ಕಾಬೂಲ್ :ತನ್ನ ನಾಗರಿಕರನ್ನು ಸ್ಥಳಾಂತರಿಸಲು ಹರಸಾಹಸ ಪಡುತ್ತಿರುವ ಅಮೆರಿಕಾ ಸರ್ಕಾರ

Afghan Commandos arrive to reinforce the security forces in Faizabad the capital of Badakhshan province, after Taliban captured neighborhood districts of Badakhshan recently, July 4, 2021. Afghanistan Ministry of Defence//Handout via REUTERS

ವಾಷಿಂಗ್ಟನ್‌: ಕಾಬೂಲ್ ವಿಮಾನ ನಿಲ್ದಾಣದ ಸುತ್ತ ಶಸ್ತ್ರಸಜ್ಜಿತ ತಾಲಿಬಾನಿಗಳು ರಚಿಸಿರುವ ಚೆಕ್‌ ಪೋಸ್ಟ್‌ಗಳು ಮತ್ತು ಸ್ಥಳಾಂತರಕ್ಕೆ ಅಗತ್ಯವಾದ ದಾಖಲಾತಿ ಪ್ರಕ್ರಿಯೆಗಳ ಅಡೆತಡೆಗಳಿಂದಾಗಿ ಅಫ್ಗಾನಿಸ್ತಾನದಿಂದ ತನ್ನ ದೇಶದ ನಾಗರಿಕರನ್ನು ಸ್ಥಳಾಂತರಿಸಲು ಅಮೆರಿಕ ಸರ್ಕಾರ ಹರಸಾಹಸ ಪಡುತ್ತಿದೆ.

ಆ. 31ರ ಒಳಗೆ ಅಫ್ಗಾನಿಸ್ತಾನದಿಂದ ಅಮೆರಿಕದ ನಾಗರಿಕರ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಬೇಕೆಂಬ ಗಡುವು ನಿಗದಿಗೊಳಿಸಲಾಗಿದೆ. ಆದರೆ, ಸ್ಥಳಾಂತರ ಪ್ರಕ್ರಿಯೆಗೆ ಅನುಮತಿ ನೀಡುವುದು ವಿಳಂಬವಾಗುತ್ತಿರುವ ಕಾರಣ, ಇನ್ನೂ ಸಾವಿರಾರು ಮಂದಿ ಅಮೆರಿಕನ್ನರು ಕಾಬೂಲ್‌ ನಿಲ್ದಾಣದಲ್ಲೇ ಬಾಕಿ ಉಳಿದಿದ್ದಾರೆ.

ನೂರಾರು ಅಫ್ಗಾನಿಸ್ತಾನದ ನಾಗರಿಕರಲ್ಲಿ ಸ್ಥಳಾಂತರಕ್ಕೆ ಅಗತ್ಯವಾದ ದಾಖಲಾತಿಗಳ ಕೊರತೆ ಅಥವಾ ಸ್ಥಳಾಂತರಕ್ಕೆ ಅನುಮತಿ ದೊರೆಯದ ಕಾರಣ, ಅಫ್ಗನ್‌ನಿಂದ ತೆರಳಲು ಸಿದ್ಧರಾಗಿದ್ದ ಸಾವಿರಾರು ಮಂದಿ ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ಉಳಿಯುವಂತಾಗಿದೆ.

ಇಂಥ ಅವ್ಯವಸ್ಥೆಯ ನಡುವೆ, ಗುರುವಾರ 6 ಸಾವಿರ ಮಂದಿಯನ್ನು ಮಿಲಿಟರಿ ವಿಮಾನಗಳಲ್ಲಿ ಕಾಬೂಲ್‌ನಿಂದ ಸ್ಥಳಾಂತರಿಸಲಾಗಿದೆ.

Exit mobile version