‘ನಿಮ್ಮ ಮಿತಿಯನ್ನು ಅರ್ಥಮಾಡಿಕೊಳ್ಳಿ’ ; ಪ್ರಜ್ವಲ್ ರೇವಣ್ಣಗೆ ನ್ಯಾಯಾಧೀಶರಿಂದ ಕ್ಲಾಸ್!

‌ಬೆಂಗಳೂರು : ಹೈಕೋರ್ಟ್ನಲ್ಲಿ (judge to Prajwal Revanna)ವಿಚಾರಣೆಗೆ ಹಾಜರಾದ ವೇಳೆ ಶಿಷ್ಟಾಚಾರ ಉಲ್ಲಂಘಿಸಿ, ತಮ್ಮ ವಕೀಲರ ಜೊತೆ ಮಾತನಾಡುತ್ತಾ ನಿಂತಿದ್ದ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಾಧೀಶರು ಕ್ಲಾಸ್ ತೆಗೆದುಕೊಂಡು, ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ.

ಕಳೆದ ಲೋಕಸಭಾ ಚುನಾವನೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಎ. ಮಂಜು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರ ನೇತೃತ್ವದ ಹೈಕೋರ್ಟ್ನ ಏಕಸದಸ್ಯ ಪೀಠ, ವಿಚಾರಣೆ ವೇಳೆ ಶಿಷ್ಟಾಚಾರ ಉಲ್ಲಂಘಿಸಿ,

ಅನಗತ್ಯವಾಗಿ ವಕೀಲರ ಜೊತೆ ಮಾತನಾಡುತ್ತಾ ನಿಂತಿದ್ದ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅವರನ್ನು ತರಾಟೆಗೆ ತೆಗೆದುಕೊಂಡು, “ನೀವು ನಿಮ್ಮ ಮಿತಿಯನ್ನು ಅರ್ಥಮಾಡಿಕೊಳ್ಳಿ.

ಹೊರಗೆ ಮಾತನಾಡಿದಂತೆ ನ್ಯಾಯಾಲಯದಲ್ಲಿ ಮಾತನಾಡಬೇಡಿ. ನ್ಯಾಯಾಲಯದ ಶಿಷ್ಟಾಚಾರವನ್ನು ಅನುಸರಿಸಿ.

ಇದನ್ನೂ ಓದಿ : https://vijayatimes.com/dks-inspired/

ಇಲ್ಲಿ ಅನಗತ್ಯವಾಗಿ ಮಾತನಾಡಲು ಹೋಗಬೇಡಿ” ಎಂದು ಎಚ್ಚರಿಕೆ (judge to Prajwal Revanna) ನೀಡಿ, ಕಟು ಮಾತುಗಳಲ್ಲೇ ನ್ಯಾಯಾಲಯದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತಿಳುವಳಿಕೆ ನೀಡಿದರು.

ಇನ್ನು ಚುನಾವಣಾ ಅಕ್ರಮದ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಾಪೀಠ ಅನೇಕ ಪ್ರಶ್ನೆಗಳನ್ನು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೇಳಿತು. ಅದರ ವಿವರ ಹೀಗಿದೆ,

ನ್ಯಾಯಾಲಯ : ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಪರ ಪ್ರಚಾರ ನಡೆಸಲು ಮಾಜಿ ಪ್ರಧಾನಿಗಳಾದ ದೇವೇಗೌಡರು(HD Devegowda) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಲಿಕ್ಯಾಪ್ಟರ್ನಲ್ಲಿ ಕಡೂರಿಗೆ ಬಂದಿದ್ದು ಸತ್ಯವೇ? ಈ ಪ್ರಯಾಣದ ಖರ್ಚು ವೆಚ್ಚಗಳನ್ನು ನೀವು ಚುನಾವಣಾ ಆಯೋಗಕ್ಕೆ ನೀಡಿದ್ದೀರಾ?

ಪ್ರಜ್ವಲ್ ರೇವಣ್ಣ : ಹೌದು, ಅವರಿಬ್ಬರು ಬಂದಿದ್ದು ಸತ್ಯ. ಅವರಿಬ್ಬರೂ ಸ್ಟಾರ್ ಪ್ರಚಾರಕರು. ಹೀಗಾಗಿ ಆಯೋಗದ ನಿಯಮಗಳ ಪ್ರಕಾರ ಅವರ ಖರ್ಚು ವೆಚ್ಚಗಳನ್ನು ನಮೂದು ಮಾಡಬೇಕಿಲ್ಲ.

ನ್ಯಾಯಾಲಯ : ಲಕ್ಸುರಿ ಕಾರು ಮತ್ತು ಇತರೆ ವಾಹನಗಳನ್ನು ಪ್ರಚಾರಕ್ಕಾಗಿ ಬಳಸಿದ್ದೀರಿ. ಆದರೆ ಇದರ ಖರ್ಚು ವೆಚ್ಚಗಳನ್ನು ತೋರಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇದು ನಿಜವೇ?

https://youtu.be/rksTJlv1t1Y ರಸ್ತೆ ಕಾಣದ ಯಲಹಂಕ ಕ್ಷೇತ್ರ!

ಪ್ರಜ್ವಲ್ ರೇವಣ್ಣ : ಇದು ಸುಳ್ಳು. ಈ ಕುರಿತ ಖರ್ಚು ವೆಚ್ಚಗಳನ್ನು ನಾನು ಆಯೋಗಕ್ಕೆ ನೀಡಿದ್ದೇನೆ. ಆಯೋಗವು ನನ್ನ ವಿವರಣೆಯನ್ನು ಒಪ್ಪಿಕೊಂಡಿದೆ.
Exit mobile version