ಅಂಚೆ ಇಲಾಖೆಯ 12,828 ಜಿಡಿಎಸ್ ಹುದ್ದೆಗಳ ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ

Job News: ಭಾರತೀಯ ಅಂಚೆ ಇಲಾಖೆಯು(Post Office) ಮೇ-2023 ಗ್ರಾಮೀಣ ಡಾಕ್ ಸೇವಕ್‌ – ಸ್ಪೆಷಿಯಲ್ ಸೈಕಲ್ ಇದೀಗ ಒಟ್ಟು ಅಧಿಸೂಚಿಸಿ (Jobs in Post Office) 12,828 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು

ಆದರೆ ಇದೀಗ ಈ ಹುದ್ದೆಗಳಿಗೆ ಅರ್ಜಿ ಹಾಕುವ ಸಂಬಂಧ ಗುಡ್‌ ನ್ಯೂಸ್‌ ಒಂದಿದೆ ಅದೇನೆಂದರೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಆಗಿದೆ ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಹಾಕಲು

ಇದೀಗ ಮತ್ತೆ ಅವಕಾಶ (Jobs in Post Office) ನೀಡಲಾಗಿದೆ.

ಈ ಹಿಂದೆ ಅಂಚೆ ಇಲಾಖೆ ಮೇ 22 ರಂದು ಆನ್‌ಲೈನ್‌(Online) ಅರ್ಜಿ ಲಿಂಕ್‌ ಬಿಡುಗಡೆ ಮಾಡಿ ಜೂನ್ 11 ರವರೆಗೆ ಮಾತ್ರ ಅರ್ಜಿಗೆ ಅವಕಾಶ ನೀಡಿತ್ತು. ಆದರೆ ಇದೀಗ ಆನ್‌ಲೈನ್‌ ಅರ್ಜಿಗೆ ಜೂನ್‌ 16 ರಿಂದ 23 ರವರೆಗೆ ಅವಕಾಶ ನೀಡುತ್ತಿದೆ.

ಆನ್‌ಲೈನ್‌ ರಿಜಿಸ್ಟ್ರೇಷನ್ ಗೆ ಸೂಚಿಸಲಾದ ಪರಿಷ್ಕೃತ ದಿನಾಂಕಗಳು :

ಅರ್ಜಿ ಸಲ್ಲಿಸಲು ಆನ್‌ಲೈನ್‌ ಲಿಂಕ್ ಬಿಡುಗಡೆ ದಿನಾಂಕ : 16-06-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 23-06-2023
ಆನ್‌ಲೈನ್‌ ಸಲ್ಲಿಕೆಯ ಅರ್ಜಿಯ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಕೊನೇ ಅವಕಾಶ : ಜೂನ್ 24 – 26, 2023.

ಅಂಚೆ ಇಲಾಖೆ ಹುದ್ದೆ ಹೆಸರು: ಗ್ರಾಮೀಣ ಡಾಕ್ ಸೇವಕ್ (ವಿಶೇಷ ನೇಮಕಾತಿ, ಮೇ, 2023)
ದೇಶದಾದ್ಯಂತ ಒಟ್ಟು ಹುದ್ದೆಗಳ ಸಂಖ್ಯೆ : 12,828
ಕರ್ನಾಟಕ ಅಂಚೆ ವೃತ್ತದಲ್ಲಿ ಇರುವ ಹುದ್ದೆಗಳ ಸಂಖ್ಯೆ : 48

ಗ್ರಾಮೀಣ ಡಾಕ್‌ ಸೇವಕ್ ಹುದ್ದೆಗೆ ಬೇಕಾಗುವ ಅರ್ಹತೆಗಳು :

ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸ್ ಆಗಿರಬೇಕು.
ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಅಭ್ಯರ್ಥಿಗಳಿಗೆ ಗೊತ್ತಿರಬೇಕು.
ಮುಖ್ಯವಾಗಿ ಅಧಿಕೃತ ಭಾಷೆ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಕರ್ನಾಟಕ ಅಭ್ಯರ್ಥಿಗಳಿಗೆ ತಿಳಿದಿರಬೇಕು.
ಈ ಮೇಲೆ ಸೂಚಿಸಿರುವ ಅರ್ಹತೆಗಳ ಜತೆಗೆ ಅಭ್ಯರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ಜ್ಞಾನ ಮತ್ತು ಅದರ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

ವಯಸ್ಸಿನ ಅರ್ಹತೆಗಳು :
ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು ಅಂದರೆ ಅಪ್ಲಿಕೇಶನ್ ಸಲ್ಲಿಸಲು ನಿಗದಿ ಪಡಿಸಿದ ಕೊನೆ ದಿನಾಂಕಕ್ಕೆ ಸರಿಯಾಗಿ ಇರಬೇಕು
ಗರಿಷ್ಠ 40 ವರ್ಷ ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿವೆ.

ಆಯ್ಕೆ ವಿಧಾನ :
ಆನ್‌ಲೈನ್‌ನಲ್ಲಿ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ನಿಯಮಾನುಸಾರವಾಗಿ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರು ಮಾಡಲಾಗುತ್ತದೆ. ಇದರಲ್ಲಿ ಶಾರ್ಟ್‌ ಲಿಸ್ಟ್‌ ಆದ ಅಭ್ಯರ್ಥಿಗಳ ಮೊದಲು ಮೂಲ ದಾಖಲೆಗಳನ್ನು ಪರಿಶೀಲಿಸಿ ನಂತರ ನೇಮಕಾತಿ ಆಯ್ಕೆಪಟ್ಟಿ ಸಿದ್ಧಪಡಿಸಲಾಗುತ್ತದೆ.

ಆನ್‌ಲೈನ್‌ ಅಪ್ಲಿಕೇಶನ್‌ ಹೇಗೆ ಸಲ್ಲಿಸಬೇಕು ?
ವೆಬ್‌ಸೈಟ್‌ ವಿಳಾಸ https://indiapostgdsonline.gov.in/Reg_validation.aspx ಕ್ಕೆ ಭೇಟಿ ನೀಡಿ
ಮೊದಲಿಗೆ ನೀವು ಇದರಲ್ಲಿ ರಿಜಿಸ್ಟ್ರೇಷನ್‌ ಮಾಡಬೇಕು ನಂತರ ನೀವು ಈ ವೆಬ್‌ಸೈಟ್‌ ನಲ್ಲಿ ಲಾಗಿನ್‌ ಆಗಿ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ರೂ.100 ಪಾವತಿಸಿ, ಅರ್ಜಿ ಪೂರ್ಣಗೊಳಿಸಬೇಕು.

ರಶ್ಮಿತಾ ಅನೀಶ್

Exit mobile version