2022 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸ್ಯಾಂಡಲ್ ವುಡ್ ಚಿತ್ರಲೋಕದ ಹಿನ್ನೋಟ

Sandalwood : ಕನ್ನಡ ಚಿತ್ರರಂಗದ ಪಾಲಿಗೆ  2022ನೇ ವರ್ಷ ಅದ್ಭುತವಾದ ವರ್ಷವಾಗಿತ್ತು. ಕಳೆದ ಅನೇಕ ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ನೆಪ ಮಾತ್ರಕ್ಕೆ ಸೀಮಿತವಾಗಿದ್ದ ಕನ್ನಡ ಚಿತ್ರರಂಗ (kannada industry sandalwood actors)

ಈ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಬೇರೆ ಭಾಷೆಗಳ ಸಿನಿಪ್ರಿಯರ ಮನಸ್ಸಲ್ಲೂ ಛಾಪು (kannada industry sandalwood actors) ಮೂಡಿಸಿದೆ.

2022ರ ಜನವರಿಯಿಂದ ಡಿಸೆಂಬರವರೆಗೆ (ಸ್ಯಾಂಡಲ್ ವುಡ್ ಚಿತ್ರಲೋಕದ ಹಿನ್ನೋಟ) ಬಿಡುಗಡೆಯಾದ ಚಿತ್ರಗಳ ಹಿನ್ನೋಟವನ್ನೋಮ್ಮೆ ನೋಡುವುದಾದರೇ..

ಜನವರಿ : 2022ನೇ ವರ್ಷದ ಆರಂಭದಲ್ಲೇ  ಚಿತ್ರಮಂದಿರಕ್ಕೆ ಬಂದ ಮೊದಲ ಸಿನಿಮಾ ಲೂಸ್ ಮಾದ ಯೋಗಿ (Los Mada Yogi) ಅಭಿನಯದ ‘ಒಂಬತ್ತನೇ ದಿಕ್ಕು’.

ಆದರೆ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿತು. ನಂತರ ಬಂದ ಸ್ಫೂಕೀ ಕಾಲೇಜ್ ಅನೇಕರಿಗೆ ಗೊತ್ತೇ ಆಗಲಿಲ್ಲ.

ಫೆಬ್ರವರಿ :  ಭಾವಚಿತ್ರ, ಗರುಡಾಕ್ಷ, ಮಹಾಪುರುಷ, ಒಪ್ಪಂದ, ಬಹುಕೃತ ವೇಷಂ,  ಒನ್ ಕಟ್ ಟೂ ಕಟ್, ಹಳ್ಳಿ ಹೈಕ್ಳ ಪ್ಯಾಟೆ ಲೈಫು, ಲವ್ ಮಾಕಟೇಲ್ 2, ರೌಡಿ ಬೇಬಿ, ಫ್ಯಾಮಿಲಿ ಪ್ಯಾಕ್ಯ್, ಮಹಾರುದ್ರಂ, ಗಿಲ್ಕಿ, ವರದ,  ಬೈಟು ಲವ್ , ಓಲ್ಡ್ ಮಾಂಕ್ , ಏಕ್ ಲವ್ ಯಾ ಚಿತ್ರಗಳು ಬಿಡುಗಡೆಯಾದವು. 

ಇದರಲ್ಲಿ  ಲವ್ ಮಾಕಟೇಲ್ 2 ಚಿತ್ರ ಹೊರತುಪಡಿಸಿ ಉಳಿದ ಯಾವ ಚಿತ್ರವು ಹೆಚ್ಚು ಸದ್ದು ಮಾಡಲಿಲ್ಲ.

ಇದನ್ನೂ ಓದಿ : https://vijayatimes.com/new-year-health-formulas/

ಮಾರ್ಚ್ : ಯೆಲ್ಲೋ ಬೋರ್ಡ್,  ಜೇಮ್ಸ್, ಕನ್ನೇರಿ, ಡಿಯರ್ ಸತ್ಯ, ಶುಗರ್ ಫ್ಯಾಕ್ಟರಿ, ಮೋಕ್ಷ, ಅಬ್ಬಬ್ಬ, ರಾಧೆ ಶ್ಯಾಮ್ ಚಿತ್ರಗಳು ಬಿಡುಗಡೆಯಾದವು.

ಇದರಲ್ಲಿ ದಿವಂಗತ ಪುನೀತ್ ರಾಜಕುಮಾರ್(Puneeth Rajkumar) ಅಭಿನಯದ ಜೇಮ್ಸ್ ಚಿತ್ರ 100 ಕೋಟಿ ಗಳಿಕೆ ಕಂಡಿತು.

ಏಫ್ರಿಲ್ : ಹೋಮ್ ಮಿನಿಸ್ಟರ್, ಲೋಕಲ್ ಟ್ರೈನ್, ತಲೆದಂಡ, ಶೋಕಿವಾಲ ಚಿತ್ರಗಳು  ಗಮನ ಸೆಳೆಯಲಿಲ್ಲ. 

ಆದರೆ ಏಪ್ರಿಲ್ 14 ರಂದು ಬಿಡುಗಡೆಯಾದ ಯಶ್ ಅಭಿನಯದ ಕೆಜಿಎಫ್(KGF): ಚಾಪ್ಟರ್ 2  ಇಡೀ ಭಾರತೀಯ ಚಿತ್ರರಂಗವನ್ನೇ ಅಚ್ಚರಿಗೊಳಿಸಿ, 1300ಕೋಟಿ ರೂ. ಗಳಿಕೆ ಕಂಡಿತು.

ಮೇ :  ಪೆಟ್ರೋಮ್ಯಾಕ್ಸ್, ತೋತಾಪುರಿ, ಬೈರಾಗಿ, ರವಿ ಬೋಪಣ್ಣ,ಮಾನ್ಸೂನ್ ರಾಗ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಗೆಲುವು ಪಡೆಯಲಿಲ್ಲ.

ಆದರೆ ಚಾರ್ಲಿ(Charli) 777 ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿ 150 ಕೋಟಿ ಗಳಿಕೆ ಕಂಡಿತು.

ಜೂನ್ ನಿಂದ ಡಿಸೆಂಬರ್: ಸುದೀಪ್(Sudeep) ಅಭಿನಯದ ವಿಕ್ರಾಂತ್ ರೋಣ  200 ಕೋಟಿ ಗಳಿಸಿ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿತು.

ಆದರೆ   ಗಾಳಿಪಟ 2 ಸಿನಿಮಾ ಸೋಲಲಿಲ್ಲ ಹಾಗಂತ ಗೆಲುವು ಸಾಧಿಸಿತು ಎನ್ನಲೂ ಸಾಧ್ಯವಾಗಲಿಲ್ಲ.  ಇನ್ನು ಗುರು ಶಿಷ್ಯರು ಹಾಗು ಲವ್ 360 ಡಿಗ್ರಿ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದವು.

ಆದರೆ ಕಾಂತಾರ (Kantara) ಚಿತ್ರ ಬಿಡುಗಡೆಯಾದ ನಂತರ ಈ ಚಿತ್ರಗಳು ಹೆಚ್ಚು ಸದ್ದು ಮಾಡಲಿಲ್ಲ. ಕಾಂತಾರ ಚಿತ್ರ  400 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಲವು ದಾಖಲೆಗಳನ್ನು ಬರೆಯಿತು.

ಇನ್ನು ಪುನೀತ್ ರಾಜ್ಕುಮಾರ್ ಅವರ ʼಗಂಧದ ಗುಡಿʼ ಉತ್ತಮ ಪ್ರದರ್ಶನ ಕಂಡು 25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು.

ಇದನ್ನೂ ಓದಿ : https://vijayatimes.com/busdriver-statement-on-rishabpant-acceident/

ಇನ್ನೊಂದೆಡೆ ಯೆಲ್ಲೋ ಗ್ಯಾಂಗ್ಸ್, ಖಾಸಗಿ ಪುಟಗಳು, ಧರಣಿ ಮಂಡಲ ಮಧ್ಯದೊಳಗೆ, ಬನಾರಸ್, ಕಂಬ್ಳಿಹುಳ ಚಿತ್ರಗಳು  ಉತ್ತಮ ಪ್ರತಿಕ್ರಿಯೆ ಪಡೆದರೂ  ಕಲೆಕ್ಷನ್ನಲ್ಲಿ ಸೋತವು. 

ತಿಮ್ಮಯ್ಯ & ತಿಮ್ಮಯ್ಯ ದಿಲ್ ಪಸಂದ್, ರಾಣ, ತ್ರಿಬಲ್ ರೈಡಿಂಗ್, ಪದವಿ ಪೂರ್ವ,  ವಿಜಯಾನಂದ, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ,

ನಾನು  ಮತ್ತು ಸರೋಜಾ ಚಿತ್ರಗಳು ಡಿಸೆಂಬರನಲ್ಲಿ ಬಿಡುಗಡೆ ಆಗಿವೆ. ಆದರೆ ವೇದ (Veda) ಸಿನಿಮಾ ಮಾತ್ರ ಹೆಚ್ಚು ಸದ್ದು ಮಾಡುತ್ತಿದೆ. ಉಳಿದಂತೆ ಯಾವ ಚಿತ್ರವು ಹೆಚ್ಚು ನಿರೀಕ್ಷೆ ಮೂಡಿಸಿಲ್ಲ.
Exit mobile version