ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

Bengaluru : ರಿಯಲ್ ಸ್ಟಾರ್ ಉಪೇಂದ್ರ (kabzaa box office collection) ,ಕಿಚ್ಚ ಸುದೀಪ್ ,ಶಿವರಾಜಕುಮಾರ್ ಮತ್ತು ಶ್ರೀಯ ಶರಣ್ ಅಭಿನಯದ ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದ ಕಬ್ಜ

ಸಿನಿಮಾ ತಂಡ ಸಕ್ಸಸ್ ಪಾರ್ಟಿ ಕೂಡ ಮಾಡಿದೆ. ಆದರೆ ನಿಜವಾಗಿ ಕಬ್ಜ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ದೋಚಿದೆ ಎಂಬ ಪಕ್ಕಾ ಮಾಹಿತಿ ಎಲ್ಲೂ ಸಿಗುತ್ತಿಲ್ಲ. ಅದ್ರೂ ಕೆಲವರು ಅವರವರ ಇಷ್ಟಾನುಸಾರ ಹರಿಯಬಿದುತ್ತಿದ್ದಾರೆ.

ಕಬ್ಜ ರಿಯಲ್ ಕಲೆಕ್ಷನ್ ಎಷ್ಟು? ನೂರು ಕೋಟಿ ಕ್ಲಬ್ ಸೆರಿದೆಯ ಸಿನಿಮಾ?


ಕಬ್ಜ (Kabzaa) ಸಿನಿಮಾ ತಂಡವು ಇದುವರೆಗೆ ಎಲ್ಲೂ ತಮ್ಮ ಕಲೆಕ್ಷನ್ (Collection) ಬಗ್ಗೆ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ , ಅವರವರ ಇಷ್ಟಾನುಸಾರ ಬರೆಯುತ್ತಿದ್ದಾರೆ ಹೊರತು ಅಧಿಕೃತವಾಗಿ ಯಾವ ಮಾಹಿತಿಯೂ ಚಿತ್ರ ತಂಡ ಹಂಚಿಕೊಂಡಿಲ್ಲ,

ಸಕ್ಸಸ್ ಪಾರ್ಟಿ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಒಂದು ವಾರದ ನಂತರ ಅಧಿಕೃತ ಮಾಹಿತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂಬುವುದನ್ನು ಹೇಳಿದ್ದಾರೆ. ಇದರಿಂದ 100 ಕೋಟಿ ಕ್ಲಬ್ ಸೇರಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ .

ಶುಕ್ರವಾರದಿಂದ ,ಶುಕ್ರವಾರದವರೆಗಿನ ಕಲೆಕ್ಷನ್ ಮೊತ್ತವನ್ನು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳುವುದಾಗಿ ಸುದ್ದಿಗೋಷ್ಟಿಯಲ್ಲಿ ಆರ್.ಚಂದ್ರು ಅವರು ತಿಳಿಸಿದ್ದಾರೆ ಇದೆ ವೇಳೆ ಅವರು ಸಿನಿಮಾ ತೆರೆಯ ಮೇಲೆ

ಕಾಣುವುದಕ್ಕಿಂತ ಮುಂಚೆಯೇ ಯಶಸ್ಸನ್ನು ತಂದು ಕೊಟ್ಟಿದೆ ಎಂದು (kabzaa box office collection) ಹೇಳಿದರು.

ಇದನ್ನು ಓದಿ : ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು

ಜನರ ಮನಸ್ಸು ಕಬ್ಜ ಮಾಡಿದೆಯಾ ಕಬ್ಜ ಸಿನಿಮಾ?


ಕಾಂತಾರ (Kantara) ,ಕೆ.ಜಿ. ಎಫ್ (K.G.F) ನಂತೆಯೇ ವಿಶ್ವದಾದ್ಯಂತ ತೆರೆಕಂಡಿರುವ ಕಬ್ಜ ಸಿನಿಮಾವನ್ನು ಸಿನಿ ಪ್ರೇಕ್ಷಕರು ಸ್ವಾಗತಿಸಿದ್ದಾರೆ. ಅದರಲ್ಲೂ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಂಗೀತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಹಾಗೆಯೇ ಉಪೇಂದ್ರ ಅವರ ನಟನೆ ಮತ್ತು ಸುದೀಪ್ ಅವರ ಕಡಕ್ ಆಕ್ಷನ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೊಡ್ಮನೆ ಶಿವರಾಜಕುಮಾರ್ ರವರ ಎಂಟ್ರಿಯಂತು ಜನರು ಕಬ್ಜ -2 ಗೆ ಕಾಯುವಂತೆ ಮಾಡಿದೆ.

ಒಟ್ಟಾರೆ ಸಿನಿಮಾ ಬಗ್ಗೆ ಪ್ರೇಕ್ಷಕರ ಅಭಿಪ್ರಾಯದ ಪ್ರಕಾರ ಕುಟುಂಬ ಸಮೇತ ಹೋಗಿ ನೋಡಬಹುದಾದ ಸಿನಿಮಾ .


ಕತಾರ್ ನಲ್ಲಿ ಬಿಡುಗಡೆಗೊಂಡ ಕಬ್ಜ
ಕರ್ನಾಟಕ ಸಂಘ ಕತಾರ್ ಮತ್ತು ಕೊರ್ಸಿಸ್ ಕನ್ನಡ ಮೂವೀಸ್ ಸಹಯೋಗದಿಂದ ಹನ್ನೊಂದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದೆ , ಅಭಿಮಾನಿಗಳು ಕೇಕ್ (Cake) ಕತ್ತರಿಸಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು .

ಕತಾರ್ ನಲ್ಲಿ ಹೆಚ್ಚಿನ ಕನ್ನಡ ಸಿನಿಮಾಗಳು ತೆರೆ ಹೊಂದಲು ಎಲ್ಲ ಪ್ರಯತ್ನಳನ್ನೂ ಮಾಡುತ್ತೇವೆ ಎಂದು ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಇದೆ ವೇಳೆ ಹೇಳಿದರು

Exit mobile version