‘ಕನಕರತ್ನ ಪ್ರಶಸ್ತಿ’ಗೆ ಭಾಜನರಾದ ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು

ಖ್ಯಾತ ಪತ್ರಕರ್ತೆ, ವಿಜಯ ಟೈಮ್ಸ್ ಮುಖ್ಯಸ್ಥೆ ಶ್ರೀಮತಿ ವಿಜಯಲಕ್ಷ್ಮೀ ಶಿಬರೂರು #VijayalakshmiShibaruru ಅವರಿಗೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ರಾಯಚೂರು ವತಿಯಿಂದ ನೀಡಲಾಗುವ ‘ಕನಕರತ್ನ ಪ್ರಶಸ್ತಿ’ #KanakarathnaAward ಗೆ ಆಯ್ಕೆ ಮಾಡಲಾಗಿದ್ದು, ರಾಯಚೂರಿನಲ್ಲಿ ದಿನಾಂಕ 12-01-2024 ರಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು ಮತ್ತು ಪ್ರತಿ ಪ್ರಶಸ್ತಿಯು 50000 ರೂಗಳನ್ನು ಒಳಗೊಂಡಿದೆ.

ಇವರು ತಮ್ಮ ವೃತ್ತಿ ಜೀವನವನ್ನು ‘ಜನವಾಹಿನಿ ಪತ್ರಿಕೆ’ (Janavahini) ಯ ಸಂಪಾದಕರಾಗಿ ಆರಂಭಿಸಿದ್ದು, ತದ ನಂತರ ಆಕಾಶವಾಣಿಯ ರೇಡಿಯೋ ಪ್ರಸಾರಕರಾಗಿ ಸೇವೆ ಸಲ್ಲಿಸಿದರು. ಸಂಯುಕ್ತ ಕರ್ನಾಟಕ @SamyuktaKarnataka ಸೇರಿಕೊಂಡು ಆ ಪತ್ರಿಕೆಯ ಹಿರಿಯ ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಆ ಬಳಿಕ ಹೈದರಾಬಾದ್ನಲ್ಲಿ ಹಾಗೂ ಬೆಂಗಳೂರಿನಲ್ಲಿ ETV ಕನ್ನಡಕ್ಕೆ ಸೇರಿಕೊಂಡು ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದು, ಇನ್ನು ಹಲವಾರು ಟಿ.ವಿ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ (Kaginele Mahasansthan of Kanaka Gurupeeth) (ಕಲಬುರುಗಿ ವಿಭಾಗ) ಇವರು ನೀಡುವ ವಾರ್ಷಿಕ ಪ್ರಶಸ್ತಿಗಳಾದ ಹಾಲುಮತ ಭಾಸ್ಕರ, ಸಿದ್ದಶ್ರೀ ಮತ್ತು ಕನಕರತ್ನ ಪ್ರಶಸ್ತಿಗಳು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಮಾರ್ಗಸೂಚಿಗಳ ಅನ್ವಯ ಆಯ್ಕೆ ಸಮಿತಿಯು 2023ನೇ ಸಾಲಿನ ಹಾಲುಮತ ಭಾಸ್ಕರ ಪ್ರಶಸ್ತಿಗೆ ಹೈದರಾಬಾದಿನ ರಾಷ್ಟ್ರೀಯವಾದಿ ಡಾ.ಕಾಂಚ ಇಳಯ್ಯ ಶೆಫರ್ಡ (Dr. Kancha Ilayya Shepherd) ಅವರನ್ನು ಆಯ್ಕೆಮಾಡಲಾಗಿದೆ.

‘ಕನಕರತ್ನ ಪ್ರಶಸ್ತಿ’ಗೆ ಮಂಗಳೂರಿನ (Mangalore) ತನಿಖಾ ವರದಿಗಾರರಾದ ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು ಅವರನ್ನು ಹಾಗೂ ‘ಸಿದ್ದಶ್ರೀ ಪ್ರಶಸ್ತಿ’ಗೆ ಮುದುಮಲೈ ರಾಷ್ಟೀಯ ಉದ್ಯಾನದ ಮಾವುತರಾದ ಶ್ರೀ ಬೊಮ್ಮನ್ ಮತ್ತು ಶ್ರೀಮತಿ ಬೆಳ್ಳಿಬೊಮ್ಮನ್ (Mr. Bomman and Mrs. Bellibomman) ಇವರುಗಳನ್ನು ಆಯಾ ಕ್ಷೇತ್ರಗಳ ಸಾಧನೆ ಮತ್ತು ಕೊಡುಗೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.

ಆಯ್ಕೆ ಸಮಿತಿಯಲ್ಲಿ ಸನ್ಮಾನ್ಯರಾದ ಶ್ರೀ ವಿಶ್ವನಾಥ ಎಂ.ಎಲ್.ಸಿ (Shri Vishwanath M.L.C) ಅವರು ಕನ್ನಡ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಕೆ ಎಂ ಮೇತ್ರಿ ಅವರು ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವರು, ಮಹಿಳಾ ಅಧ್ಯಯನದ ಪ್ರಾಧ್ಯಾಪಕರು ಆಗಿದ್ದ ಪ್ರೊ.ಆರ್ ಸುನಂದಮ್ಮ (Prof. R Sunandamma) ಇದ್ದರು.

ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಇದೇ ತಿಂಗಳು 12-01-2024 ರಿಂದ 14-01-2024ರ ವರೆಗೆ ನಡೆಯುವ ಹಾಲುಮತ ಸಂಸ್ಕೃತಿ ವೈಭವ-2024ಕಾಯಕ್ರಮದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ – ತಿಂಥಣಿಬ್ರಿಜ್, ದೇವದುರ್ಗ ತಾಲ್ಲೂಕು, ರಾಯಚೂರು (Raichur) ಜಿಲ್ಲೆಯಲ್ಲಿ ಜರುಗಲಿದೆ.

ಭವ್ಯಶ್ರೀ ಆರ್ ಜೆ

Exit mobile version