಗಸ್ಟ್-2023 ರಂತೆ ಕನಿಷ್ಠ 23 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳನ್ನು ಹೊಂದಿರಬೇಕು.
ಸಕ್ಕರೆನಾಡು ಗೆಲ್ಲಲು ಸಿ.ಎಸ್.ಪುಟ್ಟರಾಜುವಿಗೆ ಗಾಳ ಹಾಕಿದ ಕೈ ನಾಯಕರು..!
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ : ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ (Offline) ಅರ್ಜಿ ಸಲ್ಲಿಸಬಹುದು. ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜನರಲ್ ಮ್ಯಾನೇಜರ್
(General Manager) ಹಿಂದೂಸ್ತಾನ್ ಕಾಪರ್ ಲಿಮಿಟೆಡ್, ತಾಮ್ರಾ ಭವನ, 1, ಅಶುತೋಷ್ ಚೌಧುರಿ ಅವೆನ್ಯೂ, ಕೋಲ್ಕತ್ತಾ (Kolkata)-700019 ಅರ್ಜಿಗಳನ್ನು ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-08-2023
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-Sep-2023
ಅಧಿಕೃತ ವೆಬ್ಸೈಟ್: hindustancopper.com