ಉದ್ಯಾನನಗರಿ ಬೆಂಗಳೂರಿನಲ್ಲಿ ಜೋಡುಕರೆ ಕಂಬಳ ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿದೆ ಪ್ಯಾಲೇಸ್ ಗ್ರೌಂಡ್

Mangaluru: ಸಿಲಿಕಾನ್‌ ಸಿಟಿಯ (Silicon City) ಜನರನ್ನು ಬೆರಗುಗೊಳಿಸಲು ತುಳುನಾಡಿನ ಪ್ರಮುಖ ಜಾನಪದ ಕ್ರೀಡೆಯಾದ ಕಂಬಳ (jodukare kambala in bengaluru) ಅರಮನೆ ಮೈದಾನದಲ್ಲಿ

ಆಯೋಜನೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಎಲ್ಲಾ ಅಂದು ಕೊಂಡಂತೆ ನಡೆದರೆ ನವೆಂಬರ್ (November) ತಿಂಗಳಲ್ಲೇ ಅರಮನೆ ಮೈದಾನದಲ್ಲಿ ಜೋಡುಕರೆ ಕಂಬಳ ನಡೆಯುತ್ತದೆ. ಮೈಸೂರು

(Mysore) ಒಡೆಯರ್‌ ಕುಟುಂಬದೊಂದಿಗೆ ಮಾತುಕತೆ ನಡೆದಿದ್ದು, ಸರ್ಕಾರದ ಅನುಮತಿ ಸಿಗುವುದು ಮಾತ್ರ ಬಾಕಿಯಿದೆ. ಇನ್ನು ಕಂಬಳದ ಕೋಣಗಳನ್ನು ರೈಲಿನಲ್ಲಿ ಸಾಗಾಟ ಮಾಡಲು ಯೋಚಿಸಲಾಗಿದೆ.

ರಾಜ್ಯ ರಾಜಧಾನಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ (Bengaluru) ಕರುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸಬೇಕು ಎಂಬ ಹಲವು ವರ್ಷಗಳ ಕನಸೊಂದು ನನಸಾಗುವ ಹಂತಕ್ಕೆ ಬಂದಿದ್ದು,

ಈ ಮೂಲಕ ಕಂಬಳ ಕ್ಷೇತ್ರದಲ್ಲಿ ಹೊಸ ಇತಿಹಾಸವೊಂದು (jodukare kambala in bengaluru) ಸೃಷ್ಟಿಯಾಗಲಿದೆ.

ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ಕಂಬಳ ನಡೆಸುವ ಚಿಂತನೆ ನಡೆದಿದ್ದು, ಇದಕ್ಕೆ ಪೂರಕ ಸಿದ್ಧತೆಗಳು ಆರಂಭಗೊಂಡಿದೆ. ಕಂಬಳ ಕರೆಗೆ ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌

(Jayachamarajendra Wadiyar) ಜೋಡುಕರೆ ಕಂಬಳ ಎಂದು ಹೆಸರಿಡಲು ತೀರ್ಮಾನಿಸಲಾಗಿದ್ದು, ಸಾಮಾನ್ಯವಾಗಿ ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಕಾಸರಗೋಡು

(Kasaragod) ಜಿಲ್ಲೆಗಳಲ್ಲಿ ಕಂಬಳ ಕ್ರೀಡೆ ನಡೆಯುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಂಬಳ ಕ್ರೀಡೆ ಹೊಸ ಹಿರಿಮೆಯನ್ನು ಪಡೆದುಕೊಂಡಿದ್ದು, ಹೊರ ಜಿಲ್ಲೆ, ಹೊರರಾಜ್ಯ, ದೇಶ-ವಿದೇಶಗಳಿಂದ

ಪ್ರವಾಸಿಗರು ಬರುತ್ತಿದ್ದಾರೆ.

ಕಂಬಳ ಕ್ರೀಡೆಗೆ ಪೇಟಾ ಸಂಸ್ಥೆ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ (Supreme Court) ಮೆಟ್ಟಿಲೇರಿ ನಿಷೇಧವಾದ ಸಂದರ್ಭ ಇಡೀ ಕರುನಾಡು ಮಾತ್ರವಲ್ಲದೆ ದೇಶಾದ್ಯಂತ ಕಂಬಳ ಪರ ಹೋರಾಟ

ವ್ಯಕ್ತವಾಗಿತ್ತು. ಇದಾದ ಬಳಿಕ ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಕಂಬಳ ಕ್ರೀಡೆಗೆ ಗ್ರೀನ್‌ ಸಿಗ್ನಲ್‌ (Green Signal) ನೀಡಿದ್ದು, ಸುಪ್ರೀಂ ಕೋರ್ಟ್‌ ಕೂಡಾ ಪೇಟಾ (Peta) ಅರ್ಜಿಯನ್ನು ತಿರಸ್ಕರಿಸಿತ್ತು.

ಆದರೆ ಈ ಮೂಲಕ ಕಂಬಳ ಕ್ರೀಡೆಗೆ ದೊಡ್ಡ ಯಶಸ್ಸು ಕೂಡ ಸಿಕ್ಕಿತ್ತು. ಸುಮಾರು 3 ವರ್ಷಗಳಿಂದ ಕಂಬಳ ಕ್ರೀಡೆಯನ್ನು ರಾಜ್ಯ ರಾಜ್ಯಧಾನಿಯಲ್ಲಿ ಆಯೋಜಿಸಬೇಕೆಂಬ ಆಗ್ರಹ ವ್ಯಕ್ತವಾಗಿದ್ದು,

ಅದಕ್ಕೆ ಈಗ ಕಾಲಕೂಡಿ ಬಂದಂತಾಗಿದೆ.

ಬೆಂಗಳೂರಿನ (Bengaluru) ತುಳು ಕೂಟ ಈ ಬಾರಿ ಸುವರ್ಣ ಸಂಭ್ರಮದಲ್ಲಿದ್ದು, ಇದರ ಸವಿ ನೆನಪಿಗಾಗಿ ಕಂಬಳ ಆಯೋಜನೆಗೆ ನಿರ್ಧರಿಸಲಾಗಿದೆ. ಉಪ್ಪಿನಂಗಡಿ (Uppinangadi) ವಿಜಯ- ವಿಕ್ರಮ

ಜೋಡುಕರೆ ಕಂಬಳದ ರೂವಾರಿ, ಪುತ್ತೂರು (Puttur) ಶಾಸಕ ಅಶೋಕ್‌ ಕುಮಾರ್‌ ರೈ (Ashok Kumar Rai) ನೇತೃತ್ವದಲ್ಲಿ ಸಿದ್ಧತೆ ನಡೆಯುತ್ತಿದೆ. ಮೈಸೂರಿನ ಒಡೆಯರ್‌ (Wadiyar) ಕುಟುಂಬಕ್ಕೆ

ಸಂಬಂಧಪಟ್ಟ ಅರಮನೆ ಮೈದಾನದಲ್ಲಿ ಕಂಬಳ ಆಯೋಜನೆಗೆ ಮೈಸೂರು (Mysore) ರಾಜಮನೆತನದಿಂದ ಅನುಮತಿ ಸಿಕ್ಕಿದ್ದು, ಸಮಿತಿಯು ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿದ್ದು, ಕಂಬಳಕ್ಕೆ

ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ. ಸರ್ಕಾರ ಮಟ್ಟದಲ್ಲಿಅನುಮತಿ ಸಿಗಲು ಬಾಕಿಯಿದ್ದು, ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಭೇಟಿಯಾಗುವುದಾಗಿ ಸಮಿತಿ ತಿಳಿಸಿದೆ.

8 ಸುತ್ತಿನ ಕೋಣಗಳು:
ಕಳೆದ ಬಾರಿ ಅಂತಿಮ 8 ಸುತ್ತಿನಲ್ಲಿ ಸ್ಪರ್ಧಿಸಿದ ಕೋಣಗಳಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಕಂಬಳದ ಎಲ್ಲ ವಿಭಾಗದ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಕೋಣದ

ಯಜಮಾನರು,ಕಂಬಳ ಸಮಿತಿ, ಕಂಬಳ ಸಂಘಟಕರ ಜತೆ ಮಾತನಾಡಿ ಸಹಕಾರ ಕೋರಲಾಗುವುದು. ಶಾಸಕ ಅಶೋಕ್‌ ರೈ (Ashok Rai) ಅವರು ಕೋಣಗಳನ್ನು ರೈಲಿನಲ್ಲಿ ಸಾಗಾಟ ಮಾಡುವ ಬಗ್ಗೆಯೂ

ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.

ಪುತ್ತೂರು (Puttur) ಶಾಸಕರಾದ ಅಶೋಖ್ ರೈ ಅವರು ಜೋಡುಕರೆ ಕಂಬಳ ಕರೆಗೆ ಬೆಂಗಳೂರು (Bengaluru) ಅರಮನೆ ಮೈದಾನದಲ್ಲಿ ಪಾರ್ಕಿಂಗ್‌ (Parking) ವ್ಯವಸ್ಥೆ ಏಕಕಾಲಕ್ಕೆ 4 ಲಕ್ಷ ಮಂದಿ ಪ್ರೇಕ್ಷಕರಿಗೆ

ಬೇಕಾದಷ್ಟು ಜಾಗದ ವ್ಯವಸ್ಥೆಯಿದ್ದು, ತುಳುನಾಡಿನಲ್ಲಿ ಕಂಬಳ ಸೀಸನ್‌ (Season) ಆರಂಭವಾಗುವ ಮುನ್ನವೇ ನವೆಂಬರ್‌ನಲ್ಲಿ (November) ಕಂಬಳ ಆಯೋಜನೆಗೆ ಚಿಂತನೆ ನಡೆಸಿದೆ. ಅರಮನೆಯ ಮೈದಾನದ

ಪಕ್ಕದಲ್ಲೇ ಕೆರೆಯಿದ್ದು, ಆ ನೀರನ್ನು ತಪಾಸಣೆಗಾಗಿ ಲ್ಯಾಬ್‌ಗೆ (Lab) ಕಳುಹಿಸಲಾಗಿದೆ. ನಮ್ಮ ಕಂಬಳ ಹಿರಿಮೆಯನ್ನು ರಾಜ್ಯ, ದೇಶಕ್ಕೆ ಪರಿಚಯಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿ (Bengaluru) ಆಯೋಜಿಸುವ

ಉದ್ದೇಶ ಹೊಂದಿದ್ದು, ನಮ್ಮ ರಾಜ್ಯಕ್ಕೆ ಅನನ್ಯ ಕೊಡುಗೆ ನೀಡಿದ ಮೈಸೂರು ಒಡೆಯರ ಹೆಸರನ್ನೇ ಐತಿಹಾಸಿಕ ಕಂಬಳ (Kambala) ಕರೆಗೆ ನೀಡಲಿದ್ದು, ಈ ಕಾರ್ಯಕ್ರಮದಲ್ಲಿ ತುಳುನಾಡಿನ ಆಹಾರ,

ಸಂಸ್ಕೃತಿ-ಆಚಾರ ವಿಚಾರವನ್ನು ಪರಿಚಯಿಸುವ ಕೆಲಸವೂ ಸಾಗಲಿದೆ ಎಂದು ತಿಳಿಸಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version