ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!

ಭಾರತದ ಪ್ರಮುಖ ಉದ್ಯಮ ಸಂಸ್ಥೆಗಳಾದ ಹಿಂದುಸ್ತಾನ್ ಪೆಟ್ರೋಲಿಯಮ್ (Hindustan Petroleum) ಮತ್ತು ಭಾರತ್ ಪೆಟ್ರೋಲಿಯಮ್ ಲಿಮಿಟೆಡ್ನಲ್ಲಿ ಖಾಲಿ ಇರುವ ಮ್ಯಾನೇಜರ್ (Manger) , ಇಂಜಿನಿಯರ್ ಮತ್ತು ಡೆಪ್ಯೂಟಿ ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನೇಮಕಾತಿ ಪ್ರಾಧಿಕಾರ : ಹಿಂದುಸ್ತಾನ್ ಪೆಟ್ರೋಲಿಯಮ್ ಮತ್ತು ಭಾರತ್ ಪೆಟ್ರೋಲಿಯಮ್ ಲಿಮಿಟೆಡ್
ಹುದ್ದೆಗಳ : ಮ್ಯಾನೇಜರ್, ಇಂಜಿನಿಯರ್, ಡೆಪ್ಯೂಟಿ ಇಂಜಿನಿಯರ್
ಮ್ಯಾನೇಜರ್ : 3
ಡೆಪ್ಯೂಟಿ ಮ್ಯಾನೇಜರ್ : 16
ಸೀನಿಯರ್ ಇಂಜಿನಿಯರ್ : 24
ಇಂಜಿನಿಯರ್ : 63
ಆಫೀಸರ್ (ಹಣಕಾಸು) : 3
ಆಫೀಸರ್ (ಮಾನವ ಸಂಪನ್ಮೂಲ) : 4
ಒಟ್ಟು ಹುದ್ದೆಗಳು : 113

ವಯೋಮಿತಿ : ಹುದ್ದೆವಾರು ವಯಸ್ಸು ನಿಗದಿಪಡಿಸಲಾಗಿದೆ. ವರ್ಗಾವಾರು ವಯೋಮಿತಿ ಸಡಿಲಿಕೆ ಇದ್ದು, ಒಬಿಸಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.

ವಿದ್ಯಾರ್ಹತೆ : ಬಿಇ / ಬಿ.ಟೆಕ್ / ಬಿಎಸ್ಸಿ / ಎಂಬಿಎ / ಸ್ನಾತಕೋತ್ತರ ಪದವಿ ಜತೆಗೆ, 4 ವರ್ಷ ಅನುಭವ ಹೊಂದಿರಬೇಕು.

ಈ ಹುದ್ದೆಗಳನ್ನು ಹಿಂದುಸ್ತಾನ್ ಪೆಟ್ರೋಲಿಯಮ್ ಮತ್ತು ಭಾರತ್ ಪೆಟ್ರೋಲಿಯಮ್ ಲಿಮಿಟೆಡ್ನ ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಟೆಲಿಕಾಂ ಮತ್ತು ಇನ್ಸ್ಟ್ರುಮೆಂಟೇಶನ್, ಹಣಕಾಸು, ಸಿವಿಲ್ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.

ವೇತನ :
ಮ್ಯಾನೇಜರ್ : 15 ಲಕ್ಷ. ವಾರ್ಷಿಕ
ಡೆಪ್ಯೂಟಿ ಮ್ಯಾನೇಜರ್ : 11 ಲಕ್ಷ. ವಾರ್ಷಿಕ
ಸೀನಿಯರ್ ಇಂಜಿನಿಯರ್ : 9 ಲಕ್ಷ. ವಾರ್ಷಿಕ
ಇಂಜಿನಿಯರ್ : 7 ಲಕ್ಷ. ವಾರ್ಷಿಕ

ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 06-09-2023
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26-09-2023
ಶಾರ್ಟ್ ಲಿಸ್ಟ್ ಆದವರನ್ನು ಇ-ಮೇಲ್ ಮೂಲಕ ಸಂಪರ್ಕಿಸಿ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಕೆ : ವೆಬ್ಸೈಟ್ (Website) ವಿಳಾಸ https://www.ihbl.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

Exit mobile version