ಉದ್ಯಮಿ ಮನೆಯ ಸಂಪತ್ತು ನೋಡಿ ಎಸಿಬಿ ಅಧಿಕಾರಿಗಳೇ ಶಾಕ್

ಕಾನ್ಪುರ ಡಿ 24 : ಉತ್ತರ ಪ್ರದೇಶದ ಉದ್ಯಮಿಯೊಬ್ಬರ ಮನೆಯಲ್ಲಿನ ಸಂಪತ್ತನ್ನು ನೋಡಿ ಎಸಿಬಿ ಅಧಿಕಾರಗಲೇ ಶಾಕ್‌ ಆಗಿದ್ದಾರೆ.

ಉದ್ಯಮಿ ಮನೆಯ ಉತ್ತರ ಪ್ರದೇಶದ ಕಾನ್ಪುರದ ಉದ್ಯಮಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಮನೆಯ ತುಂಬಾ ನೋಟಿನ ಕಂತೆ ನೋಡಿ ಶಾಕ್ ಆಗಿದ್ದಾರೆ. 150 ಕೋಟಿ ರೂ. ಸಿಕ್ಕಿದರೂ ಇನ್ನೂ ಲೆಕ್ಕ ಮಾಡುವುದು ನಿಂತಿಲ್ಲ!

ಹೌದು, ಐಟಿ ಅಧಿಕಾರಿಗಳು ಮನೆಯ ಎರಡು ವಾರ್ಡ್ ರೂಬ್ ಗಳಲ್ಲಿ ತುಂಬಿಸಿಟ್ಟಿದ್ದ ನೋಟಿನ ಕಂತೆಗಳನ್ನು ಗುಡ್ಡೆ ಹಾಕಿಕೊಂಡು ನೋಟು ಎಣಿಸುವ ಯಂತ್ರದ ಸಹಾಯದಿಂದ ಲೆಕ್ಕ ಹಾಕುತ್ತಿದ್ದಾರೆ. ಇದುವರೆಗೆ 150 ಕೋಟಿ ರೂ. ಲೆಕ್ಕಕ್ಕೆ ಸಿಕ್ಕಿದ್ದು ಇನ್ನೂ ಪತ್ತೆ ಯಾರ್ಯ ಮುಂದುವರಿಸಿದ್ದಾರೆ.

ನೋಟಿನ ಕಂತೆಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ಸುತ್ತಿ ಹಳದಿ ಬಣ್ಣದ ಟೇಪ್ ಗಳಲ್ಲಿ ಮುಚ್ಚಲಾಗಿತ್ತು. ಈ ರೀತಿ ಸುಮಾರು 30 ನೋಟಿನ ಕಂತೆ ಸಿಕ್ಕಿದೆ. ಮನೆಯ ಮಧ್ಯದ ಹಾಲ್ ನಲ್ಲಿ ಬಟ್ಟೆ ಹಾಸಿ ನೆಲದ ಮೇಲೆ 2 ನೋಟಿನ ಗುಡ್ಡೆ ಪೇರಿಸಿರುವ ಅಧಿಕಾರಿಗಳು ಮೂರು ನೋಟು ಎಣಿಸುವ ಯಂತ್ರದ ಸಹಾಯದಿಂದ ಲೆಕ್ಕ ಮಾಡುತ್ತಿದ್ದಾರೆ. ಐಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇನ್ನು ಕೂಡ ಪರಿಶೀಲನೆ ನಡೆಸಿದ್ದಾರೆ. ಕಾನ್ಪುರ ಅಲ್ಲದೇ ಮುಂಬೈ ಮತ್ತು ಗುಜರಾತ್ ನಲ್ಲೂ ಈತಹಣ ಇಟ್ಟಿರುವ ಸಾಧ್ಯತೆ ಇದ್ದು, ಅಲ್ಲಿಯೂ ಪರಿಶೀಲನೆ ನಡೆಸಲಿದ್ದಾರೆ.

ನಕಲಿ ಇ-ಬಿಲ್ ಮತ್ತು ಬಿಲ್ ರಹಿತ ಇನ್ ವಾಯ್ಸ್ ಗಳನ್ನು ರೂಪಿಸಲಾಗಿದೆ. ಈ ರೀತಿ ನಕಲಿ ಬಿಲ್ ಗಳನ್ನು ವಲಸೆಕಂಪನಿಗಳ ಹೆಸರಿನಲ್ಲಿ ತಯಾರಿಸಲಾಗಿದೆ. ಪ್ರತಿ ನಕಲಿ ಬಿಲ್ ಗಳ ಮೌಲ್ಯವೇ 50 ಸಾವಿರ ರೂ. ಆಗಿದ್ದು, ಈ ರೀತಿ ಸುಮಾರು 200 ನಕಲಿ ಬಿಲ್ ಗಳು ಪತ್ತೆಯಾಗಿವೆ. ಹಣ ಸಾಗಾಟಕ್ಕೆ ಬಳಸಲಾಗುತ್ತಿದ್ದ 4 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

Exit mobile version