ಫಿಪಾ ವಿಶ್ವಕಪ್‌ : ಕಾಮನಬಿಲ್ಲಿನ ಟಿ-ಶರ್ಟ್‌ ಧರಿಸಿದ್ದಕ್ಕಾಗಿ ಅಮೇರಿಕಾದ ಪತ್ರಕರ್ತನನ್ನು ಬಂಧಿಸಿದ ಕತಾರ್‌ ಪೊಲೀಸರು!

Doha : ಕತಾರ್‌ನಲ್ಲಿ(Qatar) ನಡೆಯುತ್ತಿರುವ ಫಿಪಾ ವಿಶ್ವಕಪ್‌ ಪಂದ್ಯದ(Fifa Worldcup) ವೇಳೆ ‘ಕಾಮನಬಿಲ್ಲಿನʼ ಟಿ-ಶರ್ಟ್‌ಧರಿಸಿದ್ದಕ್ಕಾಗಿ ಅಮೇರಿಕಾದ ಪತ್ರಕರ್ತನನ್ನು(Journalist Arrested By Police) ಕತಾರ್‌ ಪೊಲೀಸರು ಬಂಧಿಸಿದ್ದಾರೆ.

ಕತಾರ್ ಪೊಲೀಸರ ಈ ನಡೆಗೆ ವಿಶ್ವ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕತಾರ್‌ನಲ್ಲಿ ನಿನ್ನೆ ನಡೆದ ವೇಲ್ಸ್‌ ಮತ್ತು ಅಮೇರಿಕಾ ನಡುವಿನ ಪಂದ್ಯದ ವೇಳೆ ಕಾಮನಬಿಲ್ಲಿನ ಚಿತ್ರವಿರುವ ಟಿ-ಶರ್ಟ್‌ಧರಿಸಿ ಕ್ರೀಡಾ ವರದಿ ಮಾಡಲು ಕ್ರೀಡಾಂಗಣ ಪ್ರವೇಶಿಸಿದ ಅಮೇರಿಕಾದ ಕ್ರೀಡಾ ಪತ್ರಕರ್ತನನ್ನು(Journalist Arrested By Police) ಪೊಲೀಸರು ಬಂಧಿಸಿದ್ದಾರೆ ಎಂದು ಯುಎಸ್ ಕ್ರೀಡಾ ಪತ್ರಕರ್ತರೊಬ್ಬರು ಹೇಳಿದ್ದಾರೆ.

ಇನ್ನು ಸಲಿಂಗ ಸಂಬಂಧಗಳು ಕಾನೂನುಬಾಹಿರವಾಗಿರುವ ಕತಾರ್‌ ದೇಶದಲ್ಲಿ ಕಾಮನಬಿಲ್ಲಿನ ಬಣ್ಣವಿರುವ ಯಾವುದೇ ವಸ್ತು, ಬಟ್ಟೆ ಸೇರಿದಂತೆ ಅದನ್ನು ಬಳಸುವುದು ಅಪರಾಧವಾಗುತ್ತದೆ.

ಆದರೆ ಸಿಬಿಎಸ್ ಸ್ಪೋರ್ಟ್ಸ್‌ಗಾಗಿ ಕೆಲಸ ಮಾಡುವ ಮತ್ತು ಜನಪ್ರಿಯ ಸಬ್‌ಸ್ಟ್ಯಾಕ್ ಅಂಕಣವನ್ನು ಬರೆಯುವ ಗ್ರಾಂಟ್ ವಾಲ್ ಅವರು,

ಇದನ್ನೂ ಓದಿ : https://vijayatimes.com/sign-language-speaking-people/

ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಸ್ಟೇಡಿಯಂಗೆ ಪ್ರವೇಶಿಸುವ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿ ಅವರಿಗೆ ಪ್ರವೇಶವನ್ನು ನಿರಾಕರಿಸಿದರು ಮತ್ತು ಅವರ ಶರ್ಟ್ ಅನ್ನು ತೆಗೆಯುವಂತೆ ಹೇಳಿದರು.

ಇದನ್ನು ವಿರೋಧಿಸಿದ ಗ್ರಾಂಟ್ ವಾಲ್ ಅವರನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ಟ್ವೀಟ್ ಮಾಡುವಾಗ ನನ್ನ ಫೋನ್ ಕಿತ್ತುಕೊಳ್ಳಲಾಗಿದೆ ಎಂದು ಗ್ರಾಂಟ್ ವಾಲ್ ಆರೋಪಿಸಿದ್ದಾರೆ.

ನಂತರ ಆತನನ್ನು 25 ನಿಮಿಷಗಳ ಕಾಲ ಬಂಧಿಸಿ ಶರ್ಟ್ ತೆಗೆಯುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ನಂತರ ಭದ್ರತಾ ಕಮಾಂಡರ್ ಗ್ರಾಂಟ್ ವಾಲ್ ಬಳಿಗೆ ಬಂದು ಕ್ಷಮೆಯಾಚಿಸಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಹೇಳಲಾಗಿದೆ.

ನಂತರ ಫುಟ್‌ಬಾಲ್‌ನ ಅಂತರರಾಷ್ಟ್ರೀಯ ಆಡಳಿತ ಮಂಡಳಿಯಾದ ಫಿಫಾದ ಪ್ರತಿನಿಧಿ ಕ್ಷಮೆಯಾಚಿಸಿದರು ಎಂದು ಗ್ರಾಂಟ್ ವಾಲ್ ಅವರು, ದಿ ಗಾರ್ಡಿಯನ್ನಲ್ಲಿನ ತಮ್ಮ ಸಬ್‌ಸ್ಟಾಕ್ ಅಂಕಣದಲ್ಲಿ ಬರೆದಿದ್ದಾರೆ.

Exit mobile version